ಸಮೀಕ್ಷೆ ಯಶಸ್ವಿಗೆ ವಿಕಲ ಚೇತನರ ಸಹಕಾರ ಅಗತ್ಯ – ಶಿವಕುಮಾರ್ ಚಲ್ಮಲ್.
ಮಾನ್ವಿ ಸ.22





ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೆತ್ತಿ ಕೊಂಡಿದ್ದು. ವಿಕಲ ಚೇತನರ ಸ್ಥಿತಿಗತಿ, ಹಕ್ಕುಗಳು ಹಾಗೂ ಅಗತ್ಯತೆಗಳ ಕುರಿತು ನಿಖರ ಮಾಹಿತಿಯನ್ನು ಸಂಗ್ರಹಿಸಲು ಉದ್ದೇಶಿಸಿದೆ. ವಿಕಲ ಚೇತನರು ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಸಂಕಲ್ಪ ವಿಕಲ ಚೇತನ ಸಂಘದ ಅಧ್ಯಕ್ಷ ಶಿವಕುಮಾರ್ ಚಲ್ಮಲ್ ಕರೆ ನೀಡಿದ್ದಾರೆ.
ಅವರು ತಿಳಿಸಿದಂತೆ. ಸಮೀಕ್ಷೆದಾರರು ಮನೆಗೆ ಬಂದಾಗ ವಿಕಲ ಚೇತನರು ಮತ್ತು ಅವರ ಪೋಷಕರು ಮುಂಚಿತವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಕೊಂಡಿರಬೇಕು. ಯು.ಡಿ.ಐ.ಡಿ ಕಾರ್ಡ್/ಸಂಖ್ಯೆ, ಅಂಗವಿಕಲತಾ ಪ್ರಮಾಣಪತ್ರ, ಆಧಾರ್ ಕಾರ್ಡ್, ವಿದ್ಯಾಭ್ಯಾಸದ ದಾಖಲೆಗಳು, ವೃತ್ತಿ ಸಂಬಂಧಿತ ದಾಖಲೆಗಳು ಮತ್ತು ಬಳಕೆಯಲ್ಲಿರುವ ಸಹಾಯಕ ಸಾಧನಗಳ ವಿವರಗಳ ಜೆರಾಕ್ಸ್ ಪ್ರತಿಗಳನ್ನು ಇಟ್ಟು ಕೊಳ್ಳುವುದು ಅವಶ್ಯಕ. ಮೂಲ ದಾಖಲೆಗಳನ್ನು ನೀಡುವ ಬದಲು ಜೆರಾಕ್ಸ್ ಪ್ರತಿಗಳನ್ನು ಮಾತ್ರ ಕೊಡಬೇಕು.
ಇದಲ್ಲದೆ, ದಿನ ನಿತ್ಯದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಆರೈಕೆದಾರರ ಸಹಾಯ ಅಗತ್ಯವಿದೆಯೇ ಎಂಬ ಮಾಹಿತಿ ಹಾಗೂ ತಮ್ಮ ಅಂಗವಿಕಲತೆಯ ವಿಧದ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ.
“ಪ್ರತಿಯೊಬ್ಬ ವಿಕಲ ಚೇತನರು ನಿಖರ ಮಾಹಿತಿಯನ್ನು ನೀಡಿದಲ್ಲಿ, ಭವಿಷ್ಯದ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ವಿಕಲ ಚೇತನರ ಹಿತಾಸಕ್ತಿಗೆ ಅನುಗುಣವಾಗಿ ರೂಪಿಸಲು ಇದು ಆಧಾರವಾಗುತ್ತದೆ. ಆದ್ದರಿಂದ ಸಮೀಕ್ಷೆಗೆ ಪ್ರತಿಯೊಬ್ಬರೂ ಸಂಪೂರ್ಣ ಸಹಕಾರ ನೀಡಬೇಕು” ಎಂದು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ