ಕಲ್ಯಾಣ ಕರ್ನಾಟಕ ಉತ್ಸವ -ವಿಶ್ವಕರ್ಮ ಜಯಂತಿ ಆಚರಣೆ.
ತಾಯಕನಹಳ್ಳಿ ಸ.18





ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರ ಶಾಲೆಯಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಮಹತ್ಮಾ ಗಾಂಧೀಜಿ, ಸರದಾರ ವಲ್ಲಭಭಾಯಿ ಪಟೇಲ, ಡಾ, ಬಿ.ಆರ್ ಅಂಬೇಡ್ಕರ್, ವಿಶ್ವಕರ್ಮ ರವರ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ ಗುರುರಾಜ್ ಮಾತನಾಡಿ ಈ ಭಾಗದ ಅನೇಕ ನಾಯಕರು ಸಮಾಜ ಸುಧಾರಕರು ಹೋರಾಟ ಮಾಡಿ 371ಜೆ ಕಲಂಅನ್ನು ಜಾರಿಗೆ ತರುವಲ್ಲಿ ಸಫಲರಾದರು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ ಟಿ ಮಂಜಣ್ಣ, ಶಾಲಾ ಶಿಕ್ಷಕರಾದ ಹಂಪಮ್ಮ ಪೂಜಾರ್, ಮಂಜುಳಾ, ಸುಮಿತ್ರ, ಸರೋಜಾ, ರುದ್ರಮ್ಮ, ಮಮತಾ, ಬಸವರಾಜ್ ಜಿ ಪಿ, ನಿವೃತ್ತಿ ಗ್ರಂಥಪಾಲಕ ಗುರುರಾಜ್ ಹಾಗೂ ಬೋಧಕೇತರ ಸಿಬ್ಬಂದಿ ಮಲ್ಲಿಕಾರ್ಜುನ, ಶಾಂತಪ್ಪ, ವನಜಾಕ್ಷಮ್ಮ ಮತ್ತು ಊರಿನ ಮುಖಂಡರು ಎಲ್ಲ ಮಕ್ಕಳ ಪಾಲಕ ಪೋಷಕರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ