ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ – ವಿಶೇಷ ಸತ್ಸಂಗ ಕಾರ್ಯಕ್ರಮ.
ಚಳ್ಳಕೆರೆ ಸ.19





ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ಏಕಾದಶಿ” ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ಶ್ರೀರಾಮನ ವಿಶೇಷ ಭಜನೆಗಳು ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ನಡೆಸಿ ಕೊಟ್ಟರು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗಂಗಮ್ಮ, ಸರಸ್ವತಿ ರಾಜು, ಸುಧಾಮಣಿ, ಗೀತಾಲಕ್ಷ್ಮೀ, ವಿಜಯಲಕ್ಷ್ಮಿ, ರಶ್ಮಿ ರಮೇಶ್, ಯತೀಶ್ ಎಂ ಸಿದ್ದಾಪುರ, ರಶ್ಮಿ ವಸಂತ, ಜಯಶೀಲಮ್ಮ, ಭ್ರಮರಂಭಾ, ವೀರಮ್ಮ, ಶಾರದಾಮ್ಮ, ದ್ರಾಕ್ಷಾಯಣಿ, ಸೌಮ್ಯ ಪ್ರಸಾದ್, ಶೈಲಜ, ಜಯಮ್ಮ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.