“ಬದುಕಿನ ಕೊನೆ ಪರದೆ ಬೀಳುವ ಮುಂಚೆ”…..

ಭೂಮಾತೆಯ ಮಡಿಲಿನಲಿ ಜನಸಿದಾಕ್ಷಣದಿ




ಬೆಳೆಯುತ
ತಾಯಿ ತಂದೆ ಮಡಿಲಿ ಆಡಿ ನಲಿವೆ
ಗುರು ಹಿರಿಯರ ಶುಭ ನುಡಿ ಪಾಲಿಸುವೆ
ಸಹೋದರ ಸಹಾದರಿಯರ ಅಕ್ಕರೆಯ ಸಿಹಿ
ಸವಿಯುವೆ
ಬಾಲ್ಯದ ಸ್ನೇಹ ಮಿತ್ರ ಜೋತೆ ಆಡಿ ಹಾಡುತ
ಕುಣಿಯುವೆ
ಪದವಿ ಕಾಯಕ ಹುಡುಕುತ ಕನಸು ಕಟ್ಟಿ
ಅಲಿಯುವೆ
ಪ್ರೇಮ ಪ್ರೀತಿಯ ನೋವು ನಲಿವಿನಲಿ
ಬೆರೆಯುವೆ
ಮದುವೆ ಮಕ್ಕಳ ಲಾಲನೆ ಪಾಲನೆ ಮಾಡುತ
ಕುಣಿಯುವೆ
ವ್ಯಾಮೋಹದಿ ದುಡಿದು ಗಳಸಿ ಕೊಡದೆ ತಿನ್ನದೆ
ಇಡುವೆ
ಮುಪ್ಪಾವಸ್ಥೆಯಲಿ ನಗು ನಲಿವು ಇಲ್ಲದೇ
ನರಳಿ ಕುಳಿತಿರುವೆ
ಬದುಕಿನ ಕೊನೆಯ ಪರದೆ ಬೀಳುವ ಮುಂಚೆ
ಬಾಳ ಪಯಣ ದಾರಿ ಬರಿ ನೆನಪಿನಂಗಳದಲಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ