ಮಾನ್ವಿಯ ಮುಸ್ಲಿಮರಿಂದ ಸೀರತ್. ಎ. ಖಾತಿಮೂನ್ – ನಬೀಯ್ಶಿನ್ ಸಮಾರಂಭ.
ಮಾನ್ವಿ ಸ.18





ಪ್ರವಾದಿ ಮುಹಮ್ಮದ್ (ಸ. ಅ) ಅವರ 1500 ನೇ. ಜನ್ಮದಿನದ ಅಂಗವಾಗಿ ಅಂಜುಮನ್-ಎ – ಮೆಹದವಿಯ ಇಸ್ಲಾಮಿಕ್ ಸಮಿತಿ (ರಿ) ಮಾನವಿ ವತಿಯಿಂದ ದಿನಾಂಕ 20/09/2025 ರಂದು ಸಾಯಂಕಾಲ 7:00 ಗಂಟೆಗೆ ನಗರದ ಕರಡಿಗುಡ್ಡ ಸರ್ಕಲ್ ನಲ್ಲಿರುವ ಈದ್ಗಾ ಶಾದಿ ಮಹಲ್ ನಲ್ಲಿ “ಜಾಲ್ಸ-ಎ-ಸೀರತ್-ಎ ಖಾತಿಮೂನ್ ನಬೀಯ್ಯಿನ್ ಮುಹಮ್ಮದ್ ಮುಸ್ತಫಾ (ಸ. ಅ)” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಸೈಯದ್ ಮುಸ್ತಫಾ ಮಿಯಾ ಯೂಸುಫಿ ಸಾಹಬ್ ವಹಿಸಿ ಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಹೈದರಾಬಾದಿನಿಂದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಸದಸ್ಯರಾಗಿರುವ ಸೈಯದ್ ಮಸೂದ್ ಹುಸೇನ್ ಮುಜುತಾಹಿದಿ ಸಾಹಬ್, ಮಹಾರಾಷ್ಟ್ರದಿಂದ ಸೈಯದ್ ನೂರ್ ಮೊಹಮ್ಮದ್ ತಹಸೀನ್ ಕುಂದುಮೀರಿ ಸಾಹಬ್ ಹಾಗೂ ಸೈಯದ್ ನುಸ್ರತ್ ತನ್ವೀರ್ ಮಿಯಾ ಸಾಹಬ್ ಭಾಗವಹಿಸಲಿದ್ದಾರೆ.

ಮತ್ತು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಹಜರತ್ ಸೈಯದ್ ಶಾ ಸಜ್ಜದ್ ಹುಸೇನಿ ಮತವಾಲೆ ಸಾಹೇಬ್ ಮಾನ್ವಿ, ಮೌಲಾನಾ ಮೊಹಮ್ಮದ್ ಸಿಕಂದರ್ ಖಾಸ್ಮಿ ಮಾನ್ವಿ ಮತ್ತು ಜಮಾತೆ ಇಸ್ಲಾಂ ಹಿಂದ್ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಸಾಬ್ ಹಾಗೂ ನಗರದ ಎಲ್ಲಾ ಸಮಾಜದ ಹಿರಿಯ ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೆಹದವಿ ಸಮಾಜದ ಉತ್ತಮ ಅಂಕಗಳೊಂದಿಗೆ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಗುತ್ತಿದೆ.

ಮಹಿಯಾರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ ಆದ್ಧರಿಂದ ಮಾನ್ಯರು ಸಮಸ್ತ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದನ್ನು ಯಶಸ್ವಿ ಗೊಳಿಸಬೇಕೆಂದು ಸಮಿತಿಯ ಅಧ್ಯಕ್ಷರಾದ ಸಾಬೆರ್ ಪಾಶ ಹಾಗೂ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯ ಮೂಲಕ ತಿಳಿಸಿದರು.ಈ ವೇಳೆ ಕಾರ್ಯಕ್ರಮದ ಪೊಸ್ಟರ್ ಗಳನ್ನು ಬಿಡುಗಡೆ ಗೊಳಿಸಲಾಯಿತು.ಈ ಸಂದರ್ಭದಲ್ಲಿ ನಿಜಾಮ್ ಪಾಶ ಮಿಯಾ, ನಸೀರ್ ಸೌಕಾರ್, ಜಾಕಿರ್ ಮೋಹಿನುದ್ದಿನ್ ತಾಜ್ ಕನ್ಸ್ಟ್ರಕ್ಷನ್, ಶಂಶಿರ್ ಖಾನ್, ಮೊಯಿನ್ ಖಾನ್, ಫೈಝನ್ ಮಿಯಾ, ಅಲೀಮ್ ಪಾಶ, ಹುಸೇನ್ ಪಾಶ ಸಾಬ್, ಅಮ್ಜದ್ ಖಾನ್, ಸುಭಾನ್ ಬೇಗ್, ಅಲ್ಲಾಹ್ ಬಕ್ಷ, ಅಜಾಮ್ ಸಾಬ್, ಸಾಯೀದ್ ಸಾಬ್, ಮುನ್ನುವರ್ ಮಿಯಾ, ಮುನವಾರ್ ಸಾಬ್ ಮತ್ತು ಸಮೀರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ