ವೀರಶೈವ ಲಿಂಗಾಯತ ಹಂಡೇ ವಜೀರ – ಸಮಾಜದ ವಿವಿಧ ಚರ್ಚೆಗಳ ಸಭೆ.
ಮುದ್ದೇಬಿಹಾಳ ಸ.18





ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎಲ್ ಬಿರಾದಾರ್ ಕಲ್ಯಾಣ ಮಂಟಪದಲ್ಲಿ ದಿನಾಂಕ 21-09-2025 ರವಿವಾರ ದಂದು ಬೆಳಿಗ್ಗೆ 11 ಗಂಟೆಗೆ ಸಮಾಜದ ಬಂಧುಗಳು ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳ, ತಾಲೂಕು ಪದಾಧಿಕಾರಿಗಳ, ಮತ್ತು ಎಲ್ಲಾ ಮಹಿಳಾ ಹಾಗೂ ಯುವ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀ ಡಾ, ಎಸ್.ಎಸ್ ಪಾಟೀಲ್ (ಕಡೂರ್) ಇವರ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದು. ಸಭೆಯಲ್ಲಿ “ದಿನಾಂಕ 22 ರಂದು ಪ್ರಾರಂಭ ಗೊಳ್ಳುವ ಹಿಂದುಳಿದ ಆಯೋಗದ ಜಾತಿ ಗಣತಿ ಹಾಗೂ ಆರ್ಥಿಕ ಗಣತಿ” ಯಲ್ಲಿ ನಮ್ಮ ಸಮಾಜದ ಬಂಧುಗಳು ದಾಖಲಿಸುವ ಕುರಿತು ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳ ಬೇಕಾಗಿರುವುದು, ಮತ್ತು ಸಮಾಜದ ಸಂಘಟನೆಯ ಜೊತೆಗೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆ ಮಾಡುವ ಸಲುವಾಗಿ ಎಲ್ಲಾ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆಯನ್ನು ಆಯೋಜನೆ ಮಾಡಲಾಗಿದೆ. ಕಾರಣ ರಾಜ್ಯದ ಎಲ್ಲಾ ಘಟಕಗಳ ಸಮಾಜದ ಪದಾಧಿಕಾರಿಗಳು ಸಮಾಜದ ಹಿರಿಯರು ಕಿರಿಯರು ಈ ಸಭೆಗೆ ಆಗಮಿಸಿ ತಮ್ಮ ಸೂಕ್ತ ಸಲಹೆ ಸೂಚನೆ ಕೊಟ್ಟು ಸಮಾಜದ ಪ್ರಗತಿಗೆ ಕಾರಣ ವಾಗಬೇಕೆಂದು. ಆರ್.ಎಸ್ ಪಾಟೀಲ್ (ಅಗಸಬಾಳ) ರಾಜ್ಯ ಪ್ರಧಾನ ಕಾರ್ಯದರ್ಶಿಗಳು (ಬೆಂಗಳೂರು) ವಿಜಯಪುರ ಇವರು ಈ ಮೂಲಕ ಪ್ರಕಟನೆಗೆ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ