ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ – ಪರಿವರ್ತನೆ ಮಾದಕ ಮುಕ್ತ ಅಭಿಯಾನ ವತಿಯಿಂದ ಕಾರ್ಯಕ್ರಮ ಜರುಗಿತು.
ಕಡಕೋಳ ಸ.20

ಜಿಲ್ಲಾ ಪಂಚಾಯತ್ ವಿಜಯಪುರ ಕೌಶಲ್ಯಾಭಿವೃದ್ಧಿ ಉಧ್ಯಮ ಶೀಲತೆ ಮತ್ತು ಜೀವನೋಪಾಯ ಮಾದಕ ಮುಕ್ತ ಕರ್ನಾಟಕ ಅಭಿಯಾನ ವತಿಯಿಂದ. ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ಕಡಕೋಳ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ನೆರವೇರಿತು. ಪರಿವರ್ತನೆ ಮಾದಕ ಮುಕ್ತ ಕರ್ನಾಟಕ ಅಭಿಯಾನ ಅಧ್ಯಕ್ಷತೆ. ನೀಲಕಂಠ.ಮ ಹೆಬ್ಬಾಳ. ಎಸ್.ಡಿ.ಎಮ್.ಸಿ ಶಾಲಾ ಅಧ್ಯಕ್ಷರು ವಹಿಸಿದ್ದರು. ಉದ್ಘಾಟಕರು ದೇವೀಂದ್ರ.ಮಾ ಬಡಿಗೇರ ಅಧ್ಯಕ್ಷರು ಯಾಳವಾರ ಗ್ರಾಮ ಪಂಚಾಯತ ವಹಿಸಿದ್ದರು.

ಮುಖ್ಯ ಅತಿಥಿ ಗಳಾಗಿ ಷಣ್ಮುಕಪ್ಪ. ಅಂಬಲಿ ಶಿಕ್ಷಣ ಸಂಯೋಜಕರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ತಾಯಿ ತಂದೆ ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ ತಾಯಿ ಎಂಬ ಹಾಡಿನ ಮೂಲಕ. ನಾವು ಚಟ ಮುಕ್ತರಾಗಬೇಕು. ಮಾದಕ ವ್ಯಸನ ಗಳಾಗದೆ ದುಶ್ಚಟಗಳಿಂದ ದೂರವಿರಬೇಕು ನಾವು ಸದೃಢರಾಗಿ ಬಾಳ ಬೇಕಾದರೆ ತಂಬಾಕು ಗುಟುಕಾ ಸಿಗರೇಟ್ ದಂತ ದುಶ್ಚಟಗಳಿಂದ ದೂರವಿರ ಬೇಕು. ಎಂದು ಮಕ್ಕಳಲ್ಲಿ ತಿಳುವಳಿಕೆ ನೀಡಿ ನಮ್ಮ ಜಿಲ್ಲಾ ಪಂಚಾಯತ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದು ಕೊಳ್ಳಲು ಕರೆ ನೀಡಿದರು. ವಿಶೇಷ ಅತಿಥಿ ಗಳಾಗಿ ರಾಘವೇಂದ್ರ ಉಮ್ಮರಗಿ ಕರ್ನಾಟಕ ನಾಟಕ ಸಂಘದ ರಾಜ್ಯ ಸಂಚಾಲಕರು ಮಾತನಾಡಿ ಪಾಲಕರು ಮೊದಲು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ನೀವೇ ಕುಳಿತು ಮಕ್ಕಳಿಗೆ ತಂಬಾಕು ಗುಟುಕಾ ಸಿಗರೇಟು ಅಂಗಡಿಗೆ ಹೋಗಿ ತರಿಸುವುದು ಮಾಡಬೇಡಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿ ಎಂದು ಹೇಳಿದರು. ಅತಿಥಿಗಳಾಗಿ ನೂರ್ ಜಾನ್ ಕಣಮೇಶ್ವರ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರು. ಶಾಲಾ ಸದಸ್ಯರು ಗ್ರಾಮದ ಮುಖಂಡರಾದ ಸಂಗನಗೌಡ. ಸೊ. ಯಲರೆಡ್ಡಿ ಕೃಷಿ ಇಲಾಖೆ. ಸದಸ್ಯರು ಪಶು ಇಲಾಖೆ ಸದಸ್ಯರು. ಶ್ರೀಸೈಲ ಜಗುರ. ಸ್ನೇಹಾ ಸಂಘ ಸಂಪನ್ಮೂಲ ವ್ಯಕ್ತಿ. ಅಂಗನವಾಡಿ ಕಾರ್ಯಕರ್ತೆಯರು ರೇಣುಕಾ ಸಂಗಣ್ಣವರ ಇಂದಿರಾ ವಠಾರ ಗಸ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ಎಮ್.ಬಿ ಕೆ.ಹುಸೇನ್ ಸಾಬ್ ಕರಡಿ. ಕ.ನಾ.ಸ ಸದಸ್ಯರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಖ್ಯ ಗುರುಗಳಾದ ಬಸವರಾಜ ಹಾವಳಗಿ. ಸ್ವಾಗತಿಸಿದರು. ಇಸ್ಮಾಹಿಲ್. ಹಿರಿಯ ಶಿಕ್ಷಕರು ರಘು ಎಸ್. ಸಹ ಶಿಕ್ಷಕರು ಶ್ರೀ ಮತಿ ವಿಜಯಲಕ್ಷ್ಮಿ ಮಂಕನಿ ಉಪಸ್ಥಿತರಿದ್ದರು. ಕುಮಾರಿ ಸುಷ್ಮಾ ಅವಟಿ ಕಾರ್ಯ ಕ್ರಮದ ಕೇಂದ್ರ ಬಿಂದುವಾಗಿ ಅಚ್ಚು ಕಟ್ಟಾಗಿ ಮುದ್ದಾಗಿ ನಿರೂಪಣೆ ಮಾಡಿದರು ಕುಮಾರಿ ಮಧುಮತಿ ವಂದಿಸಿದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಚಿದಾನಂದ.ಬಿ ಉಪ್ಪಾರ.ಸಿಂದಗಿ

