ಕಾಂಗ್ರೆಸ್ ಎಸ್/ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ – ಪರಶುರಾಮ್ ಕೆರೆಹಳ್ಳಿ ನೇಮಕ.
ಕೊಪ್ಪಳ ಸ.22





ನಗರದ ಕಾಂಗ್ರೆಸ್ ನ ಕಚೇರಿಯಲ್ಲಿ ನಡೆದ ಎಸ್ ಸಿ ಘಟಕದ ರಾಜ್ಯ ಕಮಿಟಿ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ್ ಕೆರೆಹಳ್ಳಿ ಅವರು ನೇಮಕ ಗೊಂಡಿದ್ದಾರೆ.
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೀ ಅಮರೇಗೌಡ ಬಯ್ಯಾಪುರ ರವರು, ಹಾಗೂ ಎಸ್ ಸಿ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಆರ್.ಧರ್ಮಸೇನ್ ರವರು ಆದೇಶ ಮೇರೆಗೆ ಹಾಗೂ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಹೆಚ್. ಪೂಜಾರ್ ಅವರ ಆದೇಶದ ಮೇರೆಗೆ, ಮತ್ತು ಸಚಿವರಾದ ಮಾನ್ಯ ಶ್ರೀ ಶಿವರಾಜ್.ಎಸ್ ತಂಗಡಗಿ ರವರ ಸಹಕಾರದೊಂದಿಗೆ ಮತ್ತು ಜನಪ್ರಿಯ ಸಂಸದರಾದ ಮಾನ್ಯ ಶ್ರೀ ಕೆ.ರಾಜಶೇಖರ್ ಹಿಟ್ನಾಳ್ ರವರು ಹಾಗೂ ಶಾಸಕರಾದ ಮಾನ್ಯ ಶ್ರೀ ಕೆ.ರಾಘವೇಂದ್ರ ಹಿಟ್ನಾಳ್ ರವರ ಸಹಕಾರದೊಂದಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ವರಿಷ್ಠರ ಸೂಚನೆ ಮೇರೆಗೆ ಪರಶುರಾಮ್ ಕೆರೆಹಳ್ಳಿ ರವರು ಎಸ್ ಸಿ ಘಟಕದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಆಗಿದ್ದಾರೆ. ಕೊಪ್ಪಳ ನಗರದ ಕಾಂಗ್ರೆಸ್ ಕಾರ್ಯಲಯದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗೌರವಾನ್ವಿತ ಕಾಂಗ್ರೆಸ್ ನ ಹಿರಿಯ ಮುಖಂಡರ ಜೊತೆಯಲ್ಲಿ, ರಾಜ್ಯ ಕಮಿಟಿ ಪದಾಧಿಕಾರಿಗಳ, ಜಿಲ್ಲಾ ಪದಾಧಿಕಾರಿಗಳ ಹಾಗೂ ಕೊಪ್ಪಳ ಜಿಲ್ಲೆಯ ಎಸ್ ಸಿ ಘಟಕದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ, ನಗರ ಪದಾಧಿಕಾರಿಗಳ ಸಮ್ಮುಖದಲ್ಲಿ ಕೊಪ್ಪಳ, ಕೂಕುನೂರು, ಯಲಬುರ್ಗಾ, ಹನುಮಸಾಗರ, ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ, ಈ ಎಲ್ಲಾ ಪದಾಧಿಕಾರಿಗಳ ಕಾರ್ಯಕರ್ತರ ಸಭೆಯಲ್ಲಿ ಪರಶುರಾಮ್ ಕೆರೆಹಳ್ಳಿ ಅವರಿಗೆ ಆದೇಶ ಪ್ರತಿಯನ್ನು ನೀಡಿದರು.

ಪರಶುರಾಮ್ ಕೆರೆಹಳ್ಳಿ ರವರು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದಲೂ ನಿರಂತರವಾಗಿ ಪಕ್ಷದ ಸಂಘಟನೆ, ಬಲವರ್ಧನೆಗಾಗಿ ಶ್ರಮಿಸಿದ್ದು, ಒಬ್ಬ ನಿಷ್ಠಾವಂತ ಪ್ರಾಮಾಣಿಕ, ಕಾಂಗ್ರೆಸ್ ಕಾರ್ಯಕರ್ತನಾಗಿ, ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ಭಾಗವಹಿಸಿ ಪಕ್ಷ ಕಟ್ಟಲು ಶ್ರಮಿಸಿದ್ದಾರೆ. ಕೊಪ್ಪಳ ವಿಧಾನ ಸಭಾ ಮತ್ತು ಲೋಕ ಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ವ ಜನಾಂಗದ ಪ್ರೀತಿ ವಿಶ್ವಾಸದೊಂದಿಗೆ, ಪ್ರತಿ ಹಳ್ಳಿ, ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜನಪ್ರಿಯ ಸಂಸದರಾದ ಮಾನ್ಯ ಶ್ರೀ ರಾಜಶೇಖರ್ ಹಿಟ್ನಾಳ್ ಅವರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೂಳಪ್ಪ ಹಲಗೇರಿ ರವರು, ಎಸ್ ಸಿ ಘಟಕದ ರಾಜ್ಯ ಉಪಾಧ್ಯಕ್ಷರಾದ ಕನ್ನಿರಾಮ್ ರಾಥೋಡ್ ಗುಲ್ಬರ್ಗಾ, ಕೆಪಿಸಿಸಿ ರಾಜ್ಯ ಸಂಚಾಲಕರಾದ ನಾಗರಾಜ್ ನಾಯಕ್ ಚೆನ್ನಗಿರಿ , ಕೆಪಿಸಿಸಿ ಸಂಚಾಲಕರಾದ ಕಾಳಯ್ಯ ಮೈಸೂರ, ಎಸ್ ಸಿ ರಾಜ್ಯ ಕಮಿಟಿ ಸದಸ್ಯರುಗಳಾದ, ಶುಕ್ರರಾಜ್ ತಾಳಕೇರಿ, ದೇವೇಂದ್ರಪ್ಪ ಎಚ್ ಪೂಜಾರ್ ದದೆಗಲ್, ಶರಣಮ್ಮ ಯಲಬುರ್ಗಾ, ಜಿಲ್ಲಾ ಉಪಾಧ್ಯಕ್ಷರಾದ ತಿಪ್ಪಣ್ಣ ಚಲವಾದಿ ಮ್ಯಾಗೇರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಸಿಂದೋಗಿ, ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಮೂಲಿಮನಿ ಮೋಚಿ, ಬಸವರಾಜ ಬೇವಿನಕಟ್ಟಿ ಕುಷ್ಟಗಿ, ರಮೇಶ ಚಲವಾದಿ ಯಲಬುರ್ಗಾ, ಎಲ್ಲಾ ಎಸ್ ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ, ಈಶಪ್ಪ ಕೂಕನೂರು, ಚಂದ್ರು ಕುಷ್ಟಗಿ, ಶಿವಾನಂದ್ ಬಣಕಾರ್ ಯಲಬುರ್ಗಾ, ಶಾಂತಪ್ಪ ಬಸರಿಗಿಡ ಕನಕಗಿರಿ, ಮಾಂತೇಶ ವಡ್ಡರ್ ಹನುಮಸಾಗರ, ಶಿವಕುಮಾರ್ ಇಳಿಗಿನೂರು ಕಾರಟಗಿ, ಯಮನೂರಪ್ಪ ದನಕನದೊಡ್ಡಿ ಗಂಗಾವತಿ, ಹಾಗೂ ಎಲ್ಲಾ ಎಸ್ ಸಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಲಲಿತ್ ಕುಮಾರ ಮ್ಯಾಗೇರಿ ಚಲವಾದಿ ಕೊಪ್ಪಳ , ಕಳಕೇಶ ಸೂಡಿ ಯಲಬುರ್ಗಾ, ಪಾಮಣ್ಣ ಕನಕಗಿರಿ, ಮಲ್ಲೇಶ್ ದೇವರಮನಿ ಗಂಗಾವತಿ. ಹಾಗೂ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ ಸಾಲುಮನೆ.ಕೂಡ್ಲಿಗಿ