ರೈತರ ಬಗ್ಗೆ ಮೃದು ಧೋರಣೆ ತರವಲ್ಲಾ – ರೈತರಿಂದ ಸಂಘದಿಂದ ಉಗ್ರ ಹೋರಾಟದ ಎಚ್ಚರಿಕೆ.
ಕಲಕೇರಿ ಸ.24





ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಇವರು ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಕ್ಕೆ ಮೂರರಿಂದ ನಾಲ್ಕು ವರ್ಷಗಳ ಕಾಲ ರೈತರ ಇನ್ಸೂರೆನ್ಸ್ ಹಾಗೂ ರೈತರ ಬೆಳೆ ಪರಿಹಾರ ಯಾವುದು ನಮ್ಮ ರೈತರಿಗೆ ತಲುಪಿಲ್ಲಾ ಕಲಕೇರಿ ಲೆಕ್ಕ ಅಧಿಕಾರಿಗಳಿಗೆ ಕೇಳಿದರೆ ತಾಳಿಕೋಟೆ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಗೆ ಹೋಗಿ ಕೇಳಿ ಅಂತಾ ಹೇಳುತ್ತಾರೆ ರೈತ ಸಂಪರ್ಕ ಅಧಿಕಾರಿಗಳಿಗೆ ಕೇಳಿದರೆ ಮೇಲಾಧಿಕಾರಿಗಳಿಗೆ ಕೇಳಿ ಅಂತಾ ಹೇಳಿಕೆ ಕೊಡುತ್ತಾರೆ. ಹಾಗಿದ್ದರೆ ಈ ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ. ಇವರು ಯಾವ ಕೆಲಸಗಳನ್ನು ಮಾಡುತ್ತಾರೆ ಒಂದು ಅಧಿಕಾರಿಗಳಿಗೆ ಕೇಳಿದರೆ ಸರ್ ನಿಮ್ಮ ಕೆಲಸಗಳನ್ನು ಮಾಡಿ ಮೇಲೆ ಕಳಿಸುವುದು ಅಷ್ಟೇ ನಮ್ಮ ಕೆಲಸ ಎಂದು ಅಧಿಕಾರಿಗಳು ಹೇಳುತ್ತಾರೆ ಅಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನಾವು ಕೊಡುತ್ತೇವೆ. ಒಂದು ವಾರದ ನಂತರ ತಾಳಿಕೋಟೆ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ನಾವೆಲ್ಲರೂ ರೈತರು ಸೇರಿ ಬೀಗ ಹಾಕುವುದು ಖಚಿತ ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಯಾಕೆ ಅಂದರೆ ನಮ್ಮ ರೈತರಿಗೆ ಬರುವಂತಾ ಇನ್ಸೂರೆನ್ಸ್ ಹಾಗೂ ಬೆಳೆ ಪರಿಹಾರ ಒಂದು ವಾರದಲ್ಲಿ ನಮ್ಮ ರೈತರಿಗೆ ಮುಟ್ಟಬೇಕು ಏಕೆ ಅಂದರೆ ಈ ದೇಶದ ಬೆನ್ನೆಲುಬು ರೈತ ಎಂಬುದನ್ನು ಮರೆಯ ಬೇಡಿ ಹಾಗೂ ನಮ್ಮ ಕಲಕೇರಿ ಗ್ರಾಮದ ರೈತರು ಈ ವರ್ಷ ಮಳೆ ತುಂಬಾ ಆಗಿ ಹತ್ತಿ ತೊಗರಿ ಎಲ್ಲಾ ನಾಶವಾಗಿದೆ ಹೀಗಿದ್ದರೂ ರೈತರು ಈ ವರ್ಷ ಸಾಲ ಶೂಲ ಮಾಡಿ ಇನ್ಸೂರೆನ್ಸ್ ಕಟಟಿ ಹೋಗಿದ್ದಾರೆ. ಈಗಲಾದರೂ ಸರಕಾರಿ ಅಧಿಕಾರಿಗಳು ನಮ್ಮ ಭಾಗದ ರೈತರಿಗೆ ಬೆಳೆ ಪರಿಹಾರ ಹಾಗೂ ಇನ್ಸೂರೆನ್ಸ್ ನಮ್ಮ ರೈತರಿಗೆ ಬೇಕು.ಕಲಕೇರಿ ಗ್ರಾಮದ ರೈತರಿಗೆ ಸ್ಪಿಂಕ್ಲರ್ ಪೈಪ್‌ಗಳನ್ನು ಯಾವ ರೈತರಿಗೆ ತಲುಪಿಲ್ಲಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಕೇಳಿದರೆ ಇನ್ನೂ ಕಂಪನಿಯಿಂದ ಬಂದಿಲ್ಲಾ ಬಂದ ಮೇಲೆ ಅನ್ನುವಂತ ಮಾತುಗಳನ್ನು ಹೇಳುತ್ತಾರೆ ಬರೀ ಉಡಾಫೆ ಮಾತುಗಳನ್ನು ಹೇಳತ್ತಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಒಂದು ವಾರದಲ್ಲಿ ನಮ್ಮ ರೈತರಿಗೆ ಬೆಳೆ ಪರಿಹಾರ ಹಾಗೂ ಇನ್ಸೂರೆನ್ಸ್ ಹಾಗೂ ಸ್ಪಿಂಕ್ಲರ್ ಪೈಪ್ಗಳನ್ನು ನಮ್ಮ ಭಾಗದ ರೈತರಿಗೆ ಮುಟ್ಟಬೇಕು ಇಲ್ಲದಿದ್ದರೆ ಒಂದು ವಾರದಲ್ಲಿ ರಾಷ್ಟ್ರೀಯ ರೈತ ಸಂಘದ ಎಲ್ಲಾ ರೈತರು ಸೇರಿ ಉಗ್ರವಾದ ಹೋರಾಟವನ್ನು ಮಾಡಿ ಬೀಗ ಹಾಕುತ್ತೇವೆ ಎಂದು ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಹಾಗೂ ತಾಲೂಕ್ ಅಧ್ಯಕ್ಷರು ಅಶೋಕ್ ಗೌಡ ಪಾಟೀಲ್. ಗೌಡಪ್ ಗೌಡ ಹಳಿಮನಿ ಇವರು ಪತ್ರಿಕೆಯ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷಾ.ಮನಗೂಳಿ.ತಾಳಿಕೋಟೆ