ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕ್ 80.75 ರೂ. – ಲಕ್ಷ ಲಾಭ ಎಂ,ಆರ್ ಪಾಟೀಲ್ ಅಭಿಮತ.
ಇಳಕಲ್ ಸ.14

ಇಲ್ಲಿನ ಎ.ಪಿ.ಎಂ.ಸಿ ಆವರಣದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಇಲಕಲ್ ಬ್ಯಾಂಕ್ ನಲ್ಲಿ 16 ನೇ. ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.

ಬ್ಯಾಂಕಿನಲ್ಲಿ ಶೇರುದಾರ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿದರು ನಂತರ ಪತ್ರಕರ್ತರಿಗೆ ಗೌರವಿಸಿದರು. ಬಾಗಲಕೋಟ ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಅಭಿವೃದ್ಧಿ ಹೊಂದಿದ ಬ್ಯಾಂಕುಗಳಲ್ಲಿ ನಮ್ಮ ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕ್ ಮಾದರಿ ಯಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಎಮ್,ಆರ್ ಪಾಟೀಲ್ ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ವಸಂತ ಗುಡೂರು ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ ಆರಂಭದ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳಿಂದ ಅಭಿವೃದ್ಧಿ ಪಥದತ್ತ ಸಾಗಿದ ಬ್ಯಾಂಕ್ ನಿರಂತರವಾಗಿ 16 ವರ್ಷಗಳಿಂದ ಲಾಭಾಂಶ ದತ್ತ ಸಾಗುತ್ತಿರುವುದು ಖುಷಿ ತಂದಿದೆ ಎಂದರು.

ನಿರ್ದೇಶಕರಾದ ಅರವಿಂದಗೌಡ.ಗೌಡರ. ಮಾತನಾಡಿ ಪ್ರತಿ ವರ್ಷ ನಮ್ಮ ಬ್ಯಾಂಕ್ ಅಭಿವೃದ್ಧಿ ಹೊಂದಲು ಬ್ಯಾಂಕಿನ ಶೇರುದಾರರೇ ಹಾಗೂ ನೌಕರರು ಮುಖ್ಯ ಕಾರಣವಾಗಿದ್ದು ಪದಾಧಿಕಾರಿಗಳ ಕೆಲಸವನ್ನು ನಾವೆಲ್ಲರೂ ಸರಿಯಾಗಿ ನಿರ್ವಹಿಸುತ್ತಿರುವುದರಿಂದ ಬ್ಯಾಂಕ್ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.


ವೇದಿಕೆ ಮೇಲೆ ನಿರ್ದೇಶಕರಾದ ಬಸವರಾಜ ನಾಡಗೌಡ, ರಮೇಶ ತಳವಾರ. ಮಲ್ಲನಗೌಡ ಗೌಡರ. ಬಸವರಾಜ ಪಾಟೀಲ. ಅಶೋಕ ಕಂದಕೂರ, ದೇವರಡ್ಡೆಪ್ಪ ನಾಗರಾಳ, ನಿಂಗನಗೌಡ ಪಾಟೀಲ್, ಸಂತೋಷ ಬಂಡರಗಲ್, ಶಶಿಕುಮಾರ ಗೂಗಿಹಾಳ. ಕಂಠೆಪ್ಪ ಲಕ್ಕುಂಡಿ. ಹೇಮಣ್ಣ ಚಲವಾದಿ. ಸುಮಾ ಮಾಕಾಪೂರ. ಕಾವೇರಿ ಕವಡಿಮಟ್ಟಿ, ಪೂರ್ಣಿಮಾ ಚಳಗೇರಿ. ಇದ್ದರು ಕಾರ್ಯಕ್ರಮದ ನಿರೂಪಣೆ ಮಹಾಂತೇಶ ಮಾಕಾಪುರ ಮಾಡಿದರು ಎಂದು ವರದಿಯಾಗಿದೆ.

