ಹಳೇ ಅಗೆ ಕುಸಿದು ವ್ಯಕ್ತಿಗೆ – ತೀವ್ರ ತರಹದ ಗಾಯಗಳು.
ಹಳೆ ತಾರಾಪುರ ಸ.24





ಆಲಮೇಲ ತಾಲೂಕಿನ ಹಳೆ ತಾರಾಪುರ ಗ್ರಾಮದಲ್ಲಿ ಹಳೇ ಅಗೆ ಕುಸಿದು ವ್ಯಕ್ತಿ ಅದರಲ್ಲಿ ಬಿದ್ದಿದ್ದಾರೆ ಅವರಿಗೆ ತೀವ್ರ ತರಹದ ಗಾಯಗಳಾಗಿವೆ.ತಾರಾಪುರ ಗ್ರಾಮದ ಆನಂದ.ಮಲ್ಲಪ್ಪ ಕಂಟಿಕೋರ ಎಂಬ ವ್ಯಕ್ತಿಯು ಗ್ರಾಮದ ಕಿರಾಣಿ ಅಂಗಡಿಯ ಮುಂದೆ ನಿಂತಿರುವ ಸಂದರ್ಭದಲ್ಲಿ ಹಳೇ ಅಗೆ ಕುಸಿದು ಸುಮಾರು 20 ಅಡಿ ಆಳವಾದ ಗುಂಡಿ ಬಿದ್ದಿದೆ ತಕ್ಷಣ ಸ್ಥಳದಲ್ಲಿದ್ದ ಗ್ರಾಮಸ್ಥರು ಅವರನ್ನು ಆ ಗುಂಡಿಯಿಂದ ಮೇಲಕ್ಕೆತ್ತಿದ್ದಾರೆ.

ವ್ಯಕ್ತಿಗೆ ಬೆನ್ನು ಮುಂಗೈ ಸೊಂಟ ಮುಂತಾದ ಕಡೆಗಳಲ್ಲಿ ತೀವ್ರ ತರಹದ ಗಾಯಗಳಾಗಿವೆ ತಕ್ಷಣ ಅವರನ್ನು ಸಿಂದಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಸ್ಥಳೀಯ ಜನರ ಪ್ರಕಾರ ಇದು ಹಿಂದಿನ ಕಾಲದ ಧಾನ್ಯ ಸಂಗ್ರಹದ ಅಗೆವು (ಭೂಮಿ ಒಳಗೆ ಧಾನ್ಯ ಸಂಗ್ರಹದ ಸ್ಥಳ) ಅದು ಮಳೆಯ ಪ್ರಮಾಣ ಹೆಚ್ಚಾಗಿ ಹಾಗೂ ಭೀಮಾ ನದಿಯಲ್ಲಿ ನೀರಿನ ಪ್ರಮಾಣವೂ ಕೂಡ ತುಂಬಿರುವು ದರಿಂದ ಇದು ತೆರೆದು ಕೊಂಡಿದೆ ಎಂದು ಹಿರಿಯರು ವಿವರಿಸಿದ್ದಾರೆ. ನದಿಯ ನೀರು ಗ್ರಾಮವನ್ನು ಸುತ್ತುವರಿದಿದ್ದು, ಸಿಂದಗಿ ಪಟ್ಟಣದಲ್ಲಿ ಪದೇ ಪದೇ ಭೂಮಿ ಒಳಗಿಂದ ಸದ್ದು ಬರುತ್ತಿರುವುದು ಇವುಗಳ ಮಧ್ಯೆ ಗ್ರಾಮದಲ್ಲಿ ಭೂಮಿ ಕುಸಿದಿರುವುದು ಕಂಡು ಜನ ಆತಂಕಕ್ಕೆ ಒಳಗಾಗಿದ್ದಾರೆ
ಬಾಕ್ಸ್ ನ್ಯೂಸ್:-
1) ಹಳೆ ತಾರಾಪುರ ಗ್ರಾಮದಲ್ಲಿ ಹಳೇ ಅಗೆ ಕುಸಿದಿರುವ ಭೂಮಿ
ಬಾಕ್ಸ್ ನ್ಯೂಸ್:-
2) ಭೂಮಿ ಕುಸಿದು ಆಳವಾದ ಗುಂಡಿಗೆ ಬಿದ್ದಿರುವ ಯುವಕ ಆನಂದ ಕಂಟಿಕೋರ ಅವರು ಫೋಟೋ

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ