ಜಿಲ್ಲಾಡಳಿತದಿಂದ ಪರಿಸರ ಸೇವೆ ಮತ್ತು ವಿಶ್ವಕರ್ಮ ಸಮಾಜ ಸಂಘಟನೆ ಸೇವೆಗೆ – ಚನ್ನಪ್ಪ ಕೆ.ಹೊಸಹಳ್ಳಿ ಅವರಿಗೆ ಅಭಿನಂದನಾ ಪತ್ರ.
ರಾಯಚೂರು ಸ.18





ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ರಾಯಚೂರು ಹಾಗೂ ವಿವಿಧ ವಿಶ್ವಕರ್ಮ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಹಾಗೂ ವಿಶ್ವಕರ್ಮ ಸಮಾಜ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ.ಹೊಸಹಳ್ಳಿ ಗ್ರಾಮದ ಚನ್ನಪ್ಪ ವಿಶ್ವಕರ್ಮ ಅವರ ಪರಿಸರ ಸೇವೆ ಮತ್ತು ವಿಶ್ವಕರ್ಮ ಸಮಾಜದ ಸಂಘಟನೆಯ ಸೇವೆ ಗುರುತಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಪರಮ ಪೂಜ್ಯ ಶ್ರೀ ಅಜೇಂದ್ರ ಮಹಾ ಸ್ವಾಮಿಗಳು ದೇವದುರ್ಗ ಮಠ, ರಾಯಚೂರು ಉಪ ತಹಸೀಲ್ದಾರ್ ಪರುಶುರಾಮ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ಜಿಲ್ಲಾ ಅಧ್ಯಕ್ಷ ಬ್ರಹ್ಮ ಗಣೇಶ ವಕೀಲರು,ಜಿಲ್ಲಾ ವಿಶ್ವಕರ್ಮ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾಣದಾಳ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಆನ್ವರಿ, ಮುಖಂಡರಾದ ಮನೋಹರ್ BSNL, ಈಶ್ವರ ವಿಶ್ವಕರ್ಮ, ಮಾಜಿ ತಾಪಂ ಅಧ್ಯಕ್ಷ ಶ್ರೀಮತಿ ಜಯಮ್ಮ ಕೆ ನರಸಣ್ಣಾಚಾರಿ ಗಾಣಧಾಳ, ಡಾ, ಮನೋಹರ್ ಪತ್ತಾರ, ನಾಗರಾಜ ಪತ್ತಾರ, ಡಾ, ಅರುಣ್ ಮಸ್ಕಿ ರಾಘು ಜಾಲಿಹಾಳ, ವೀರೇಶ ಜಾಲಿಹಾಳ ಇನ್ನಿತರರು ಇದ್ದರು.