ಬೆಳೆ ಹಾನಿ ಪರಿಹಾರಕ್ಕೆ ರಾಷ್ಟ್ರೀಯ ರೈತರ – ಸಂಘ ಆಗ್ರಹ.
ತಾಳಿಕೋಟೆ ಸ.29






ಕಳೆದ ಕೆಲವು ದಿನಗಳ ಹಿಂದೆ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ರೈತರು ಬೆಳೆದ ವಿವಿಧ ಬೆಳೆಗಳು ಸಂಪೂರ್ಣ ಹಾನಿಗೀಡಾಗಿದ್ದು ರೈತರಿಗೆ ಪ್ರತಿ ಎಕರೆಗೆ 25 ಸಾವಿರದಂತೆ ಸರ್ಕಾರ ಪರಿಹಾರ ಘೋಷಿಸ ಬೇಕೆಂದು ಆಗ್ರಹಿಸಿ ರಾಷ್ಟ್ರೀಯ ರೈತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಶಾಂತಗೌಡ ಪಾಟೀಲ ಇವರ ನೇತೃತ್ವದಲ್ಲಿ ಪದಾಧಿಕಾರಿಗಳು ತಹಸಿಲ್ದಾರ್ ಹಾಗೂ ಕೃಷಿ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಈ ಬಾರಿ ಇಡೀ ಜಿಲ್ಲೆ ಹಾಗೂ ತಾಲೂಕಿನಲ್ಲಿ ವಾಡಿಕೆ ಗಿಂತ ಅತಿ ಹೆಚ್ಚು ಮಳೆಯಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ತೊಗರಿ ಬೆಳೆ ನೀರಿನಲ್ಲಿ ಕೊಳೆತು ನೆಟ ರೋಗ ತಗುಲಿ ಸಂಪೂರ್ಣ ಹಾಳಾಗಿದೆ, ಹತ್ತಿ ಬೆಳೆಗೆ ತಾಮ್ರ ರೋಗ ಬಂದು ಕೋರೆ ಹುಳದ ಬಾದೆಯಿಂದ ಹಾಳಾಗಿ ಹೋಗಿದೆ ಇದೇ ರೀತಿಯಾಗಿ ಶೇಂಗಾ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳು ಭಾರಿ ಮಳೆಯಿಂದಾಗಿ ಸಂಪೂರ್ಣ ಹಾನಿಗೊಳಗಾಗಿದ್ದು ರೈತರು ಅಪಾರ ಪ್ರಮಾಣದ ಮಳೆಯಿಂದ ಬೆಳೆ ಕೈ ಸೇರದೆ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಚಿಂತೆಗೀಡಾಗಿದ್ದಾರೆ.

ಕೂಡಲೆ ಸರ್ಕಾರ ಪ್ರತಿ ರೈತನಿಗೆ ಎಕರೆಗೆ ತಲಾ ರೂ.25 ಸಾವಿರದಂತೆ ಪರಿಹಾರ ಘೋಷಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ತಾಳಿಕೋಟಿ ತಾಲೂಕಿನ ವ್ಯಾಪ್ತಿಗೆ ಬರುವ 56 ಗ್ರಾಮಗಳ ರೈತರಿಗೆ ಯಾವುದೇ ರೀತಿಯ ತಾರತಮ್ಯ ಆಗದಂತೆ ಬೆಳೆ ಹಾನಿಯ ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ನಮ್ಮ ಸಂಘಟನೆ ಆಗ್ರಹಿಸುತ್ತದೆ ಎಂದು ತಿಳಿಸಲಾಗಿದೆ. ರಾಷ್ಟ್ರೀಯ ರೈತರ ಸಂಘದ ತಾಲೂಕಾ ಧ್ಯಕ್ಷ ಅಶೋಕಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಮೆಹಬೂಬ ಬಾಷಾ ಮನಗೂಳಿ, ಸಂಪತ್ ಬಿರಾದಾರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಣಮಂತ ವಡ್ಡರ, ಬಿಂಜಲಭಾವಿ ಗ್ರಾಮ ಘಟಕ ಅಧ್ಯಕ್ಷ ವಿಜಯಕುಮಾರ ಉಕ್ಕಲಿ, ಸಂಘಟನಾ ಕಾರ್ಯದರ್ಶಿ (ದೇ.ಹಿ.) ಸುಭಾಷ ಸಜ್ಜನ, ತಾಲೂಕ ಕಾರ್ಯದರ್ಶಿ ಶರಣು ಕೌದಿ, ತಾಲೂಕ ಅಧ್ಯಕ್ಷ (ದೇ.ಹಿ.) ಸಂಗು ಹುಣಸಗಿ, ಅಂಬೇಡ್ಕರ್ ಸೇನೆ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ, ಸಂಗು ಹುಣಸಗಿ, ಬಸವರಾಜ ಚಳ್ಳಗಿ, ಮಡಿವಾಳಪ್ಪ ಗುಮಶೆಟ್ಟಿ, ರಾಜು ಅಡಕಿ, ಚಂದ್ರಕಾಂತ ಬಡಿಗೇರ ಹಾಗೂ ವಿವಿಧ ಸಂಘಟನೆಗಳ ರೈತ ಪ್ರತಿನಿಧಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಂ.ಬಿ ಮನಗೂಳಿ.ತಾಳಿಕೋಟೆ