ವಿಶ್ವಕರ್ಮ ಸಮಾಜದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜಾತಿ ಗಣತಿಯಲ್ಲಿ ವಿಶ್ವಕರ್ಮ ಎಂದು ನಮೂದಿಸಲು – ವಿಶ್ವಕರ್ಮ ಮುಖಂಡರ ಸಭೆ.
ಸಿಂಧನೂರು ಸ.18





ಸಿಂಧನೂರಿನ ವಿಶ್ವಕರ್ಮ ಹಿರಿಯ ಮುಖಂಡರಾದ ವಿರೇಶ ಬಡಿಗೇರ ದೇವರಗುಡಿ ಅವರ ಮನೆಯಲ್ಲಿ ಸಿಂಧನೂರು ಹಾಗೂ ಮುದಗಲ್ ವಿಶ್ವಕರ್ಮ ಮುಖಂಡರುಗಳು ಸಭೆ ಸೇರಿ ವಿಶ್ವಕರ್ಮ ಸಮಾಜದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜಾತಿಗಣತಿ ಸಮೀಕ್ಷೆ ವೇಳೆ ವಿಶ್ವಕರ್ಮ ಎಂದು ನಮೂದಿಸಲು ಸಮಾಜದ ಬಂಧುಗಳಿಗೆ ಜಾಗೃತಿ ಮೂಡಿಸುವ ಬಗ್ಗೆ ಮತ್ತು ವಿಶ್ವಕರ್ಮ ಜಯಂತಿ ಕಡ್ಡಾಯವಾಗಿ ಸರಕಾರಿ ಕಚೇರಿಗಳಲ್ಲಿ ಆಚರಿಸುವಂತೆ ಹಾಗೂ ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಬಗ್ಗೆ ಚರ್ಚಿಸಲಾಯಿತು .

ಈ ಸಂಧರ್ಭದಲ್ಲಿ ಅ.ಕ.ವಿ ಮಹಾ ಸಭೆ ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ,ಹಿರಿಯ ಮುಖಂಡರಾದ ವಿರೇಶ ದೇವರಗುಡಿ,ರಾಯಚೂರು ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ನಾಮ ನಿರ್ದೇಶಕ ಸದಸ್ಯರಾದ ಉದಯಕುಮಾರ,ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ,ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಬಡಿಗೇರ,ಮುದಗಲ್ ವಿಶ್ವಕರ್ಮ ಮುಖಂಡರಾದ ಕಾಳಪ್ಪ ಬಡಿಗೇರ, ಮೌನೇಶ ಕನ್ನಾಳ ಇನ್ನಿತರರು ಇದ್ದರು .