ಕಳ್ಳರ ಹಾವಳಿ ತಪ್ಪಿಸಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ – ಸ್ಥಳೀಯರ ಆಗ್ರಹ.
ಬೆಳವಣಿಕೆ ಸ.21





ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದ ಬಸ್ ನಿಲ್ದಾಣದ ಮೈಲಾರಪ್ಪ ವಗ್ಗರ ಎಂಬ ಬಡ ವ್ಯಕ್ತಿಯ ಪಾನ್ ಶಾಪ್ ಅಂಗಡಿಗೆ ನುಗ್ಗಿದ ಕಳ್ಳರು 35,000 ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ದಿನಾಂಕ 19-09-2025 ರಂದು ಮಧ್ಯರಾತ್ರಿ ಘಟನೆ ಒಂದು ನಡೆದಿದೆ.
ಅಂಗಡಿಯಲ್ಲಿ ವಸ್ತುಗಳನ್ನೆಲ್ಲಾ ವ್ಯಾಪಾರಕ್ಕಾಗಿ ಜೋಡಿಸಿ ಎಂದಿನಂತೆ ವ್ಯಾಪಾರ ಮುಗಿಸಿ ಕೊಂಡು ಸುಮಾರು 9:30 ರ ವೇಳೆಗೆ ಮನೆಗೆ ಹೋಗಿದ್ದಾರೆ. 19-09-2025 ರಾತ್ರಿ ಸುಮಾರಿಗೆ ಕಳ್ಳರು ಬಂದು ಅಂಗಡಿ ಬಾಗಿಲು ಒಡೆದು ಹಣ ಹಾಗೂ ವಸ್ತುಗಳನ್ನು ತಗೆದುಕೊಂಡು ಹೋಗಿರುವ ಘಟನೆ ನಡೆದಿದೆ ಹಾಗೂ ಆ ಪ್ರಕರಣ ರೋಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ರೋಣ ಪೊಲೀಸ್ ಠಾಣಾ ಸಿಬ್ಬಂದಿಗಳು ಮಂಜು ಬಂಡಿವಡ್ಡರ, ಬಸವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸರ್ಕಾರದ ನಿಯಮದ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ಬೆಳವಣಿಕಿ ಗ್ರಾಮದಲ್ಲಿ ಜನರ ಹಿತಾಸಕ್ತಿ ಒಳಗೊಂಡು ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ಸಾಕಷ್ಟು ಭಾರಿ ಗ್ರಾಮಸ್ಥರು ಪಂಚಾಯತ ಅವರಿಗೆ ಹೇಳಿದರು. ಕೂಡ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲಾ.
ರೋಣ ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಬೆಳವಣಿಕೆಯಲ್ಲಿ ಅಪರಾಧ ಪ್ರಕರಣ ಹಾಗೂ ಕಳ್ಳತನಕ್ಕೆ ಕಡಿವಾಣ ಹಾಕಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸ ಬೇಕು ಎಂದು ಹಲವು ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದರೂ ಗ್ರಾಮ ಪಂಚಾಯಿತಿಯವರಾಗಲಿ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲಾ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಟ್ಟಣದ ಪ್ರಮುಖ ವೃತ್ತಗಳಾದ ಚನ್ನಮ್ಮ ಸರ್ಕಲ್, ಬಸ್ ನಿಲ್ದಾಣ, ಪಿ.ಯು ಕಾಲೇಜ ರೋಡ್, ಸಂತೆ ಬಜಾರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ಸರ್ಕಲ್, ಭಗತ್ ಸಿಂಗ್ ನಗರ, ಛತ್ರಪತಿ ಶಿವಾಜಿ ಸರ್ಕಲ್ ಇನ್ನೂ ಅನೇಕ ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸ ಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನಮ್ಮ ಪತ್ರಿಕೆ ಮಾಧ್ಯಮದದೊಂದಿಗೆ ಮಾತನಾಡಿದ ಆ ಅಂಗಡಿಯ ಮಾಲೀಕ ಹೋದ ವರ್ಷ ದಸರಾ ಸಂದರ್ಭದಲ್ಲಿ ಈ ಹಿಂದೆಯೂ ಕೂಡ ನಮ್ಮ ಅಂಗಡಿ ಕಳ್ಳತನವಾಗಿತ್ತು ಅವಾಗ ಸುಮಾರು 50 ಸಾವಿರ ರೂಪಾಯಿಗಳು ಮತ್ತು ಸಣ್ಣ ಪುಟ್ಟ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು.ಅಷ್ಟೇ ಅಲ್ಲದೆ ಬೆಳವಣಿಕಿ ಗ್ರಾಮದಲ್ಲಿ ಅನೇಕ ಅಂಗಡಿಗಳ ಕಳ್ಳತನ ಮೇಲಿಂದ ಮೇಲೆ ಆಗುತ್ತಿದೆ ನಮ್ಮ ಹಳ್ಳಿ ಜನ ಮುಗ್ಧತೆ ಇರುವುದರಿಂದ ಪೋಲಿಸ್ ಇಲಾಖೆಯವರಿಗೆ ಬರುವ ಧೈರ್ಯವನ್ನು ಮಾಡುವುದಿಲ್ಲ ಏಕೆಂದರೆ ಈ ಕಳ್ಳತನ ಆಗಿರುವ ಬಗ್ಗೆ ಯಾರ ಮೇಲೆ ಸಂದೇಹ ಪಟ್ಟು ಪ್ರಕರಣ ಕೊಡಬೇಕೆಂದು ಪ್ರಶ್ನೆಯಾಗಿ ಉಳಿಯುತ್ತದೆ.
ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಸಿ.ಸಿ ಕ್ಯಾಮೆರಾ ಅಳವಡಿಸಿದರೆ ಅಪರಾಧಿಗಳು ಯಾರೆಂದು ಕಂಡು ಬರುತ್ತದೆ ಗ್ರಾಮದ ಜನರ ಹಿತಾಸಕ್ತಿಗಾಗಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸಿ.ಸಿ ಕ್ಯಾಮೆರಾ ಅಳವಡಿಸ ಬೇಕೆಂದು ಅಂಗಡಿ ಮಾಲೀಕ ಮೈಲಾರಪ್ಪ ವಗ್ಗರ ಮಾತನಾಡಿದರು.
ಇಂಥ ಅನೇಕ ಸಮಸ್ಯೆಗಳು ಬೆಳವಣಿಗೆ ಗ್ರಾಮದಲ್ಲಿ ಕಂಡು ಬಂದರೂ ಕೂಡ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತ ಪರಿಸ್ಥಿತಿ ನಿರ್ಮಾಣ ವಾಗಿದೆ ಇವರು ಸಾರ್ವಜನಿಕ ಹಿತಾಸಕ್ತಿಗಾಗಿ ಬಂದಿದ್ದಾರೋ ಇಲ್ಲಾ ಸುಮ್ಮನೆ ಪಂಚಾಯಿತಿಯಲ್ಲಿ ಕೂತು ಹರಟೆ ಹೊಡೆಯಲು ಬಂದಿದ್ದಾರೋ ಎಂಬುದು ಪ್ರಶ್ನೆಯಾಗಿದೆ ಬಂಧುಗಳೇ.
ನಮ್ಮ ಈ ಪತ್ರಿಕೆ ವರದಿ ಕಂಡ ಮೇಲಾದರೂ ಬೆಳವಣಿಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನ ಪ್ರತಿ ನಿಧಿಗಳು ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವದ ರೊಂದಿಗೆ ಗ್ರಾಮದ ಕುಂದು ಕೊರತೆಗೆ ಕೈ ಜೋಡಿಸುವವರೋ ಇಲ್ಲವೋ ಎಂದು ಕಾಯ್ದು ನೋಡ ಬೇಕಿದೆ ಪ್ರಿಯ ಓದುಗರೇ
ಬಾಕ್ಸ್ ನ್ಯೂಸ್:-1
ರೋಣ ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಬೆಳವಣಿಕೆಯಲ್ಲಿ ಅಪರಾಧ ಪ್ರಕರಣ ಹಾಗೂ ಕಳ್ಳತನಕ್ಕೆ ಕಡಿವಾಣ ಹಾಕಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸ ಬೇಕು ಎಂಬುದು ರಮೇಶ ನಂದಿಯವರ ಅಭಿಪ್ರಾಯವಾಗಿದೆ. ರಮೇಶ್, ನಂದಿ ಗ್ರಾಮದ ಯುವಕ.

ಬಾಕ್ಸ್ ನ್ಯೂಸ್:-2
ನಮ್ಮ ಗ್ರಾಮವು ದಿನೇ ದಿನೇ ಬೆಳೆಯುತ್ತಿದ್ದು ಬೇರೆ ಬೇರೆ ಜಿಲ್ಲೆಗಳಿಂದಲೂ ಬಹಳಷ್ಟು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಆದ್ದರಿಂದ ಅವರ ಚಲನ ವಲನಗಳ ಕುರಿತು ಗಮನ ಹರಿಸುವುದರ ಜೊತೆಗೆ ಕಳ್ಳತನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರ ಮೇಲೆ ನಿಗಾ ವಹಿಸಲು ಕ್ಯಾಮೆರಾ ಅನುಕೂಲವಾಗಲಿದೆ ಎಂಬುದು ಸ್ಥಳೀಯ ನಿವಾಸಿ ನಾಗರಾಜ್ ಅವರ ಅಭಿಪ್ರಾಯ.

ನಾಗರಾಜ್ ಸ್ಥಳೀಯ ನಿವಾಸಿ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ