ಬುದ್ದ, ಬಸವ, ಅಂಬೇಡ್ಕರ್ ಕನಸು ನನಸು ಮಾಡೋಣ – ರವಿ.ಬೋಸರಾಜು.

ರಾಯಚೂರು ಸ.15

ಬುದ್ದ, ಬಸವ, ಅಂಬೇಡ್ಕರ್, ಅವರ ಸಮ ಸಮಾಜದ ನಿರ್ಮಾಣದ‌ ಕನಸನ್ನು ನಾವೆಲ್ಲರು ಒಗ್ಗಟ್ಟಾಗಿ ನನಸು ಮಾಡಬೇಕಾದ ಜವಾಬ್ದಾರಿ‌ ನಮ್ಮೆಲ್ಲರ ಮೇಲಿದೆ. ರಾಯಚೂರಿನಲ್ಲಿ ಎರಡು‌ ನದಿ‌ ಹರಿತಿವೆ, ಉದ್ಯತ್ ಉತ್ಪಾದನೆ ಇದೆ, ರಾಜ್ಯಕ್ಕೆ ಅನ್ನ, ಚಿನ್ನ, ಹತ್ತಿ ನೀಡುತ್ತಿದ್ದೇವೆ, 6 ಲಕ್ಷ ಎಕರೆ ಪ್ರದೇಶ ನೀರಾಡುವ ಟಿ.ಎಲ್ ಬಿಸಿ, ಎನ್.ಆರ್.ಬಿ.ಥ್ಯಸಿ ಕಾಲುವೆಗಳಿವೆ ಈ ಎಲ್ಲಾ ಸಂಪನ್ಮೂಲಗಳಿದ್ದರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಹೋಗಿಲ್ಲ. ಇದು ನಮ್ಮೆಲ್ಲರ ದುರಾದೃಷ್ಟ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ತಿಳಿಸಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬಸವೇಶ್ವರ ಸಭಾ ಭವನದಲ್ಲಿ ಜಾಗೃತ ಕರ್ನಾಟಕ ಹಾಗೂ ರಾಯಚೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಮತ್ತು ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನದ ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2 ಎಂಬ ಶೀರ್ಷಿಕೆ ಅಡಿಯಲ್ಲಿ ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ನಾವೆಲ್ಲರು‌ ಶೈಕ್ಷಣಿಕ, ಸಾಮಾಜಿ, ಆರ್ಥಿಕವಾಗಿ ಸೇರಿ ರಾಜಕೀಯವಾಗಿ ಪ್ರಾತಿನಿಧ್ಯ ವಂಚಿತವಾಗಿರುವುದರಿಂದ ಈ ಭಾಗ ಹಿಂದುಳಿಯಲು ಕಾರಣರಾಗಿದ್ದೇವೆ. ಈ ಹಿಂದುಳಿದಿರುವಿಕೆಯಲ್ಲಿ ಎಲ್ಲಾ ಪಕ್ಷಗಳ ಧೋರಣೆಯೂ ಇದೆ ಇದನ್ನು ಎಲ್ಲಾರು ಒಪ್ಪಿ ಕೊಳ್ಳಬೇಕು. ಇದರಿಂದ ಈ ಭಾಗದಲ್ಲಿ ಸಾಮಾಜಿಕ ಅಸಮತೋಲನೆಯನ್ನು ಕಾಣುತ್ತಿದ್ದೇವೆ ಎಂದರು.

1953 ರಲ್ಲಿ ಹಿಂದುಳಿದ ವರ್ಗದ ಸಮೀಕ್ಷೆಯ ವರದಿಯನ್ನು ಒಪ್ಪದ ಕಾರಣಕ್ಕೆ ನಾವು ತಪ್ಪನ್ನು ಒಪ್ಪಿ ಕೊಳ್ಳುತ್ತೇವೆ. ಹಿಂದುಳಿದವರಿಗೆ ಕಾನೂನಾತ್ಮಕವಾಗಿ ಸಿಗಬೇಕಾದ ಅವಕಾಶಗಳು ವಂಚಿತವಾಗಿದ್ದೇವೆ.

1925 ರಲ್ಲಿ ಅಖಂಡ ಭಾರತ, ಸಮೃದ್ಧ ಭಾರತ ಕಟ್ಟಬೇಕು ಎಂದು ಹೊರಟ ಆರ್.ಎಸ್.ಎಸ್ 100 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಅವರಿಗೆ ಭಾರತದ ಸ್ವತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ ಎಂಬ ಪ್ರಶ್ನೆ ಕೇಳಬೇಕು. ಧರ್ಮದ ಆದರದಲ್ಲಿ ನಾವೆಲ್ಲ ಹಿಂದು ಒಂದು ಎಂದು ಮಾತನಾಡುವ ಆರ್.ಎಸ್.ಎಸ್ ಯಾರನ್ನು ಒಗ್ಗೂಡಿಸಿದೆ ಯಾರನ್ನು ಬೇರ್ಪಡಿಸಿದಾರೆ ಎಂಬ ಆತ್ಮಾವಲೋಕನ ಮಾಡಿ ಕೊಳ್ಳಬೇಕು. ಡಾ, ಬಾಬಾ ಸಾಹೇಬ್ ಅವರು ಹಿಂದುವಾಗಿ ಹುಟ್ಟಿದ್ದೇನೆ ಆದರೇ ಹಿಂದುವಾಗಿ ಸಾಯಲಾರೆ ಎಂದು ಅವರ ನೋವನ್ನು ತೋಡಿಕೊಂಡಿದ್ದರು. ಭೌದ್ಧ ಧರ್ಮಕ್ಕೆ ಸೇರಿದರು ಅಂದು ಆರ್.ಎಸ್.ಎಸ್ ಗೆ ಇದು ಎಚ್ಚರಿಕೆ ಸಂದೇಶವಾಗಿತ್ತು.

1979 ರಲ್ಲಿ ಹಿಂದುಳಿದ ವರ್ಗದ ಮಂಡಲ್ ಕಮಿಷನ್ ವರದಿಯನ್ನು ಜಾರಿಗೆ ತಂದ ಬಿಜೆಪಿ ಅನುಷ್ಠಾನ ಗೊಳಿಸುವಲ್ಲಿ ತಾವೇ ವಿರೋಧಿಸಿದ್ದರು‌. ನಂತರ ಪಿ.ವಿ‌ ನರಸಿಂಹ ರಾವ್ ಅವರು ಅನುಷ್ಠಾನ ಗೊಳಿಸಿದ ಇತಿಹಾಸವಿದೆ ಎಂದರು.

ಹಿಂದುಳಿದ ವರ್ಗದ ಸಮುದಾಯಗಳಿಗೆ ಹಾಗೂ ಎಲ್ಲಾ ವರ್ಗದ ವರಿಗೆ ನ್ಯಾಯ ಸಿಗಬೇಕೆಂದು ಸುಮಾರು 5 ವರ್ಷಗಳಿಂದ ರಾಹುಲ್‌ ಗಾಂದಿಯವರು ಹೋರಾಟ ಮಾಡಿದ್ದಾರೆ‌. ಅವರ ಹೋರಾಟದ ಫಲವಾಗಿ ಜಾತಿ ಸಮೀಕ್ಷೆಯನ್ನು ಮಾಡಲು ಒಪ್ಪಿ ಕೊಂಡಿದ್ದಾರೆ. ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದು ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button