ಮಳೆಯಿಂದ ಮನೆ ಮೇಲ್ಚಾವಣಿ ಕುಸಿತ – ತಾಯಿ ಮಗಳು ಅಪಾಯದಿಂದ ಪಾರು.
ಆಲಮೇಲ ಸ.19





ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ತಾಯಿ ಮಗಳು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಗುರುವಾರ ರಾತ್ರಿ 10.30 ರ ಸುಮಾರಿಗೆ ಕಡಿಮೆ ಗ್ರಾಮದ ಭೋರಮ್ಮ.ಬೀರಪ್ಪ ಪೂಜಾರಿ ಅವರು ಮನೆಯಲ್ಲಿ ತಮ್ಮ ಮಕ್ಕಳೊಂದಿಗೆ ಮಲಗಿ ಕೊಂಡಿದ್ದಾಗ ಮನೆಯ ಮೇಲ್ಚಾವಣಿಯ ತುಂಡು ಬಿದ್ದ ಪರಿಣಾಮ ಭಯದಲ್ಲಿ ಹೊರಗೆ ಓಡಿ ಬಂದಿದ್ದಾರೆ ಆ ಸಂದರ್ಭದಲ್ಲಿ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿದೆ.ತಾಯಿ ಮತ್ತು ಮಕ್ಕಳಿಗೆ ಸಣ್ಣ ಪ್ರಮಾಣದ ಪೆಟ್ಟುಗಳು ಆಗಿವೆ. ಅದೃಷ್ಟವಶಾತ್ ಸುರಿಯುವ ಮಳೆಯಲ್ಲಿ ಹೊರಗೆ ಓಡಿ ಬಂದಿದ್ದರ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಆಲಮೇಲ ತಹಶಿಲ್ದಾರ್ ಧನಪಾಲ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ದೊರೆಯುವ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.ಗ್ರಾಮ ಲೆಕ್ಕಾಧಿಕಾರಿ ವೈ.ಎಸ್ ಗೊಂದಳಿ, ಶರಣು ವಾಲಿಕಾರ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮಲ್ಲಿಕಾರ್ಜುನ್ ಪ್ಯಾಟಿ, ಗ್ರಾ.ಪಂ ಸದಸ್ಯ ಭೋಗಣ್ಣ ಬಿರಾದಾರ, ಭೋಗೇಶ ಕತ್ತಿ, ಅನಿಲ ಕತ್ತಿ ಇದ್ದರು.
ಸ್ಥಳಕ್ಕೆ ಆಲಮೇಲ ತಾಲೂಕು ದಂಡಾಧಿಕಾರಿಗಳಾದ ದನಪಾಲ್ ಶೆಟ್ಟಿ ಭೇಟಿ ನೀಡಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಹಾಗೂ ಮನೆಗಳ ಕುಸಿತವಾಗಿರುವ ಸ್ಥಳಗಳಿಗೆ ಭೇಟಿ ನೀಡಿದರು.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಕಡಣಿ ಗ್ರಾಮದ ಬೋರಮ್ಮ ಬೀರಪ್ಪ ಪೂಜಾರಿ ಎಂಬುವರ ಮನೆ ಮೇಲ್ಚಾವಣಿ ಕುಸಿದು ಮನೆಯಲ್ಲಿ ಮಲಗಿದ್ದ ತಾಯಿ ಮತ್ತು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಯಾವುದೇ ಪ್ರಾಣ ಅಪಾಯ ಆಗಿರುವುದಿಲ್ಲ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಆಲಮೇಲ ತಾಲೂಕ ತಹಸಿಲ್ದಾರ ಸಾಹೇಬರ ಮಳೆಯಿಂದ ಮನೆ ಮೇಲ್ಚಾವಣಿ ಕುಸಿದು ಬಿದ್ದಿರುವ ಬೋರಮ್ಮ ಬೀರಪ್ಪ ಪೂಜಾರಿ ಎಂಬುವರ ಮನೆಗೆ ಭೇಟಿ ನೀಡಿ ಸರ್ಕಾರದಿಂದ ನೆರವು ಕೊಡಿಸುವುದಾಗಿ ಭರವಸೆ ನೀಡಿದರು ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ವೈ ಎಸ್ ಗೋಂದಳಿ ಗ್ರಾಮ ಸಹಾಯಕ ಶರಣು ವಾಲಿಕಾರ್ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಡಾ/ ಮಲ್ಲು ಪ್ಯಾಟಿ ಗ್ರಾಮ ಪಂಚಾಯಿತಿ ಸದಸ್ಯ ಪ್ರತಿನಿಧಿಯಾದ ಬೋಗಣ್ಣ ಬಿರಾದಾರ್ ಕೃಷಿ ಇಲಾಖೆಯ ಅನುವುಗಾರ ಭೋಗೇಶ್ ಕತ್ತಿ ಅನಿಲ್ ಕುಮಾರ್ ಕತ್ತಿ ಹಾಗೂ ಕಡಣಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹೀರೆಮಠ.ಆಲಮೇಲ