ಭಾರೀ ಮಳೆಯಿಂದ ಮನೆ ಒಳಗೆ ನುಗ್ಗಿರುವ ನೀರು – ಜನರಲ್ಲಿ ಆಂತಕ.
ತಾರಪುರ ಸ.20





ಆಲಮೇಲ ತಾಲೂಕಿನ ತಾರಾಪೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಲಾಲಪ್ಪ.ನಿಜಪ್ಪ ಹರಿಜನ ಎಂಬುವರ ಮನೆಗೆ ಏಕಾಏಕಿಯಾಗಿ ಮಳೆ ನೀರು ನುಗ್ಗಿರುವುದರಿಂದ ಮನೆಯಲ್ಲಿ ಮೊಣಕಾಲು ಮಟ್ ನೀರು ನಿಂತಿರುವುದ ರಿಂದ ಬೆಳಗಿನ ಜಾವದ ವರೆಗೆ ಮಕ್ಕಳೊಂದಿಗೆ ಕುಟುಂಬಸ್ಥರು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಒಳಗೆ ನುಗ್ಗಿದ ನೀರನ್ನು ಹೊರ ಹಾಕಲು ಹರ ಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರಿನಿಂದ ಮನೆಯಲ್ಲಿ ಇಟ್ಟ ಜೋಳ ಗೋಧಿ ಹಾಗೂ ಇನ್ನಿತರ ಕಾಳು ಕಡಿಗಳು ಹಾಳಾಗಿದ್ದು ಮನೆಯೊಳಗೆ ನೀರು ನುಗ್ಗಿರುವ ಕಾರಣ ಗಂಗಪ್ಪ ಗೌರ ಎಂಬುವರ ಮನೆಯ ಗೋಡಿ ಕುಸಿದು ಬಿದ್ದಿರುತ್ತವೆ ಸ್ಥಳಕ್ಕೆ ಆಲಮೇಲ ತಹಶೀಲ್ದಾರ್ ಸಾಹೇಬರ ಸೂಚನೆ ಮೇರೆಗೆ.

ಗ್ರಾಮ ಲೆಕ್ಕಾಧಿಕಾರಿಯಾದ ಮಡಿವಾಳಪ್ಪ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಕೂಡಲೇ ಮೇಲಾಧಿಕಾರಿಗಳು ಗಮನಕ್ಕೆ ತರುತ್ತೇನೆ ಎಂದು ಹೇಳಿದರು ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆ ರೈತರಿಗೂ ಹಾಗೂ ಗ್ರಾಮಸ್ಥರಿಗೂ ಇನ್ನು ಏನಾಗುತ್ತೋ ಎನ್ನುವ ಆಂತಕದಲ್ಲಿ ಜನರು ಕಾಲ ಕಳೆಯುವು ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಭೀಮಾ ನದಿ ತೀರದ ಗ್ರಾಮಗಳ ಜನರಿಗೆ ಬಹಳ ತೊಂದರೆ ಯಾಗುತ್ತಿದ್ದು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ಭೀಮಾ ನದಿಗೆ ಉಜ್ಜನಿ ಡ್ಯಾಮಿನಿಂದ ನೀರು ಬಿಡಬಹುದು ಎಂಬ ಆತಂಕ ಒಂದು ಕಡೆಯಾದರೆ ಸತತವಾಗಿ ಭಾರಿ ಮಳೆಯಾಗುತ್ತಿರುವರಿಂದ ಭಯ ಇನ್ನೊಂದೆಡೆ.ವರ್ಷವಿಡಿ ಭೀಮಾ ತೀರದ ಜನತೆ ಭಯದಿಂದ ಬದುಕುವಂತ ಪರಿಸ್ಥಿತಿ ಎದುರಾಗುತ್ತಿದೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸ ಬೇಕೆಂದು ಗ್ರಾಮಸ್ಥರು ಹಾಗೂ ರೈತರು ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ