ಮುಸ್ಲಿಂ ಮಕ್ಕಳ ಬಸವಾದಿ ಶರಣರ ವಚನ – ಪ್ರೀತಿಗೆ ಶ್ಲಾಘನೀಯ.
ಚಳ್ಳಕೆರೆ ಸ.21





ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಳ್ಳಕೆರೆ ನಗರದ ಕನ್ನಡ ಕೌಸ್ತುಭ ನಿಲಯದ ಲೇಖಕಿ, ಶಿಕ್ಷಕ ದಂಪತಿಗಳಾದ ಶಬ್ರಿನಾ & ಮಹಮದ್ ಅಲಿಯವರ ಮಕ್ಕಳಾದ ಇನ್ಷಾ ಎಂ.ಎಸ್, ಶಿಫಾ ಎಂ.ಎಸ್, ವಿಹಾನ್ ಅಲಿ ಎಂ.ಎಸ್ & ಆಶಾಬಿ ದಾದಾಪೀರ್ ಸುಪುತ್ರಿಯಾದ ತೇಜ್ಮಿನ್ ಅವರು ಸರಾಗವಾಗಿ ವಚನಗಳನ್ನು ತುಂಬಾ ಸ್ಪಷ್ಟವಾಗಿ ವಾಚನ ಮಾಡಿರುವುದು ನೋಡಿದರೆ ತುಂಬಾ ಸಂತಸವಾಗುತ್ತದೆ.

ಕಾರಣ ವಚನಗಳು ನಮ್ಮ ಕನ್ನಡ ನೆಲದ ಅಸ್ಮಿತೆಯಾಗಿವೆ. ೧೨ ನೇ. ಶತಮಾನದಲ್ಲಿ ಬಸವಾದಿ ಶರಣರು ಸಮಾಜದ ಮೌಢ್ಯವನ್ನು ತಮ್ಮ ವಚನಗಳಲ್ಲಿ ಖಂಡಿಸುವ ಮೂಲಕ ಜನರನ್ನು ಜಾಗೃತೆ ಗೊಳಿಸುತಿದ್ದರು.
ಅಂತಹ ಮೌಲಿಕ ವಚನಗಳನ್ನು ಈ ಮಕ್ಕಳ ಬಾಯಲ್ಲಿ ಕೇಳಿದರೆ ಅತ್ಯಂತ ಸಂತಸವಾಗುವುದು. ನಮ್ಮ ನೆಲ ಜಾತ್ಯಾತೀತವಾದದ್ದು ಎಂಬುದಕೆ ಇದು ಕೂಡ ಒಂದು ಸಾಕ್ಷಿಯಾಗಿ ನಿಂತಿದೆ ಎಂದರೆ ಅತಿಶಯೋಕ್ತಿಯಲ್ಲ.
ವರದಿ:ಮಾರುತಿ ಹೊಸಮನಿ