ಎಸ್,ಸಿ/ಎಸ್.ಟಿ & ಓ.ಬಿ.ಸಿ ಸಮುದಾಯದವರು ಹಿಂದೂ ಕಳಚಿ ಬೌದ್ಧ ಧರ್ಮ – ದಾಖಲಾತಿಗೆ ಆಗ್ರಹ.
ಇಂಡಿ ಸ .21





ಅಖಿಲ ಕರ್ನಾಟಕ ಬೌದ್ದ ದಾಖಲಾತಿ ಆಂದೋಲನ ಸಮಿತಿ ಇಂಡಿ ಸಂಚಾಲಕರಾದ ನಾಗೇಶ್ ಶಿವಶರಣ ಅವರು ಇಂದು ಖಾಸಗಿ ಹೊಟೇಲಿನಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಮುಂಬರುವ ಹಿಂದುಳಿದ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಭಾರತದ ಮೂಲ ನಿವಾಸಿಗಳಾದ ಎಸ್ಸಿ/ಎಸ್ಟಿ ಮತ್ತು ಓಬಿಸಿಗಳು ಧರ್ಮದ ಕಾಲಂನಲ್ಲಿ ಬೌದ್ದ ಎಂದು ಬರೆಯಿಸ ಬೇಕೆಂದು ಮನವಿ ಮಾಡಿಕೊಂಡರು.ಹಿಂದೂ ಧರ್ಮದಲ್ಲಿರುವ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಡಾ, ಬಾಬಾ ಸಾಹೇಬರು ಲಕ್ಷಾಂತರ ಅನುಯಾಯಿಗಳ ಜೊತೆಗೆ ಬೌದ್ದ ಧರ್ಮವನ್ನು ಸ್ವೀಕರಿಸಿದ್ದರು. ಅವರ ಅನುಯಾಯಿಗಳಾದ ನಾವುಗಳು ಇಲ್ಲಿಯ ವರೆಗೆ ಹಲವಾರು ದೌರ್ಜನ್ಯ ದಬ್ಬಾಳಿಕೆ ನಡೆದರೂ ಕೂಡ ಹಿಂದೂ ಧರ್ಮದಲ್ಲಿಯೇ ಉಳಿದು ಕೊಂಡಿದ್ದೇವೆ. ಹಲವಾರು ಸಮಸ್ಯೆಗಳನ್ನೂ ಎದುರಿಸಿದ ನಂತರವೂ ನಾವು ಅಧಿಕೃತವಾಗಿ ಬೌದ್ದ ಧರ್ಮವನ್ನು ಸೇರ್ಪಡೆ ಗೊಂಡಿಲ್ಲ. ದಿನ ನಿತ್ಯದ ಜೀವನದಲ್ಲಿ ಬುದ್ದನ ತತ್ವ ಸಂದೇಶಗಳನ್ನು ಪಾಲಿಸುವ ನಾವುಗಳು ಅಧಿಕೃತವಾಗಿ ಜಾತಿ ಸಮೀಕ್ಷೆಯಲ್ಲಿ ಬೌದ್ದ ಧರ್ಮೀಯರು ಎಂಬುದನ್ನು ನಮೂದಿಸ ಬೇಕು ಮತ್ತು ಜಾತಿ ಕಾಲಂದಲ್ಲಿ ಪರಿಶಿಷ್ಟ ಜಾತಿಗಳು ತಮ್ಮ ತಮ್ಮ ಜಾತಿಗಳನ್ನು ನಮೂದಿಸ ಬೇಕೆಂದು ಆಗ್ರಹ ಪಡಿಸಿದರು.ಬೌದ್ದ ಧರ್ಮದ ಹೆಸರು ನಮೂದಿಸಿದರೇ ಈಗಿರುವ ಮೀಸಲಾತಿಯಲ್ಲಿ ಯಾವುದೇ ತೊಂದರೆ ಯಾಗುವುದಿಲ್ಲ, ಮೀಸಲಾತಿ ಯಥಾಸ್ಥಿತಿ ಮುಂದುವರೆಯುತ್ತದೆ ಇದು ಸ್ಟೇಟ್ ಗೌರ್ನಮೆಂಟ್, ಸೆಂಟ್ರಲ್ ಗೌರ್ನಮೆಂಟ್ ಮತ್ತು ಹೈಕೋರ್ಟ್ ಸುಪ್ರೀಂ ಕೋರ್ಟ್ ಮಾನ್ಯ ಮಾಡಿರುವುದರಿಂದ ಎಸ್ಸಿ/@ಎಸ್ಟಿ ಗಳು ಹಿಂದೂ ಧರ್ಮದ ಕವಚವನ್ನು ಕಳೆದು ಬೌದ್ಧ ಧರ್ಮದ ಅಡಿ ಸಾಗಬೇಕೆಂದು ಮನವಿ ಮಾಡಿ ಕೊಂಡರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ ಹರಿಜನ ಇಂಡಿ