ದಾರುಸ್ಸಲಾಮ್ ಸೌಹಾರ್ದ ಸಹಕಾರಿ ನಿಯಮಿತ ಮಾನ್ವಿ ವತಿಯಿಂದ – ವಾರ್ಷಿಕ ಸರ್ವ ಸದಸ್ಯರ ಸಮಾರಂಭ ಜರುಗಿತು.
ಮಾನ್ವಿ ಸ.21





ಮಾನ್ವಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ದಾರುಸ್ಸಲಾಮ್ ಸಹಕಾರಿ ಬ್ಯಾಂಕಿನ ಮೂರನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟನೆ ಮಾಡಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್ ಸಾಹುಕಾರ್ ಇವರು. ಉದ್ಘಾಟನಾ ನುಡಿಯನ್ನು ನೋಡಿದ ಮಾನ್ಯ ಶಾಸಕರು ಮಾನ್ವಿ ನಗರದಲ್ಲಿ ಬಹಳಷ್ಟು ಸಹಕಾರಿ ಬ್ಯಾಂಕುಗಳಿವೆ ಆದರೆ ಈ ಬ್ಯಾಂಕಿನ ವೈಶಿಷ್ಟತೆ ಗ್ರಾಹಕರಿಗೆ ಕೊಟ್ಟ ಸಾಲಕ್ಕೆ ಬಡ್ಡಿ ರಹಿತ ಸಾಲ ನೀಡುವುದು ಇಂದಿನ ದಿನ ಮಾನಗಳಲ್ಲಿ ಇಷ್ಟೊಂದು ಸುಲಭದ ಕೆಲಸವಲ್ಲ.

ಬೆಳಿಗ್ಗೆ ಆದರೆ ನನಗೆ ಲಾಭ ಎಷ್ಟು ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಜೀವನ ಸಾಗಿಸುವ ಇಂದಿನ ದಿನ ಮಾನಗಳಲ್ಲಿ ಈ ಬ್ಯಾಂಕಿನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಆ ದೇವರು ಇನ್ನೂ ಹೆಚ್ಚಿನ ಶಕ್ತಿಯನ್ನು ಕೊಟ್ಟು ಈ ಬ್ಯಾಂಕನ್ನು ಉತ್ತುಂಗಕ್ಕೆ ಕೊಂಡು ಹೋಗಲಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮುಫ್ತಿ ಮೌಲಾನಾ ಜಿಶನ್ ಹಸನ್ ಖಾದ್ರಿ ಬಾಲು ಸ್ವಾಮಿ ಕೊಡ್ಲಿ ಸೈಯದ್ ಖಾಲಿದ್ ಖಾದ್ರಿ ಆರ್.ಡಿ.ಸಿ.ಸಿ ಬ್ಯಾಂಕಿನ ಸದಸ್ಯರಾದ ಮಲ್ಲನಗೌಡ ನಕ್ಕುಂದಿ ಪುರ ಸಭೆಯ ಮಾಜಿ ಅಧ್ಯಕ್ಷರಾದ ಪಿ.ಮೊಮ್ಮದ್ ರಫಿ ಸಾಹುಕಾರ್ ಬ್ಯಾಂಕಿನ ಸಿ.ಇ.ಓ ಎಸ್.ಡಿ ಪ್ರಸಾದ್ ಸಲೀಂ ಪಾಷರುಮಾಲ್ ವಾಲೆ ಜಮಾತೆ ಇಸ್ಲಾಂ ಹಿಂದ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಸಾಬ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಜನೇವರಿ ತಿಂಗಳಲ್ಲಿ ಸಯ್ಯದ್ ಅಕ್ಬರ್ ಪಾಷಾ ಅವರ ವತಿಯಿಂದ ನಡೆಯಲಿರುವ ಸಾಮೂಹಿಕ ವಿವಾಹದ ಭಿತ್ತಿ ಪತ್ರವನ್ನು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಅನಾವರಣ ಗೊಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ