ಮನೆಯ ಬಾಗಿಲಿಗೆ ಸಿ.ಎಂ ಸಿದ್ದರಾಮಯ್ಯ ನವರ – ಚಿತ್ರ ಕೆತ್ತನೆ.
ಕೆಂಚಮಲ್ಲನಹಳ್ಳಿ ಸ.21





ಕಾನ ಹೊಸಹಳ್ಳಿ ಸಮೀಪದ ಕೆಂಚಮಲ್ಲನಹಳ್ಳಿ ಗ್ರಾಮದ ಮಲ್ಲೇಶಪ್ಪರ ತಿಪ್ಪೇಸ್ವಾಮಿ ಹಾಗೂ ಪಾರ್ವತಿ ದಂಪತಿಗಳು ಸಿದ್ದರಾಮಯ್ಯ ಅವರ ಅಭಿಮಾನದ ಮೇಲೆ ತಮ್ಮ ಮನೆ ಬಾಗಿಲ ಮೇಲೆ ಸಿದ್ದರಾಮಯ್ಯ ಅವರ ಭಾವಚಿತ್ರ ಕೆತ್ತನೆ ಮಾಡಿಸಿ ತನ್ನ ಮನೆಗೆ ಅಳವಡಿಸಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಪಾರ್ವತಮ್ಮ ಅವರಿಗೆ ಸುಮಾರು 30 ಸಾವಿರದಷ್ಟು ಹಣ ಸಂದಾಯವಾಗಿತ್ತು. ಈ ಹಣವನ್ನು ಯಾವುದಕ್ಕೂ ಬಳಸದೆ ಕೂಡಿಟ್ಟು ಕೊಂಡಿದ್ದರು. ಇದೇ ಹಣವನ್ನು ಬಳಸಿಕೊಂಡು ತಮ್ಮ ಮನೆಗೆ ಸಿದ್ದರಾಮಯ್ಯ ಅವರ ಭಾವ ಚಿತ್ರವಿರುವ ಭಾಗಿಲನ್ನು ಅಳವಡಿಸಲು ಚಿಂತನೆ ನಡೆಸಿದರು. ಇದಕ್ಕಾಗಿ ತಮ್ಮ ಗ್ರಾಮದ ಕರ ಕುಶಲಗಾರ ಎಚ್.ಎನ್ ದುರುಗೇಶ್ ಎಕ್ಕೆಗುಂದಿ ಅವರಿಗೆ ಬಾಗಿಲು ಮಾಡಲು ಹೇಳಿದರು. ಇದರಿಂದ ದುರುಗೇಶ ಬೆಂಗಳೂರಿನಿಂದ ಸಿದ್ದರಾಮಯ್ಯ ಅವರ ಭಾವ ಚಿತ್ರವನ್ನು ತರಿಸಿಕೊಂಡು ಕಾನ ಹೊಸಹಳ್ಳಿಯಲ್ಲಿನ ರವೀಂದ್ರಚಾರಿ ಅವರ ಯಂತ್ರದಲ್ಲಿ ತ್ಯೇಗದ ಕಟ್ಟಿಗೆಯಿಂದ ಬಾಗಿಲನ್ನು ಸಿದ್ದ ಪಡಿಸಿದರು. ಇದಕ್ಕಾಗಿ ಮಲ್ಲೇಶಪ್ಪರ ತಿಪ್ಪೇಸ್ವಾಮಿ ಅವರು 28 ಸಾವಿರ ಹಣವನ್ನು ದುರುಗೇಶ ಅವರಿಗೆ ನೀಡಿದ್ದರು. ಇದು ಸವಾಲಿನ ಕೆಲಸವಾಗಿದ್ದರಿಂದ ಬಿಡಬಾರದು ಎನ್ನುವ ಕಾರಣಕ್ಕೆ ನನ್ನ ಕೈಯಿಂದ ಹೆಚ್ಚಿನ ಹಣವನ್ನು ಖರ್ಚು ಮಾಡಿ ಬಾಗಿಲು ಸಿದ್ದ ಪಡಿಸಿದ್ದೇನೆ ಎನ್ನುತ್ತಾರೆ ಎಚ್.ಎನ್ ದುರುಗೇಶ್ ಎಕ್ಕೆಗುಂದಿ. ಸಿದ್ದರಾಮಯ್ಯ ಅವರ ಅಭಿಮಾನದಿಂದ ಹಳೇ ಬಾಗಿಲನ್ನು ತೆಗೆದು ಹಾಕಿ ಅವರ ಭಾವ ಚಿತ್ರವಿರುವ ಹೊಸ ಬಾಗಿಲನ್ನು ಮಾಡಿಸಿ ಊರಲ್ಲಿ ಹಬ್ಬವಿರುವ ಕಾರಣಕ್ಕೆ ಸೋಮವಾರ ಅಳವಡಿಸಿ ಪೂಜೆ ಸಲ್ಲಿಸಿದ್ದೇವೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ