ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ – ಅಂಜಲಿ ವಿಶ್ವಕರ್ಮ ಆಯ್ಕೆ.
ಲಿಂಗಸಗೂರು ಸ.21





ಲಿಂಗಸೂರಿನ ಜ್ಞಾನ ಸಂಜೀವಿನಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಂಜಲಿ ಗಂಗಾಧರ ವಿಶ್ವಕರ್ಮ ಲಿಂಗಸಗೂರು ಅವರು ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾದಳು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಯಚೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕರ ಮತ್ತು ಬಾಲಕಿಯರ ಕ್ರೀಡಾಕೂಟ 2025-26 ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ 2025-26 ಕಾರ್ಯಕ್ರಮದಲ್ಲಿ ಲಿಂಗಸೂರಿನ ಜ್ಞಾನ ಸಂಜೀವಿನಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಂಜಲಿ ಗಂಗಾಧರ ವಿಶ್ವಕರ್ಮ ಅಮರಾವತಿ.

ಸಾ.ಲಿಂಗಸಗೂರು ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕುಮಾರಿ ಅಂಜಲಿ ವಿಶ್ವಕರ್ಮ ಅವರಿಗೆ ವನಸಿರಿ ಪೌಂಡೇಷನ್ ರಾಜ್ಯ ಜಾಲತಾಣ ಅಧ್ಯಕ್ಷರು ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಕೆ ಹೊಸಹಳ್ಳಿ ಅವರು ಅಭಿನಂದನೆಗಳನ್ನು ಕೋರಿದರು.