“ಜೀವ ಕಣ ಕಣದಲ್ಲೂ ಋಣದ ಭಾರ”…..

ಋಣ ಇದೆ ಅಂದಾಗ ಗುಣ ಶ್ರೇಷ್ಠ




ಮೇಲೆತ್ತರದಲಿ ಇದ್ದರೂ ಮರೆಯದಿರು
ಸಹಾಯ ಸಹಕಾರವಿಲ್ಲದೆ ನಿನ್ನಾಟವಿಲ್ಲ
ಅಭಿವೃದ್ಧಿಗೆ ಪೂರಕ
ಏಕಾಂಗಿತನದವ ನರಕ ಕೂಪದಲಿಯ
ಬಳಲುವ ಜೀವವು
ದೇವ ನೀಡಿದ ಜೀವಾತ್ಮ ಹೆತ್ತವರ ಋಣ
ತೀರಿಸಲಾಸಾಧ್ಯ
ನೀಡಿದ ಜನ್ಮಾನುಬಂಧ ಸಕಲರಿಂದ ಕಲಿತ
ಜ್ಞಾನಾನುಭವ ಋಣಾನುಭವ
ಸಮಾಜ ನರೆಹೊರೆಯವರ ಸ್ನೇಹಿತರ ಒಲುಮೆ
ಸೌಹಾರ್ದತೆ ಋಣಾನುಬಂಧ
ಸೃಷ್ಠಿಯ ಸಿರಿ ಸವಿ ಸುಖವು ನಿತ್ಯ ಬಾಳ್ವೆಗೆ
ಬೆಳಕು
ಪಡೆದ ಪದವಿ ದೊರೆತ ಸೌಕರ್ಯ
ಅನುಭವಿಸಿದ ಜ್ಞಾನ ಹರುಷವೆಲ್ಲವೂ
ಹೆತ್ತವರ ಅರಿವಿನ ಜ್ಞಾನ ಬೆಳಗಿಸಿದವರ
ಹೊತ್ತ ಭೂಮಾತೆಯ ತೃಷೆ ತಣಿಸಿದ
ಉಸಿರಾದ ವಾಯು ಮೇಘರಾಜನ
ಜೀವ ಕಣ ಕಣದಲ್ಲೂ ಋಣದ ಭಾರ
ತೀರಿಸಲಾಗದು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ