ಮೈಸೂರು ದಸರಾ ಉತ್ಸವದಲ್ಲಿ ಸುಗಮ ಸಂಗೀತಕ್ಕೆ – ಡಿ.ಬಿ ನಿಂಗಪ್ಪ ಆಯ್ಕೆ.
ತಿಮ್ಮನಹಳ್ಳಿ ಸ.21





ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ತಿಮ್ಮನಹಳ್ಳಿ ಗ್ರಾಮದ ಯುವ ಗಾಯಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಿ.ಬಿ ನಿಂಗಪ್ಪ ಅವರಿಗೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಗಾನ ಭಾರತಿ ಸಾಂಸ್ಕೃತಿಕ ವೇದಿಕೆಯಲ್ಲಿ ಸುಗಮ ಸಂಗೀತ ಪ್ರಸ್ತುತಿಗೆ ಒಲಿದು ಬಂದ ಅವಕಾಶ ಜಿಲ್ಲೆಯ ಯುವ ಪ್ರತಿಭೆ ತಾಲೂಕಿನ ತಿಮ್ಮನಹಳ್ಳಿ ಸರ್ವ ಸದಸ್ಯರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇವರ ಕುಟುಂಬ ಕಲಾವಿದರ ಕುಟುಂಬವಾಗಿದೆ. ಮೊದಲಿಗೆ ಪಾಲಜ್ಜನವರ ವಂಶದ ಕುಡಿ ತಂದೆ ಹಿರೇಹಳ್ಳಿ ದುರುಗಪ್ಪ, ಇವರ ಕೋಲಾಟ ನಾಟಕ ಕಲಾವಿದರು,ಹಾಗೂ ತಾಯಿ ಬಸಮ್ಮ ಅಕ್ಕ ಚನ್ನಮ್ಮನವರ ಸೋಬಾನೆ ಪದ, ನಂತರ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿನ್ನೊಬನಹಳ್ಳಿ ಗ್ರಾಮದ ರಂಗಭೂಮಿಯ ಗಾನ ಕೋಗಿಲೆ, ದ್ವಿಕಂಠ ವಾಹಿನಿ, ಡಿ.ಒ ಮುರಾರ್ಜಿ ಅವರ ಗರಡಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದು, ಸಪ್ತ ಸ್ವರಗಳನ್ನು ಉಜ್ಜಯಿನಿಯ ವಾಗೀಶ್ ಗವಾಯಿಗಳಿಂದ, ಸಿದ್ದಯ್ಯನಕೋಟೆ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ವಿದ್ವತ್ ಪದವಿ ಪಡೆದು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಸಂಗೀತ ಪದವಿ ಪಡೆದಿದ್ದಾರೆ.ಗಾಯಕ ಡಿ.ಬಿ ನಿಂಗಪ್ಪ ಅವರು ಗಾಯನ, ಸಂಗೀತ, ವಚನ ಗಾಯನ, ದಾಸವಾಣಿ, ಜಾನಪದ ಸಂಗೀತದ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಈ ಬಾರಿಯ 2025 ಮೈಸೂರು ದಸರಾ ಉತ್ಸವದಲ್ಲಿ ಇದೇ ಸೆಪ್ಟೆಂಬರ್ 28-09-2025 ರಂದು ಗಾನ ಭಾರತಿ ವೇದಿಕೆಯ ಮೂಲಕ ಸುಗಮ ಸಂಗೀತಕ್ಕೆ ಧ್ವನಿ ಯಾಗಲಿದ್ದಾರೆ.

ಡಿ.ಬಿ ನಿಂಗಪ್ಪ ಅವರ ಗಾಯನಕ್ಕೆ ಪ್ರೇರಣೆ ಮನೆಯ ವಾತಾವರಣದಿಂದ ಬಳುವಳಿಯಾಗಿ ಈ ಸಂಗೀತದ ಒಲವು ಬೆಳೆಸಿ ಕೊಂಡ ಡಿ.ಬಿ ನಿಂಗಪ್ಪ ಅವರಿಗೆ ಪತ್ನಿ ಮಮತಾ ಇನ್ನಷ್ಟು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾದುದು, ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತಿರುವ ಯುವ ಪ್ರತಿಭೆ ತಮ್ಮ ಸುಮಧುರ ಸ್ವರ ಕಂಠದ ಮೂಲಕ ಗಾನ ಮಾಧುರ್ಯವನ್ನು ಇನ್ನಷ್ಟು ವಿಸ್ತಾರ ಗೊಳಿಸುತ್ತಾ ಇದೀಗ ಮೈಸೂರು ದಸರಾ ಉತ್ಸವದಲ್ಲಿ ಆಯ್ಕೆ ಆಗಿರುವುದಕ್ಕೆ ಕುಟುಂಬಸ್ಥರು, ರಂಗ ಭೂಮಿ ಸಂಗೀತ ಕಲಾವಿದರು, ಹಿತೈಷಿಗಳು, ಹರ್ಷ ವ್ಯಕ್ತಪಡಿಸಿದ್ದಾರೆ.
ಡಿ.ಬಿ ನಿಂಗಪ್ಪ ಅವರ ಸಂಗೀತ ಪ್ರಸ್ತುತಿಗೆ ಸಾಕ್ಷಿಯಾದ ವೇದಿಕೆಗಳು:-
ಮೊದಲಿಗೆ 2017 ರಲ್ಲಿ ಹಂಪಿ ಉತ್ಸವ, ಬಿಹಾರ ಹೊರನಾಡು ಉತ್ಸವ, 2023 ಹಂಪಿ ಉತ್ಸವ, ರಾಜ್ಯ ಮಟ್ಟದ ಜಾನಪದ ಸುಗ್ಗಿ , ಜಿಲ್ಲಾ ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನ, ಗಡಿನಾಡ ಸಾಂಸ್ಕೃತಿಕ ಉತ್ಸವ. ರಾಜ್ಯ ಮಟ್ಟದ ಜಾನಪದ ಜಾತ್ರೆ, ಜನಪರ ಉತ್ಸವ,ಯುವ ಸೌರಭ, ಸಾಂಸ್ಕೃತಿಕ ಸೌರಭ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದಲಿತ ಸಾಹಿತ್ಯ ಸಮ್ಮೇಳನ, ರಾಜ್ಯ ಮಟ್ಟದ ಉದಯ ರಾಗ, ಸಂಧ್ಯಾರಾಗ ಮುಂತಾದ ಜಿಲ್ಲೆ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಾಂಸ್ಕೃತಿಕ ವೇದಿಕೆಗಳಲ್ಲಿ ವಚನ ಗಾಯನ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ದಾಸವಾಣಿ, ಜನಪದ ಗೀತೆಗಳ ಮೂಲಕ ತಮ್ಮ ಸ್ವರ ಪರಿಚಯಿಸಿದ ಶ್ರೇಯಸ್ಸು ತಿಮ್ಮನಹಳ್ಳಿ ಡಿ.ಬಿ ನಿಂಗಪ್ಪ ಅವರದ್ದಾಗಿದೆ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ