ಗ್ರಾಮ ಪಂಚಾಯತಿಯಲ್ಲಿ ಸದಸ್ಯರ ಗಮನಕ್ಕೆ ತರದೆ – ಲಕ್ಷಾಂತರ ರೂ. ಗಳನ್ನು ಖರ್ಚು ಹಾಕಿರುವ ಪಿ.ಡಿ.ಓ ಅಧಿಕಾರಿಗಳು.
ಗುಡುರ ಸ.15

ಶ್ರೀಮತಿ ಶರಿಫಾ.ಕೊಡಗಲಿ ಗ್ರಾ.ಪಂ ಸದಸ್ಯರು ವಾರ್ಡ್ ನಂ 4 ಗುಡೂರ ಎಸ್.ಸಿ ಇಲಕಲ್ಲ ತಾಲೂಕಿನ ಗುಡೂರ ಎಸ್.ಸಿ ಗ್ರಾಂ.ಪಂಚಾಯತನಲ್ಲಿ 15 ನೇ. ಹಣಕಾಸು ಯೋಜನೆಯ ಅಡಿಯಲ್ಲಿ ಪಿ.ಡಿ.ಓ ಅಧಿಕಾರಿಗಳು ಹಾಗೂ ಅಧ್ಯಕ್ಷರು ಇವರಿಬ್ಬರೂ ಸೇರಿ ಕೊಂಡು 2025/26 ನೇ. ಜನೆವರಿ ತಿಂಗಳಿಂದ 15 ನೇ. ಹಣಕಾಸು ಯೊಜನೆಯಲ್ಲಿ 1 ಕೋಟಿ. 50. ಲಕ್ಷ ರೂಪಾಯಿಗಳು. ಇದ್ದ ಹಣದಲ್ಲಿ. ಇಲ್ಲಿವರೆಗೂ. PDO ಅಧಿಕಾರಿಗಳು ಮತ್ತು ಅಧ್ಯಕ್ಷರು ಇವರುಗಳು ನನ್ನ ಗಮನಕ್ಕೆ ತರದೆ ಇಲ್ಲಿಯ ವರೆಗೂ 28 ಲಕ್ಷಾಂತರ ರೂಪಾಯಿಗಳು ಖರ್ಚು ಹಾಕಿರುತ್ತಾರೆ.

ಇದಕ್ಕೆ ನಾನು ಪಿ.ಡಿ.ಓ ಅಧಿಕಾರಿಗಳಿಗೆ ಇಷ್ಟು ಹಣ ಖರ್ಚು ಹಾಕಿರುವ. ಬಗ್ಗೆ ಲೆಕ್ಕಪತ್ರ ನೀಡಬೇಕು ಮತ್ತು ಇದಕ್ಕೆ ಸಂಬಂದ ಪಟ್ಟ ದಾಖಲಾತಿಗಳು ತೋರಿಸ ಬೇಕು ಹತ್ತು ಹಲವು ಬಾರಿ ಇವರಲ್ಲಿ ವಿನಂತಿಸಿ ಕೊಂಡರು ಇವರು ನನಗೆ ಇಲ್ಲಿಯ ವರೆಗೂ ಯಾವುದೆ ದಾಖಲಾತಿಯ ಲೆಕ್ಕ ತೋರಿಸದೆ. ಇರುವುದು ನೋಡಿದರೆ ಇವರ ಮೇಲೆ ಹನುಮಾನ ಮೂಡುವಂತೆ ಸ್ಪಷ್ಟವಾಗಿ ಗೋಚರಿಸುವಂತಿದೆ. ಹಾಗಾಗಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದಿನಾಂಕ. 15/9/2025 ರಂದು ಫೋನ್ ಮುಖಾಂತರ ದೂರು ಹೇಳಿರುತ್ತೇನೆ ಇದಕ್ಕೆ ಮಾನ್ಯರು ಇದರ ಬಗ್ಗೆ ಕೂಲಂಕುಷವಾಗಿ ಪರೀಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ. ನೀಡಿದ ಮೇಲೆ ನಾನು ಪಂಚಾಯತಿಯಲ್ಲಿ ಬೆಳಗ್ಗಿ ಯಿಂದ ಪಂಚಾಯತಿ ಕಾರ್ಯಲಯದಲ್ಲಿ ಈ ವಿಷಯದ ಬಗ್ಗೆ ಪಿ.ಡಿ.ಓ ಅಧಿಕಾರಿಗೆಳು ಬರುವ ವರೆಗೂ ಕಾರ್ಯಾಲಯದಲ್ಲಿ ಕುಳಿತೀರುವೆ. ಈ ವಿಷಯದ ಬಗ್ಗೆ ಮಾನ್ಯರಲ್ಲಿ ತಿಳಿಸಿದಾಗ ಮಾನ್ಯ ಈ.ಓ ಸಾಹೇಬರು ನನಗೆ ನೀವು ತಿಳಿಸಿರುವ ಬಗ್ಗೆ ಕ್ರಮ ತೆಗೆದು ಕೊಳ್ಳುತ್ತೆನೆ. ಅಂತಾ ತಿಳಿಸಿದ ಮೇಲೆ ನಾನು ಕಾರ್ಯಾಲಯ ದಿಂದ ಹಿಂದಿರುಗಿ ಬಂದಿರುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ ಅಲ್ಲಾ. ಇದು ಸಾರ್ವಜನಿಕರ ಪರವಾಗಿ ಏನೇ ಬಂದ್ರು ಎದೆ ಗುಂದದೆ ಮುನ್ನುಗ್ಗಿ ಹೋರಾಡುತ್ತೇನೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಎಂದು ವರದಿಯಾಗಿದೆ.

