ಈ ಜಗತ್ತನ್ನು ಹಾಗೂ ಜಗತ್ತಿನಲ್ಲಿನ ಪ್ರತಿಯೊಂದು ವಸ್ತುಗಳನ್ನು ಸೃಷ್ಟಿಸಿದ್ದು ದೇವಶಿಲ್ಪಿ ವಿಶ್ವಕರ್ಮರು – ಶ್ರೀ ಕಾಳಾಹಸ್ತೇಂದ್ರಚಾರ್ ಮಹಾ ಸ್ವಾಮಿಗಳು.

ಮಾನ್ವಿ ಸಿ.21

ತಾಲೂಕಿನ ಸಂಗಪುರ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯವರಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಶಹಾಪುರ ಮಠದ ಶ್ರೀ ಕಾಳಾಹಸ್ತೇಂದ್ರಚಾರ್ ಮಹಾಸ್ವಾಮಿಗಳು ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿ ಈ ಜಗತ್ತನ್ನು ಹಾಗೂ ಜಗತ್ತಿನಲ್ಲಿನ ಪ್ರತಿಯೊಂದು ವಸ್ತುಗಳನ್ನು ಸೃಷ್ಟಿಸಿದ್ದು ದೇವಶಿಲ್ಪಿ ವಿಶ್ವಕರ್ಮರು ಎಲ್ಲಿಯವರೆಗೂ ನಾವು ಗುರುಮಠಗಳನ್ನು ರಕ್ಷಣೆ ಮಾಡುತ್ತಿರೋ ಅಲ್ಲಿಯ ವರೆಗೆ ನಿಮ್ಮಗೆ ಗುರು ರಕ್ಷೆ ದೊರೆಯುತ್ತದೆ ,ದೇಶದ ಸನಾತನ ಧರ್ಮ ವಿಶ್ವಕರ್ಮ ವಾಗಿದ್ದು ಸರಿಯಾದ ಸಮಯಕ್ಕೆ ನಿಮ್ಮ ಮಕ್ಕಳಿಗೆ ಉಪನಾಯನ ಸಾಂಸ್ಕರ ನೀಡಿ,ಗಾಯತ್ರಿ ಮಂತ್ರ ಹೇಳಿ ಕೋಟ್ಟು ನಮ್ಮ ಧರ್ಮದ ಪದ್ದತಿಗಳನ್ನು ಕಳಿಸಿಕೊಟ್ಟಗಾ ಮಾತ್ರ ನಮ್ಮ ಧರ್ಮ ಪರಂಪರೆಯು ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಸಮಾಜದಲ್ಲಿನ ಪ್ರತಿಯೊಬ್ಬ ಕಾಯಕಯೊಗಿಗಳಿಗೆ ಅಗತ್ಯವಿರುವ ಕಾಯಕ ಸಲಕರಣೆಗಳನ್ನು ತಯಾರಿಸಿ ಕೊಡುವವರು ವಿಶ್ವಕರ್ಮ ಸಮುದಾಯದವರು.

ಸಾವಿರಾರು ವರ್ಷಗಳಿಂದ ನಮ್ಮ ಶಿಲ್ಪಿಗಳು ಕೇತ್ತಿದ ಮೂರ್ತಿಗಳು ಪೂಜೆಗೊಳಪಡುತ್ತಿವೆ. ನಮ್ಮ ಸಮಾಜದವರು ನಿರಂತರವಾಗಿ ಹೋರಾಟ ಮಾಡಿದರ ಫಲವಾಗಿ ರಾಜ್ಯ ಸರ್ಕಾರವು ದೇವಶಿಲ್ಪಿ ವಿಶ್ವಕರ್ಮರ ಹಾಗೂ ಅಮರಶಿಲ್ಪಿ ಜಕಣಾಚಾರಿ ರವರ ಜಯಂತಿಗಳನ್ನು ಸರ್ಕಾರದಿಂದಲೇ ಆಚರಿಸುವುದಕ್ಕೆ ಅವಕಾಶ ದೊರೆತ್ತಿದೆ. ರಾಜ್ಯದಲ್ಲಿ ೩೫ ಲಕ್ಷ ಜನಸಂಖ್ಯೆ ಇರುವ ವಿಶ್ವಕರ್ಮ ಸಮುದಾಯದವರು ತಮ್ಮ ಕುಲ ವೃತ್ತಿಗಳಾದ ಬಡಿಗೇರ, ಶಿಲ್ಪಿ, ಕಮ್ಮರ, ಪತ್ತಾರ, ಎನ್ನುವ ಹೆಸರಿನಿಂದ ಗುರುತಿಸಿ ಕೊಂಡಿದ್ದರಿಂದ ಜಾತಿ ಗಣತಿಯಲ್ಲಿ ಕೇವಲ ೮ ಲಕ್ಷ ಎಂದು ಹೇಳಲಾಗುತ್ತಿದೆ ಪಂಚಕುಲ ವೃತ್ತಿಗಳನ್ನು ಮಾಡುವವರು ನಾವೇಲ್ಲರು ಒಂದೇ ವಿಶ್ವಕರ್ಮ ಎಂದು ಗುರುತಿಸಿ ಕೊಂಡಾಗ ಮಾತ್ರ ನಮ್ಮ ಸಮುದಾಯದ ಸಂಘಟನೆ ಹೊಂದಿ ಸರ್ಕಾರದಿಂದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಅದ್ದರಿಂದ ಸೆ.೨೨ ರಿಂದ ಅ.೭ ರ ವರೆಗೆ ರಾಜ್ಯದಲ್ಲಿ ನಡೆಯುವ ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಕಾಲಂ.ಎ-೧೫೩೮ ರಲ್ಲಿ ಇರುವಂತೆ ಧರ್ಮ ಹಿಂದೂ, ಜಾತಿ ವಿಶ್ವಕರ್ಮ, ಉಪಜಾತಿ ವಿಶ್ವಕರ್ಮ ಎಂದು ಮಾತ್ರ ಬರೆಸ ಬೇಕು ನಮ್ಮ ಕುಲ ಕಸಬುಗಳ ಹೆಸರನ್ನು ಬರೆಸ ಬಾರದು ಎಂದು ತಿಳಿಸಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲಿಯರು ಕಳಸ, ಕುಂಭಗಳೊಂದಿಗೆ ಜನಪದ ಕಲಾ ತಂಡಗಳೊಂದಿಗೆ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ದೇವದುರ್ಗಮಠದ ಶ್ರೀ ಅಜ್ಜೇಂದ್ರ ಮಹಾಸ್ವಾಮಿಗಳು, ವಿಶ್ವಕರ್ಮ ಸಮುದಾಯದ ಮುಖಂಡರಾದ ಸುರೇಶ ವಿಶ್ವಕರ್ಮ, ಬ್ರಹ್ಮಯ್ಯವಿಶ್ವಕರ್ಮ, ಮಲ್ಲಪ್ಪಗೌಡ, ವೀರನಗೌಡ, ಬಸಪ್ಪ ಮಿರ್ಜಾಪುರ, ಅರುಣಕುಮಾರ ಪುರಾಣಿಕ, ಗ್ರಾ.ಪಂ ಸದಸ್ಯರಾದ ನರಸಯ್ಯನಾಯಕ, ಹನುಮಂತ್ರಾಯ, ಕೆ. ಹನುಮಂತ್ರಾಯ, ಸುರೇಶ, ದೇವರಾಜ, ಶೇಖರಪ್ಪ, ಮೌನೇಶ, ಈರಪ್ಪ ಸೇರಿದಂತೆ ಇನ್ನಿತರರು ಇದ್ದರು.

ಬಾಕ್ಸ್ ನ್ಯೂಸ್:-

ತಾಲೂಕಿನ ಸಂಗಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ನಡೆಯಿತು.

ಬಾಕ್ಸ್ ನ್ಯೂಸ್:-

ತಾಲೂಕಿನ ಸಂಗಪೂರ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯದವರಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಹಾಪುರ ಮಠದ ಶ್ರೀ ಕಾಳಾಹಸ್ತೇಂದ್ರಚಾರ್ ಮಹಾ ಸ್ವಾಮಿಗಳು ಆರ್ಶೀವಚನ ನೀಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button