ಗ್ರಾಮದ ಬಡ ರೈತ ರಮೇಶನ – ಕಾಡ್೯ ಕಟ್.
ಮಾನ್ವಿ ಸ.20





ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಿಪಿಎಲ್ ಕಾರ್ಡ್ ಕೊಡುತ್ತೇವೆಂದು ಸರಕಾರ ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಡ ರೈತ ರಮೇಶ ನಾಯಕನ ಹೆಸರಲ್ಲಿದ್ದ ಬಿಪಿಎಲ್ ಕಾರ್ಡ್ ಮಾಡಿರುವುದು ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಶ್ರೀಮಂತರ ಕೈಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇದ್ದರು ಸಹ ಸರ್ವೇ ಮಾಡಿ ರದ್ದು ಪಡಿಸದೆ ಬಡವರ ಹೆಸರಲ್ಲಿದ್ದ ಪಡಿತರ ಕಾರ್ಡ್ ಗಳನ್ನು ರದ್ದು ಮಾಡುತ್ತಾರೆಂದರೆ ಆಹಾರ ಇಲಾಖೆ ಅಧಿಕಾರಿಗಳು ಶ್ರೀಮಂತರ ಪರವಾಗಿದ್ದಾರಾ ಎಂದು ರಮೇಶ ನಾಯಕ ಗಂಭೀರ ಆರೋಪ ಮಾಡಿದ್ದಾರೆ.
ಮಾನ್ವಿ ತಾಲೂಕಲ್ಲಿ ಬಡ ರೈತರು ನಮಗೆ ರೇಷನ್ ಕಾರ್ಡ್ ಕೊಡಿ ಎಂದು ನಿತ್ಯ ಮಾನ್ವಿ ಕಂದಾಯ ಕಚೇರಿಗೆ ಅಲೆದರು ಸಹ ಬಡವರ ಚಪ್ಪಲಿ ಸವೆಯುತ್ತಿವೆ ಹೊರತು ಬಡವರಿಗೆ ನ್ಯಾಯ ಮಾತ್ರ ಸಿಕ್ಕಿಲ್ಲಾ ಎಂಬುದು ಇಲ್ಲಿ ಜಗಜ್ಜಾಯಿರಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ