ಗ್ರಾಮ ಲೆಕ್ಕಾಧಿಕಾರಿಗಳಿಗಿಲ್ಲಾ, ಸುಸಜ್ಜಿತ ಕಚೇರಿ ಇಲ್ಲಾ – ಸಾರ್ವಜನಿಕರ ಆಕ್ರೋಶ.
ಬೆಳವಣಿಕಿ ಸ.18





ರೋಣ ತಾಲೂಕಿನ ಬೆಳವಣಿಕಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಗ್ರಾಮ ಲೆಕ್ಕಾಧಿಕಾರಿಗಳು ಭಯದ ವಾತಾವರಣದಲ್ಲಿ ಜನರ ಕೆಲಸ ಕಾರ್ಯಗಳನ್ನು ಮಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ.ಈ ಹಿಂದೆ ಸಾಕಷ್ಟು ಭಾರಿ ಗ್ರಾಮ ಪಂಚಾಯತಿಗೆ ಲೇಖನದ ಮೂಲಕ ಎಷ್ಟೋ ಭಾರಿ ಪತ್ರ ಕೊಟ್ಟರು ಕೂಡ ತೆಲೆ ಕೆಡಿಸಿ ಕೊಳ್ಳದ ಗ್ರಾಮದ ಅಭಿವೃದ್ದಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಜನರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಂಪೂರ್ಣ ಹಾಳಾಗಿ ಹೋಗಿರುವ ಮತ್ತು ಮಳೆ ನೀರಿನಿಂದ ಶೀಥಿಲ ಗೊಂಡ ಕಟ್ಟಡಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳವಣಿಕಿ ಗ್ರಾಮದಲ್ಲಿ ರೈತಾಪಿ ವರ್ಗದ ಜನರು ತುಂಬಾ ಇದ್ದು ದಿನನಿತ್ಯ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಬಂದು ಹೋಗಿ ಮಾಡುತ್ತಾರೆ ಅಷ್ಟೆ ಅಲ್ಲದೆ ಗ್ರಾಮದ ಎಲ್ಲಾ ದಾಖಲಾತಿ ಕೂಡ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯಲ್ಲಿ ಇರುತ್ತವೆ. ಆದರೆ ಇನೇನು ಸ್ವಲ್ಪ ದಿನಗಳಲ್ಲೇ ಬೆಳವಣಿಕಿ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯಲ್ಲಿ ದಾಖಲಾತಿ ಸಮೇತ ಅಲ್ಲಿರುವ ಸಿಬ್ಬಂದಿಗಳಾಗಲಿ ಇಲ್ಲ ಅಧಿಕಾರಿಗಳಾಗಲಿ ಅಥವಾ ಸಾರ್ವಜನಿಕರನ್ನು ಅಪಾಯಕ್ಕಾಗಿ (ದುರಂತಕ್ಕಾಗಿ) ಕೈ ಮಾಡಿ ಕರೆಯುತ್ತಿರುವುದಂತೂ ಸತ್ಯವಾದ ಸಂಗತಿಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಭಯದ ಒಂದು ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಕೊಠಡಿ ಸುತ್ತಮುತ್ತ ವಿಸರ್ಜನೆ ದುರ್ವಾಸನೆ ಅತ್ಯಂತ ಕಠೋರದ ಪರಿಸ್ಥಿತಿಯಲ್ಲಿ ಬೆಳವಣಿಕಿ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಯ ಸ್ಥಿತಿಯಾಗಿದೆ.ಗ್ರಾಮಕ್ಕೆ ಬೇಕಾಗುವ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನ ಒದಗಿಸುವಲ್ಲಿ ಬೆಳವಣಿಕಿ ಗ್ರಾಮ ಪಂಚಾಯತ ಆಡಳಿತ ಮತ್ತು ಅಭಿವೃದ್ದಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಬಂಧುಗಳೇ.ಬೆಳವಣಿಕಿ ಗ್ರಾಮದಲ್ಲಿ ಒಟ್ಟು ಮೂರುರಿಂದ ನಾಲ್ಕು ಶಿಕ್ಷಣ ಸಂಸ್ಥೆಗಳಿದ್ದು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಳವಣಿಕಿ ಗ್ರಾಮಕ್ಕೆ ಶಾಲೆ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಮತ್ತು ಕೆಲಸ ಕಾರ್ಯಗಳಿಗೆ ಬಂದು ಹೋಗಿ ಮಾಡುತ್ತಾರೆ ದುರದೃಷ್ಟ ಪರಿಸ್ಥಿತಿ ಏನೆಂದರೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಕೂಡ ಇಲ್ಲ ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಸಣ್ಣ ಪುಟ್ಟ ಮೂಲಭೂತ ಸೌಕರ್ಯಗಳ ಬಗ್ಗೆ ಯೋಚನೆ ಮಾಡದ ಇಂತಹ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಜನರು ಹಿಡೀ ಶಾಪ ಹಾಕುತ್ತಿದ್ದಾರೆನಮ್ಮ ಪತ್ರಿಕೆಯಲ್ಲಿ ಸುದ್ದಿಯನ್ನ ಗಮನಿಸಿ ಸಂಬಂಧಪಟ್ಟ ಮೇಲಾಧಿಕಾರಿಗಳು ಏನು ಕ್ರಮ ತಗೆದು ಕೊಳ್ಳುವರೋ ಇಲ್ಲ ಎಂಬುದನ್ನ ಕಾಯ್ದು ನೋಡೋಣ.
ಜಿಲ್ಲಾ ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ