ಆಸಕ್ತಿಯಿಂದ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯು ಹೆಚ್ಚಳ – ವೆಂಕಟಲಕ್ಷ್ಮೀ ಅಭಿಪ್ರಾಯ.
ಚಳ್ಳಕೆರೆ ಸ.17





ಆಸಕ್ತಿಯಿಂದ ಏಕಾಗ್ರತೆಯ ಓದಿನಿಂದ ನೆನಪಿನ ಶಕ್ತಿಯು ಹೆಚ್ಚಳವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ವೆಂಕಟಲಕ್ಷ್ಮೀ ಅಭಿಪ್ರಾಯ ಪಟ್ಟರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀರಾಮಕೃಷ್ಣ ಪರಮಹಂಸರ ಜೀವನದ ಎರಡು ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದರು.

ಈ ತರಗತಿಯ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ , ನಾಮಸ್ಮರಣೆ , ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ , ಸ್ವದೇಶ ಮಂತ್ರದ ಪಠಣ ನಡೆದರೆ ಯತೀಶ್ ಎಂ ಸಿದ್ದಾಪುರ ಮತ್ತು ಸಂತೋಷ ಕುಮಾರ್ ಅವರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು.
ಕಾರ್ಯಕ್ರಮದಲ್ಲಿ ಡಾ, ಭೂಮಿಕ, ಶ್ರೀನಿಹಾಂತ್, ಯಶಸ್ವಿ, ಅನುಷಾ, ಸಾನ್ವಿ, ವಿಕಾಸಿನಿ, ವಿವಿಕ್ತ, ರಾಧೆ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.