ಸಂದೇಹಗಳನ್ನು ದೂರೀಕರಿಸಿ ಶಾಂತಿ ಸ್ಥಾಪಿಸಿ – ಬಾಬರ್ ಬೇಗ್.
ಮಾನ್ವಿ ಸ.20





ಭಾರತದಂತಹಾ ವಿವಿಧತೆ ಯಿಂದ ಕೂಡಿದ ಸಮಜ ಸದೃಢವಾಗ ಬೇಕಾದರೆ, ಆ ಸಮಾಜದ ನಡುವೆ ಸಂದೇಹಗಳಿರ ಬಾರದು. ಒಂದು ವೇಳೆ ಸಂದೇಹಗಳಿದ್ದರೆ, ಆ ಸಮಾಜದಲ್ಲಿ ಶಾಂತಿ ಉಳಿಯಲು ಸಾಧ್ಯವಿಲ್ಲ. ಪರಸ್ಪರರನ್ನು ಹಾಗೂ ಅವರ ಧರ್ಮವನ್ನು ಅರಿಯುವುದರ ಮೂಲಕ ಸಂದೇಹಗಳನ್ನು ದೂರೀಕರಿಸಿ, ಶಾಂತಿ ಸ್ಥಾಪಿಸ ಬೇಕಾಗಿದೆ ಎಂದು ಸೀರತ್ ಅಭಿಯಾನದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಬರ್ ಬೇಗ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.ಜಮಾಅತೇ ಇಸ್ಲಾಮೀ ಹಿಂದ್ ಮಾನವಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೀರತ್ ಅಭಿಯಾನ ಸಮಾರೋಪ ಕಾರ್ಯಕ್ರಮವನ್ನು ನಗರದ ಕುಬಾ ಮಸ್ಜಿದ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಿನ್ಹಾಜ್ ಉಲ್ ಹಸನ್ ರವರು ಜೀವನದಲ್ಲಿ ನೀವು ಏನೇ ಆಗಿ, ಆದರೆ ಒಳ್ಳೆ ಮನುಷ್ಯರಾಗಿ. ಮಹಮ್ಮದ್ ಪೈಗಂಬರರು ಮನುಷ್ಯರನ್ನು ಮನುಷ್ಯರಾಗಿಸಲು ಬಂದರು. ಅವರನ್ನು ಅರಿಯಲು ಈ ಸೀರತ್ ಅಭಿಯಾನ ಸಹಕಾರಿಯಾಗಿದೆ ಎಂದರು.
ಜಮಾಅತಿನ ವತಿಯಿಂದ ಪ್ರಬಂಧ ಸ್ಪರ್ಧೆಯನ್ನು ವಿವಿಧ ಕಾಲೇಜುಗಳಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಪ್ರಥಮ ಸ್ಥಾನ ಪಡೆದು ಕೊಂಡರೆ, ಬಬ್ರುವಾಹನ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಸರ್ವೋದಯ ಕಾಲೇಜಿನ ತನಜ್ ಆಸ್ಮಿನ್ ದ್ವಿತೀಯ ಪಿ.ಯು.ಸಿ ಯವರು ಪಡೆದು ಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಬಾಬರ್ ಬೇಗ್ ಸಾಬ್ ಸಿಂದನೂರ್ ಮುಖ್ಯ ಅತಿಥಿಗಳಾಗಿ ಸೈಯದ್ ಮಿನ್ಹಾಜ್-ಉಲ್-ಹಸನ್ ಜಿಲ್ಲಾಧ್ಯಕ್ಷ KSG MEWA ರಾಯಚೂರು ಪ್ರಾಂಶುಪಾಲರು ಬಾಶುಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ವಿ ಸೈಯದ್ ಮುಜೀಬ್ ಅಹೆಮದ್ ಉಪನ್ಯಾಸಕರು, ಬಾಶುಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ವಿ ಅಬ್ದುಲ್ ರೆಹಮಾನ್, ಸಾಬ್ ಅಧ್ಯಕ್ಷರು ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ಅಬ್ದುಲ್ ಅಜೀಮ್ ಅಧ್ಯಕ್ಷರು SIO ಮಾನ್ವಿ ಎಮ್.ಎಎಚ್. ಮುಖೀಮ್ ಸೀರಾತ್ ಅಭಿಯಾನ ಸಂಚಾಲಕರು ಸಬ್ಜಾಲಿ ಶಿಕ್ಷಕರು JIH ಪ್ರಧಾನ ಕಾರ್ಯದರ್ಶಿಗಳು ಸೈಯದ್ ಅಕ್ಬರ್ ಪಾಶ ಸಾಬ್ ಅಬ್ದುಲ್ ಕರೀಂ ಖಾನ್ ಸಾಬ್ ಮೊಹಮ್ಮದ್ ದಾವುದ್ ಸಿದ್ದಿಕಿ ಸಾಬ್ಅಬ್ದುಲ್ ರೌಫ್ ಸಾಬ್ ಉಮರ್ ಫಾರೂಕ್ ಅಬ್ದುಲ್ ರಹೀಮ್ ಶೇಕ್ ಫಾರಿದ್ ಉಮರಿ ಶೇಕ್ ಬಾಬು ಹುಸೇನ್ ನಸೀರ್_ಅಲಿ SIO ಹಾಗೂ SYM JIH ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ