ಸರ್ ಎಂ.ವಿಶ್ವೇಶ್ವರಯ್ಯ ರವರ ಆದರ್ಶಗಳನ್ನು ಪಾಲಿಸಿರಿ – ಜಿ.ಎಚ್ ಶ್ರೀನಿವಾಸ್.
ತರೀಕೆರೆ ಸ.15

ಮೈಸೂರು ಮಹಾರಾಜರ ಆಸ್ಥಾನದಲ್ಲಿ ದಿವಾನರಾಗಿ ಕೆಲಸ ಮಾಡಿದ ಸರ್ ಎಂ.ವಿಶ್ವೇಶ್ವರಯ್ಯ ನವರು ರೈತರಿಗಾಗಿ ನೀರಾವರಿ ಯೋಜನೆಗಳನ್ನ ಕೈಗೊಂಡು ಹಲವಾರು ಡ್ಯಾಮ್ ಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತರೀಕೆರೆ ತಾಲೂಕು ಸಿವಿಲ್ ಇಂಜಿನಿಯರ್ಸ್ಸ್ ಅಸೋಸಿಯೇಷನ್ ತರೀಕೆರೆ ಇವರು ಏರ್ಪಡಿಸಿದ್ದ ಇಂಜಿನಿಯರ್ಸ್ ದಿನಾಚರಣೆಯ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಇಂಜಿನಿಯರ್ ಗಳೆಲ್ಲರು ಯುವಕರಾಗಿದ್ದೀರಿ ಜನರಿಗೆ ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡಿರಿ ನಿಮ್ಮ ಸಂಘಕ್ಕೆ ನಿವೇಶನವನ್ನು ಪುರಸಭೆಯಿಂದ ಕೊಡಿಸಲು ನಾನು ಶಿಫಾರಸ್ಸು ಮಾಡುತ್ತೇನೆ, ಪುರಸಭಾ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿಗಳೊಂದಿಗೆ ಅರ್ಜಿ ಕೊಟ್ಟು ಮಾತನಾಡಿರಿ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಪಾಲಿಸಿರಿ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೆಫ್ಟಿನೆಂಟ್ ಜನರಲ್ ಬಿ ಎಸ್ ರಾಜು ರವರು ಮಾತನಾಡಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ತುಂಬಾ ವಿಶೇಷವಾದ ವ್ಯಕ್ತಿಯಾಗಿದ್ದರು ದೇಶದಲ್ಲಿಯೇ ಮೊದಲು ಸ್ಥಾಪನೆಯಾಗಿದ್ದು ಸಿವಿಲ್ ಇಂಜಿನಿಯರಿಂಗ್ ಎಂದು ಹೇಳಿದರು. ಇಂಜಿನಿಯರ್ಗಳು ಒಂದು ಕಟ್ಟಡವನ್ನು ಕಟ್ಟಲು ನಿಗದಿಪಡಿಸಿದ ಹಣದಲ್ಲಿ ಅವರು ಪರಿಪೂರ್ಣವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಅರ್ಧಕ್ಕೆ ಅರ್ಧ ಹಣದಲ್ಲಿ ಕಟ್ಟಡವನ್ನು ಕಟ್ಟಿದರೆ ಆ ಕಟ್ಟಡ ರಿಪೇರಿಗೆ ಮತ್ತೆ 25 — 30 ಲಕ್ಷ ರೂಪಾಯಿಗಳನ್ನು ಐದು ವರ್ಷದ ನಂತರ ಸರ್ಕಾರ ಮಂಜೂರು ಮಾಡಬೇಕಾಗ್ತದೆ ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ತಿಳುವಳಿಕೆ ಹೇಳಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಟ್ನಹಳ್ಳಿ ಮಹೇಶ್ ರವರು ಮಾತನಾಡಿ ಇಂಜಿನಿಯರುಗಳ ಕಾರ್ಯಕ್ರಮವೆಂದರೆ ಶಿಸ್ತು ಬದ್ಧವಾಗಿರಬೇಕು ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯು ಆಗಿರುತ್ತದೆ ತರೀಕೆರೆ ತಾಲೂಕಿನ ಕೆಮ್ಮಣ್ಣಗುಂಡಿ ಯಿಂದ ಕಬ್ಬಿಣದ ಹಾದಿರು ತೆಗೆದುಕೊಂಡು ರೂಪವೇನಲ್ಲಿ ಮತ್ತು ಗೂಡ್ಸ್ ರೈಲಿನಲ್ಲಿ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ತಂದು ಅಲ್ಲಿ ಕಬ್ಬಿಣದ ಕಾರ್ಖಾನೆಯನ್ನ ಸ್ಥಾಪನೆ ಮಾಡಿಸಿದ ಕೀರ್ತಿ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಸೇರುತ್ತದೆ.
ಅದೇ ರೀತಿ ಕನ್ನಂಬಾಡಿ ಕಟ್ಟೆಯನ್ನು ಕಟ್ಟುವಾಗ ಆ ಡ್ಯಾಮ್ ಎತ್ತರ ಎಂಬತ್ತು ಸೀಮಿತವಾಗಿದ್ದು ಅದನ್ನ 126 ಅಡಿ ಎತ್ತರಕ್ಕೆ ಏರಿಸಿದ ಕೀರ್ತಿ ಸರ್ ಎಂ ವಿಶ್ವೇಶ್ವರಯ್ಯ ನವರದು ಎಂದು ಹೇಳಿದರು. ಬಸವ ಜಯಂತಿ,ಅಂಬೇಡ್ಕರ್ ಜಯಂತಿ,ಗಾಂಧಿ ಜಯಂತಿ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಜಯಂತಿಗಳನ್ನು ಆಚರಿಸುವ ನಾವು ಜನರಲ್ಲಿ ಜಾಗೃತಿ ಮೂಡಿಸುವುದು ಈ ಜಯಂತಿಗಳ ಉದ್ದೇಶವಾಗಬೇಕು ಎಂದು ಹೇಳಿದರು. ರಾಂಕೋ ಸಿಮೆಂಟ್ ಕಂಪನಿಯ ಶಂಕರ್ ಶರ್ಮಾ,ಮಹೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ರವಿ ದಳವಾಯಿ ರವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ನವೀನ್ ಜಿ ನಾಯ್ಕ್ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಹಾಗೂ ಉಪಾಧ್ಯಕ್ಷರಾದ ಪಾರ್ವತಮ್ಮ ತಿಮ್ಮಯ್ಯ ಹಾಗೂ ಮುಖ್ಯ ಅಧಿಕಾರಿಗಳಾದ ವಿಜಯ್ ಕುಮಾರ್ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ, ಎಲ್ಎಸ್ ಮಂಜುನಾಥ್ ಮಾತನಾಡಿದರು. ಸಂಘದ ಕಾರ್ಯದರ್ಶಿಯಾದ ರವಿಕುಮಾರ್ ಸ್ವಾಗತಿಸಿ ಗೋಪಾಲಕೃಷ್ಣ ನಿರೂಪಿಸಿ ಪ್ರಿಯಾಂಕಾ ಚಂದನ್ ಪ್ರಾರ್ಥಿಸಿ ಚೇತನ್ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು