ಸ್ವಾಮಿ ಅಭೇದಾನಂದರು ಧ್ಯಾನಸಿದ್ಧರಾಗಿದ್ದರು – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅಭಿಮತ.
ಚಳ್ಳಕೆರೆ ಸ.18





ಶ್ರೀರಾಮಕೃಷ್ಣ ಪರಮಹಂಸರ ಹದಿನಾರು ಮಂದಿ ನೇರಸಂನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಅಭೇದಾನಂದರು ಧ್ಯಾನಸಿದ್ಧರಾಗಿದ್ದರು ಎಂದು ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರು ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅಭಿಪ್ರಾಯ ಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ಸ್ವಾಮಿ ಅಭೇದಾನಂದರ ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರು “ಸ್ವಾಮಿ ಅಭೇದಾನಂದರ ಜೀವನ ಮತ್ತು ವ್ಯಕ್ತಿತ್ವ”ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಅಮೇರಿಕಾದಲ್ಲಿ ವೇದಾಂತ ಪ್ರಸಾರ ಕಾರ್ಯ ಮಾಡುವಲ್ಲಿ ಸ್ವಾಮಿ ಅಭೇದಾನಂದರ ಪಾತ್ರ ಮಹತ್ವದ್ದು ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರ ಜೊತೆಗೆ ಉನ್ನತ ಮಟ್ಟದ ಆಧ್ಯಾತ್ಮಿಕ ಸಂಬಂಧವನ್ನು ಹೊಂದಿದ್ದ ಅವರು ಅನೇಕ ಉತ್ತಮ ಭಜನೆಗಳನ್ನು ಬರೆದಿದ್ದಾರೆ ಎಂದರು.

ಜಯಂತ್ಯುತ್ಸವದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ,ಶ್ರೀಮತಿ ಸುನೀತಾ ಗೋಪಾಲಕೃಷ್ಣ, ಮಾಕಂಸ್ ಲಕ್ಷ್ಮೀ ಬಾಲಾಜೀ, ತಿಪ್ಪಮ್ಮ ಉಮಾಶಂಕರ್, ಜಯಮ್ಮ ನರಸಿಂಹಮೂರ್ತಿ ಅವರಿಂದ ವಿಶೇಷ ದೇವಿ ಭಜನೆಗಳ ಕಾರ್ಯಕ್ರಮ ನಡೆದರೆ ರತ್ನಮ್ಮ ಅವರಿಂದ ಅಕ್ಕಮಹಾದೇವಿಯವರ ವಚನ ಗಾಯನ ನಡೆಯಿತು.

ಯತೀಶ್ ಎಂ ಸಿದ್ದಾಪುರ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸತ್ಸಂಗ ಕೇಂದ್ರದ ಶ್ರೀಮತಿ ಎಂ ಲಕ್ಷ್ಮೀದೇವಮ್ಮ, ನಂಜಮ್ಮ ಕೆಂಚಪ್ಪ,ಪಂಕಜ ಚೆನ್ನಪ್ಪ, ಸೌಮ್ಯ ಪ್ರಸಾದ್, ಸುವರ್ಣಮ್ಮ, ಸರಸ್ವತಿ, ಪ್ರಮೀಳಾ ಜಗದೀಶ್, ಸರ್ವಮಂಗಳ ಶಿವಣ್ಣ, ಗೀತಾ ಸುಂದರೇಶ್ ದೀಕ್ಷಿತ್, ಅನುಸೂಯ ರಾಘವೇಂದ್ರ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.