ಜನಗಣತಿಯಲ್ಲಿ ಧರ್ಮದಲ್ಲಿ ‘ಹಿಂದೂ’ ಜಾತಿಯಲ್ಲಿ ‘ಹಡಪದ’ ಎಂದು ನಮೂದಿಸಿ – ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಕರೆ.
ಕಲಬುರಗಿ ಸೆ.21





ರಾಜ್ಯ ಸರಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಜನಗಣತಿ ಸಮೀಕ್ಷೆಯ ಜಾತಿ ಕೋಡ್ ಸಂಖ್ಯೆ- 0445 ಇದ್ದು ಇದರಲ್ಲಿ ಹಡಪದ ಸಮಾಜದ ಧರ್ಮ ಕಲಂನಲ್ಲಿ ‘ಹಿಂದೂ’, ಜಾತಿ ಕಾಲಂನಲ್ಲಿ ‘ಹಡಪದ’ ಎಂದು ನಮೂದಿಸುವಂತೆ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಂಘದ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ಕರೆ ನೀಡಿದರು.ಅವರು ಕಲಬುರಗಿ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಂಘದಿಂದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕುರಿತು ಕಲಬುರಗಿ ಜಿಲ್ಲೆಗಳ ಹಡಪದ ಅಪ್ಪಣ್ಣ ಸಂಘದ ವತಿಯಿಂದ ಜನತೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ಅತೀ ತುರ್ತಾಗಿ ಸಮಾಜದ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರುಗಳು ತಮ್ಮ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಭೆ ನಡೆಸಿ ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.ಹಡಪದ ಅಪ್ಪಣ್ಣ ಸಮಾಜದವರು ರಾಜ್ಯದಲ್ಲಿ ಸುಮಾರು 12 ರಿಂದ 14 ಲಕ್ಷ ಜನ ಸಂಖ್ಯೆಯಲ್ಲಿದ್ದಾರೆ. ಆದರೆ ಹಿಂದಿನ ಜಾತಿ ಗಣತಿ ಸಮೀಕ್ಷೆಯಲ್ಲಿ ಹಡಪದ ಸಮಾಜದ ಜನ ಸಂಖ್ಯೆಯನ್ನು ಕೇವಲ ೧ ಲಕ್ಷ .೬೨ ಸಾವಿರ ಎಂದು ನಮೂದಿಸಲಾಗಿತ್ತು ಆದರೆ ಕಲಬುರಗಿ ಜಿಲ್ಲೆಯಲ್ಲಿಯೇ ಸುಮಾರು ೬೦ರಿಂದ ೭೦ ಸಾವಿರ ಜನಸಂಖ್ಯೆ ಹಡಪದ ಜನಾಂಗದ ಮತದಾರರಿದ್ದಾರೆ. ಆದ್ದರಿಂದ ಸರ್ಕಾರ ಹಡಪದ ಜನಾಂಗವನ್ನು ಕುಲ ಜಾತಿಗಳ ಹೆಸರಿನಲ್ಲಿ ಒಡೆಯಬಾರದು, ಹಡಪದ ಸಮಾಜಕ್ಕೆ ಆಗಿರುವ ಅನ್ಯಾಯ ಮತ್ತು ನೋವನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಈ ಜಾತಿ ಗಣತಿಯಲ್ಲಿ ಹಡಪದ ಜನಾಂಗದವರು ಯಾವುದೇ ಉಪ ಜಾತಿ (ಪಂಗಡಗಳು) ನಮೂದಿಸದೇ ‘ಜಾತಿ-ಹಡಪದ, ಮತ್ತು ಉಪಜಾತಿ-ಹಡಪದ, ಧರ್ಮ-ಹಿಂದು, ಮತ್ತು ಭಾಷೆ -ಕನ್ನಡ, ಎಂದು ನಮೂದಿಸಿ, ಸಮಾಜದ ಬಂಧುಗಳು ಸಮಾಜದ ಹಿರಿಯ ಮುಖಂಡರು. ಮತ್ತು ಹಡಪದ ಅಪ್ಪಣ್ಣ ಸಮಾಜದ ನೌಕರಸ್ಥರು, ಕಾಯಕ ಬಂಧುಗಳು, ಯಾವುದೇ ಗೊಂದಲದ ಸುದ್ದಿಗಳಿಗೆ ಕಿವಿ ಕೊಡದೆ (ಹಾಕದೇ) ಇಡೀ ರಾಜ್ಯದ ಸಮಸ್ತ ಹಡಪದ ಅಪ್ಪಣ್ಣ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಈ ಕೆಲಸ ಮಾಡಬೇಕು. ಹಡಪದ ಅಪ್ಪಣ್ಣ ಸಮುದಾಯದಲ್ಲಿ ಈಗಾಗಲೇ ಸಮುದಾಯದ ಪೂಜ್ಯರಾದ ಶ್ರೀ ಅನ್ನಧಾನಿ ಭಾರತೀ ಅಪ್ಪಣ್ಣ ಮಹಾ ಸ್ವಾಮಿಗಳ ಹಾಗೂ ರಾಜ್ಯದ ಸಮಸ್ತ ಜಿಲ್ಲಾಧ್ಯಕ್ಷರ ಮತ್ತು ಅನೇಕ ತಾಲೂಕು ಅಧ್ಯಕ್ಷರ ಹಾಗೂ ಸಮಾಜದ ಹಿರಿಯರು, ಮಾರ್ಗದರ್ಶಕರು, ಮಹಿಳಾ ತಾಯಂದಿರು, ಯುವಕ ಮಿತ್ರರು ಶ್ರೀಮಠದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಾಗಿ ನಾವೆಲ್ಲರೂ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಈ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸೋಣ್ಣಾ .ಎಂದು ಶಪಥ್ ಮಾಡಿದರು. ಈ ಒಗ್ಗಟ್ಟನ್ನು ಎಚ್ಚೆತ್ತು ಕೊಳ್ಳದಿದ್ದರೆ ಭವಿಷ್ಯದಲ್ಲಿ ಬಾರಿ ಬೆಲೆ ತೆರ ಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಧರ್ಮದ ಕಾಲಂನಲ್ಲಿ ಬೇರಾವುದನ್ನು ಬರಸ ಬಾರದು. ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳು ಶ್ರೀ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ಈ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟಣೆ ತಿಳಿಸಿದರು. ಪ್ರತಿ ಹಳ್ಳಿಗಳ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಕುರಿತು ಮಾಹಿತಿ ನೀಡಬೇಕು. ಇದರಲ್ಲಿ ಧರ್ಮ ಕಲಂನ ಲ್ಲಿ ʼಹಿಂದೂʼ ಜಾತಿ ಕಾಲಂನಲ್ಲಿ ‘ಹಡಪದʼ ಉಪ ಜಾತಿ ಕಲಂ ನಲ್ಲೂ ಹಡಪದ, ಎಂದೇ ನಮೂದಿಸಲು ಜಾಗೃತಿ ಮೂಡಿಸಬೇಕು ಎಂದರು.