ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನ – ಸೆಪ್ಟೆಂಬರ್ 24 ರಂದು ಆಚರಿಸಿದರು.
ಮಾನ್ವಿ ಸ.24





ದಿನಾಂಕ 24-09-2025 ರಂದು ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾನ್ವಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ “ಸಂಸ್ಥಾಪನ ದಿನ” ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಪ್ರಾರಂಭಿಸಲಾಯಿತು ಮತ್ತು ಕಾರ್ಯಕ್ರಮದಲ್ಲಿ 2024-25 ನೇ. ಸಾಲಿನಲ್ಲಿ ‘ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ಶಿಬಿರ’ ದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ ಪ್ರಭಾರಿ ಪ್ರಾಂಶುಪಾಲರಾದ ಶ್ರೀ ಸೈಯದ್ ಮಿನ್ಹಾಜ್-ಉಲ್-ಹಸನ್ ರವರು ಮಾತನಾಡುತ್ತ ವಿದ್ಯಾರ್ಥಿ ಸೇವಾ, ಸಮರ್ಪಣೆ ಮತ್ತು ಸ್ವಚ್ಛತೆ ನಮ್ಮ ಮೂಲ ಮಂತ್ರವಾಗಿಸೋಣ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸೇವಾ ನಾಯಕರಾಗ ಬೇಕು ಎಂದು ಹುರಿದುಂಬಿಸಿದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಚಾಲಕರಾದ ಡಾ, ಸೈಯದ್ ಮುಜೀಬ್ ಅಹ್ಮದ್ ಅವರು ಮಾತಾನಾಡಿ ಈ ದಿನದ ವಿಶೇಷತೆ, ಇತಿಹಾಸ ಮತ್ತು ರಾ.ಸೇ.ಯೋ.ಯ ಧೇಯ ವಾಕ್ಯ, ಸೇವಾ ಮನೋಭಾವ ಮತ್ತು ಶಿಸ್ತಿನ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರೆ ಕೊಟ್ಟರು.

ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ರೆಡ್-ಕ್ರಾಸ್ ಘಟಕ ಸಂಚಾಲಕರಾದ ಶ್ರೀ ಚಂದ್ರು, ಐ.ಕ್ಯೂ.ಎ.ಸಿ. ಸಂಚಾಲಕರಾದ ಶ್ರೀ ಶ್ರೀಧರ, ಸಾಂಸ್ಕೃತಿಕ ಸಂಚಾಲಕರಾದ ಡಾ, ಚನ್ನಬಸವ , ಎನ್.ಸಿ.ಸಿ ಮತ್ತು ರೋವರ್ ಘಟಕದ ಸಂಚಾಲಕರಾದ ಶ್ರೀ ಉಸ್ಮಾನ್ ಬಾಷಾ ಮತ್ತು ಗ್ರಂಥಾಲಯ ಸಂಚಾಲಕಿಯಾದ ಕು. ಹರ್ಷಿತಾ ಅವರೆಲ್ಲಾರು ಸಹ ವಿದ್ಯಾರ್ಥಿಗಳನ್ನು ಉದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಧಾ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿ ಕು.ಸುಶ್ಮಿತಾ ನಿರೂಪಿಸಿದರು, ಸ್ವಾಗತತವನ್ನು ಕು.ರೇಣುಕಾ ಮತ್ತು ಕು.ಶಿವಕುಮಾರ್ ವಂದನಾರ್ಪಣೆಯನ್ನು ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ