ಜಾವೀದ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ – ಪದವಿ ಪ್ರಧಾನ ಸಮಾರಂಭ ಜರುಗಿತು.
ದೆಹಲಿ ಸ.22





ಸಮಾಜ ಸೇವಾ ಕ್ಷೇತ್ರದಲ್ಲಿ ನೀಡಿರುವ ಅಮೂಲ್ಯ ಕೊಡುಗೆಗಾಗಿ ಮಾನ್ವಿಯ ಜನ ಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಹಾಗೂ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ.
ಅಮೇರಿಕಾ ವಿಸಿಡಮ್ ಪೀಸ್ ಆಫ್ ಯೂನಿವರ್ಸಿಟಿ ವತಿಯಿಂದ, ಏಷಿಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ 2025 ಸಂಯುಕ್ತಾಶ್ರಯದಲ್ಲಿ ನವ ದೆಹಲಿಯ ಹೋಟೆಲ್ ಲಿವ್ ಇನ್‌ನಲ್ಲಿ ಭವ್ಯ ಕಾರ್ಯಕ್ರಮ ನಡೆಯಿತು.
ಶೈಕ್ಷಣಿಕ, ಸಾಮಾಜಿಕ, ಶಾಂತಿ ಸೌಹಾರ್ದತೆ ಕಾಪಾಡುವ ಕಾರ್ಯಗಳು, ದಲಿತರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಹೋರಾಟ, ರೈತರಿಗೆ ನೀರು ತಲುಪಿಸಲು ನಡೆಸಿದ ಹೋರಾಟ ಹಾಗೂ ಭ್ರಷ್ಟಾಚಾರದ ವಿರುದ್ಧ ಕೈಗೊಂಡ ಹೋರಾಟಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದರು.

ಈ ಸಂದರ್ಭದಲ್ಲಿ ಡಾ, ಕರಾಟೆ ಎ.ಪಿ. ಶ್ರೀನಾಥ, ಪ್ರಣವ ಸ್ವರೂಪ ಮುನಿ ನಿರಂಜನ, ಪೂಜ್ಯ ಶ್ರೀ ಶ್ರೀ ಡಾ,ಕೃಷ್ಣಮೂರ್ತಿ ಮಹಾಸ್ವಾಮಿಗಳು, ಖ್ಯಾತ ವಕೀಲ ಡಾ. ಎಂ. ಬಿ.ಪಾಟೀಲ್, ಸಮಾಜ ಸೇವಕ ಕಪಿಲ್ ಶರ್ಮಾ, ನಿವೃತ್ತ ಪೊಲೀಸ್ ಅಧಿಕಾರಿ ಚನ್ನಮಲ್ಲೇಗೌಡ, ದಕ್ಷಿಣ ಭಾರತ ಬೌದ್ಧ ಫೆಡರೇಶನ್ ಅಧ್ಯಕ್ಷ ಡಾ, ಲಯನ್ ಕೆ.ವಿ. ಬಾಲಕೃಷ್ಣ ಹಾಗೂ ವಿಶ್ವ ದಾಖಲೆ ಸಾಧಕ ಡಾ, ಅರುಣ್ ಚಿನ್ನದುರೈ, ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸಹೋದರ ಆದಂ ಬೇಗ್, ಸ್ನೇಹಿತರಾದ ಆಲಂ ಗಬ್ಬೂರು, ಮಸ್ತಾನ್ ನಾಯಕ್, ಮೊಹಮ್ಮದ್ ಶಾಲಂ, ಹಾಶಿಂ ಮಾನ್ವಿ, ಮಾರುತಿ ಬಡಿಗೇರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಅತಿಥಿಗಳು ಜಾವೀದ್ ಖಾನ್ ಅವರ ಸಮಾಜ ಮುಖಿ ಹಾದಿಯನ್ನು ಶ್ಲಾಘಿಸಿ, ಮುಂದಿನ ಸೇವಾ ಚಟುವಟಿಕೆಗಳಿಗೆ ಶುಭ ಹಾರೈಸಿದರು.
ಡಾಕ್ಟರೇಟ್ ಗೌರವ ಪಡೆದ ಹಿನ್ನೆಲೆಯಲ್ಲಿ ಮಾನ್ವಿ ಸೇರಿದಂತೆ ಸಂಪೂರ್ಣ ರಾಯಚೂರು ಜಿಲ್ಲೆ ಮತ್ತು ರಾಜ್ಯದಾದ್ಯಂತ ಹಲವರಿಂದ ಅಭಿನಂದನೆಗಳ ಮಹಾ ಪೂರವೇ ಹರಿದು ಬರುತ್ತಿದ್ದು, “ಇದು ನಮ್ಮ ಜಿಲ್ಲೆಯ ಹೆಮ್ಮೆ” ಎಂದು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ