ಕಲ್ಮಠವು ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ದಸರಾ ಹಬ್ಬವನ್ನು ಆಚರಿಸಿ ಕೊಂಡು ಬರುತ್ತಿದೆ – ಹಂಪಯ್ಯ.ನಾಯಕ.
ಮಾನ್ವಿ ಸ.23





ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಶ್ರೀ ಕಲ್ಮಠ ದಸರಾ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಹಂಪಯ್ಯ.ನಾಯಕ ಉದ್ಘಾಟಿಸಿ ಮಾತನಾಡಿ ನಾಡಿನ ಮಠಗಳು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುತ್ತಿವೆ. ಕಲ್ಮಠವು ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ದಸರಾ ಹಬ್ಬವನ್ನು ಹಾಗೂ ದೇವಿಯ ಆರಾಧನೆಯನ್ನು ಮಾಡುತ್ತಾ ಬಂದಿದೆ. ಕಲ್ಮಠದಲ್ಲಿ ಭಕ್ತರು ದೇವಿಯ ಸ್ವರೂಪವನ್ನು ಕಾಣುತ್ತಿದ್ದಾರೆ. ಶ್ರೀಮಠವು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತಾಲೂಕಿನ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುತ್ತಿದೆ. ಹಾಗೂ ಜನರಲ್ಲಿ ವೈಚಾರಿಕ ಭಾವನೆಯನ್ನು ಮೂಡಿಸುತ್ತಿದೆ. ಲಿಂ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳು ಗಾರಿಗೆ ಜಾತ್ರೆಗೆ ಹಾಗೂ ಶ್ರೀದೇವಿಯ ರಜತ ಅಂಬಾರಿ ಮಹೋತ್ಸವವನ್ನು ಪ್ರಾರಂಭಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದರು ದಸರಾ ಮಹೋತ್ಸವ 50 ನೇ. ವರ್ಷದ ಸುವರ್ಣ ಮಹೋತ್ಸವವನ್ನು ಆಚರಿಸಿ ಕೊಳ್ಳುತ್ತಿದೆ. ಪಟ್ಟಣಕ್ಕೆ ಆಗಮಿಸುವ ಪಂಚ ಪೀಠಗಳ ಜಗದ್ಗರುಗಳನ್ನು ಭಕ್ತಿ ಶ್ರದ್ದೆಗಳಿಂದ ವೈಭವದಿಂದ ಸ್ವಗಾತಿಸೋಣ ಹಾಗೂ ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸೋಣ ಎಂದು ತಿಳಿಸಿದರು.
ಹರಿದಾಸ ಸಾಹಿತ್ಯದ ಕುರಿತು ನಿವೃತ್ತ ಪ್ರಾಧ್ಯಾಪಕರಾದ ಶೀಲಾದಾಸ್ ವಿಶೇಷ ಉಪನ್ಯಾಸ ನೀಡಿ ನಮ್ಮ ರಾಯಚೂರು ಜಿಲ್ಲೆಯು ಹರಿದಾಸರ, ಶರಣರ, ಸೂಫಿ ಸಂತರ ತವರುರಾಗಿದೆ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ತುಂಗಭದ್ರ ನದಿಯುವ ಉತ್ತರಾಭಿ ಮುಖವಾಗಿ ಹರಿಯುವ ಪುಣ್ಯ ನದಿಯ ಮಡಿಲಲ್ಲಿ ಜನಿಸಿದ ವಿಜಯದಾಸರು ದುರ್ಗೆಯ ಕುರಿತು ರಚಿಸಿದ ಸೂಳಾದಿ ಹಾಗೂ ಚಿದನಂದ ವಾದೂತರು ರಚಿಸಿದ ಶ್ರೀದೇವಿಯ ವರ್ಣನೆ ಮಹಿಮೆಗಳನ್ನು ಕಾಣಬಹುದು. ಸೂಳಾದಿಗಳು ಹಾಗೂ ಚನ್ನ ಬಸವೇಶ್ವರರು ರಚಿಸಿದ ವಚನಗಳು ಒಂದೇ ಭಾವನೆಯನ್ನು ಹೊಂದಿವೇ ಮಾನ್ವಿಯ ಜಗನ್ನಾಥದಾಸರು ರಚಿಸಿದ ಹರಿಕಾಥಮೃತ ಸಾರವು ಜ್ಞಾನದ ಆಗರವಾಗಿದೆ ನಮ್ಮ ಕಷ್ಟಗಳಿಗೆ ಪರಿಹಾರವನ್ನು ನೀಡುವವರು ಗುರುವಾಗಿದ್ದಾರೆ. ಪ್ರಾಚೀನ ಕಾಲದಿಂದಲು ನಾಡಿನ ಮಠಗಳು ಜ್ಞಾನ ಯಜ್ಞವನ್ನು ಮಾಡುತ್ತ ಶಿಕ್ಷಣ ಕೇಂದ್ರಗಳಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜನಪದ ಗಾಯನದಲ್ಲಿ ಸಾಧನೆ ಮಾಡಿದ ಕರಡಿ ಗುಡ್ಡ ಗ್ರಾಮದ ದುರ್ಗಮ್ಮ ರವರಿಗೆ ಶ್ರೀಕಲ್ಮಠದಿಂದ ಸುವರ್ಣ ಸಾಧಕಿ ಸೀರಿ ಪ್ರಶಸ್ತಿಯನ್ನು ನೀಡಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು.ಶ್ರೀದೇವಿ ಪುರಾಣ ಪ್ರವಚನವನ್ನು ಗುಡೂರು ಇಲಕಲ್ ಹಿರೇಮಠದ ಶ್ರೀ ಅನ್ನದಾನಸ್ವಾಮಿಗಳು ನೀಡಿದರು. ಸಂಗೀತೆ ಸೇವೆಯನ್ನು ವಿಶ್ವೇಶ್ವರಯ್ಯ ಹಿರೇಮಠ, ತಬಲ ಸಾಥ್ ಸಿದ್ದಯ್ಯಸ್ವಾಮಿ ನೀಡಿದರು. ಬೃಹನ್ಮಠ ನೀಲಗಲ್ ಸಂಸ್ಥಾನ ಮಠದ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾ ಸ್ವಾಮಿಗಳು, ಚೀಕಲಪರ್ವಿ ಶ್ರೀರುದ್ರ ಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ, ಬಸವನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಸೇರಿದಂತೆ ಇನ್ನಿತರರು ಇದ್ದರು.
ಬಾಕ್ಸ್ ನ್ಯೂಸ್:-
ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಶ್ರೀ ಕಲ್ಮಠ ದಸರಾ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಹಂಪಯ್ಯನಾಯಕ ಉದ್ಘಾಟಿಸಿದರು.
ಬಾಕ್ಸ್ ನ್ಯೂಸ್:-
ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಶ್ರೀ ಕಲ್ಮಠ ದಸರಾ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಜನಪದ ಗಾಯಕಿ ಕರಡಿಗುಡ್ಡ ಗ್ರಾಮದ ದುರ್ಗಮ್ಮ ರವರಿಗೆ ಶ್ರೀಕಲ್ಮಠ ದಿಂದ ಸುವರ್ಣ ಸಾಧಕಿ ಸೀರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕು0ದಿ.ಮಾನ್ವಿ