ತರೀಕೆರೆ ನೂತನ ಬಸ್ ನಿಲ್ದಾಣ ಶಂಕುಸ್ಥಾಪನೆ – ಸಚಿವ ರಾಮಲಿಂಗ ರೆಡ್ಡಿ.
ತರೀಕೆರೆ ಸೆ.24





ಶಕ್ತಿ ಯೋಜನೆಯಲ್ಲಿ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ 1 ಕೋಟಿ 57 ಲಕ್ಷದ 66 ಸಾವಿರ ಜನ ಕಡೂರು ಘಟಕದಲ್ಲಿ ಪ್ರಯಾಣಿಸಿರುವುದು ದಾಖಲಾಗಿದೆ ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳನ್ನು ಹೆಚ್ಚು ನೀಡುತ್ತಿದ್ದೇವೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು. ಅವರು ಇಂದು ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆವರಣದಲ್ಲಿ ಏರ್ಪಡಿಸಿದ್ದ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ತರೀಕೆರೆ ಬಸ್ ನಿಲ್ದಾಣಕ್ಕಾಗಿ 9 ಕೋಟಿ 15 ಲಕ್ಷ ರೂಗಳ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ ಮತ್ತು ಡಿಪೋ ನಿರ್ಮಾಣಕ್ಕೆ ಮೂರು ಕೋಟಿ ಅನುದಾನವನ್ನು ಕೊಟ್ಟಿರುವುದಾಗಿ ತಿಳಿಸಿದರು. ಚಿಕ್ಕಮಗಳೂರು ಶಿವಮೊಗ್ಗ ತುಮಕೂರು ಚಿತ್ರದುರ್ಗ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ಹೆಚ್ಚು ಓಡಾಡುತ್ತಿವೆ ಆದ್ದರಿಂದ ಗ್ರಾಮಾಂತರ ಪ್ರದೇಶಗಳಿಗೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಬಿಡುವುದಾಗಿ ಹೇಳಿದರು.
ತರೀಕೆರೆಯಲ್ಲಿ ಎ ಆರ್ ಟಿ ಓ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಜಾಗ ಕೊಟ್ಟರೆ ಕಟ್ಟಡವನ್ನು ಕಟ್ಟಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು ಈ ಕುರಿತು ತರೀಕೆರೆ ಶಾಸಕ ಜಿ ಎಚ್ ಶ್ರೀನಿವಾಸ್ ರವರು ಅಸೆಂಬ್ಲಿಯಲ್ಲೂ ಸಹ ಚರ್ಚೆ ಮಾಡಿರುವುದಾಗಿ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಜಿಎಚ್ ಶ್ರೀನಿವಾಸ್ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವುದರಿಂದ ಜನರ ಆದಾಯ ಹೆಚ್ಚಾಗಿದ್ದು ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂಟು ಕೋಟಿ ರೂ ಅನುದಾನದಲ್ಲಿ ಪುರಸಭಾ ಕಟ್ಟಡ ನಿರ್ಮಾಣ ವಾಗುತ್ತಿದೆ, ಒಂದು ಕೋಟಿ ಅನುದಾನದಲ್ಲಿ ಬೈಲು ರಂಗ ಮಂದಿರ ನಿರ್ಮಾಣವಾಗುತ್ತಿದೆ.
ತರೀಕೆರೆ ಕ್ಷೇತ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣವನ್ನು ನೀರಾವರಿ ಸಚಿವರು ನೀಡಿದ್ದು ಅಭಿವೃದ್ಧಿ ಕಾರ್ಯಕ್ರಮಗಳು ತುಂಬಾ ನಡೆಯುತ್ತಿದೆ ಆದರೆ ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟಕ್ಕೆ ಬಸ್ಸುಗಳ ವ್ಯವಸ್ಥೆ ಆಗಬೇಕಾಗಿದೆ ಅದೇ ರೀತಿ ಅಜ್ಜಂಪುರ, ಶಿವನಿ,ಬುಕ್ಕಂಬೂದಿಗೆ ಗ್ರಾಮಾಂತರ ಬಸ್ಸುಗಳು ತರೀಕೆರೆಯಿಂದ ಬೆಟ್ಟದಹಳ್ಳಿ, ಕೋರನಹಳ್ಳಿ, ಬೀರೂರು ಮತ್ತು ಕಡೂರು ಮಾರ್ಗದಲ್ಲಿ ಗ್ರಾಮಾಂತರ ಬಸ್ಸುಗಳು ಅವಶ್ಯಕತೆ ಇದೆ. ತರೀಕೆರೆ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಬಸ್ ನಿಲ್ದಾಣ ನಾಮಕರಣ ಮಾಡಬೇಕು ಎಂದು ಹೇಳಿದರು. ಕೆ ಹೊಸೂರಿನಲ್ಲಿ ಡಿಪೋ ನಿರ್ಮಾಣಕ್ಕೆ ಎಷ್ಟೇ ಅಡೆ ತಡೆಗಳು ಬಂದರೂ ನಿವಾರಿಸಿ ಡಿಪೋ ನಿರ್ಮಾಣ ಮಾಡಲು ಇಂದು ಚಾಲನೆ ಸಿಕ್ಕಿದೆ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಮಾತನಾಡಿ ಹಲವಾರು ವರ್ಷಗಳ ಬೇಡಿಕೆ ಇಂದು ನೆರವೇರುತಿದೆ ಬಿ ಎಚ್ ರಸ್ತೆ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿದೆ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಕಾರಣರಾದ ಶಾಸಕರಿಗೆ ಧನ್ಯವಾದಗಳು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಯು ಫಾರೂಕ್ ಮಾತನಾಡಿ 56 ಸಾವಿರ ಕೋಟಿ ಅನುದಾನದಲ್ಲಿ ಬಿ ಹೆಚ್ ರಸ್ತೆ ಕಾಮಗಾರಿ ನಿರ್ಮಾಣವಾಗುತ್ತಿದ ಮಾನ್ಯ ಸಾರಿಗೆ ಸಚಿವರು ಗ್ರಾಮಾಂತರ ಶಾಲಾ ಮಕ್ಕಳಿಗೆ ಬಸ್ಸುಗಳ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು ಹಾಗೂ ಮಾನ್ಯ ರಾಮಲಿಂಗಾರೆಡ್ಡಿ ಸಾಹೇಬರು ಎಂಟು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಜನಪ್ರಿಯ ಶಾಸಕರು ಸಚಿವರು ಆಗಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಾರಿಗೆ ನಿಗಮದ ನಿರ್ದೇಶಕರಾದ ಇಬ್ರಾಹಿಂ ಮೈಗೂರ, ಪುರಸಭಾ ಉಪಾಧ್ಯಕ್ಷರಾದ ಪಾರ್ವತಮ್ಮ ತಿಮ್ಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಂಜಯ್ಯ ಅನಿಲ್ ಕುಮಾರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೆಚ್ ವಿಶ್ವನಾಥ್ ಪುರಸಭಾ ಮಾಜಿ ಅಧ್ಯಕ್ಷರಾದ ಪ್ರಕಾಶ್ ವರ್ಮಾ ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಯಾನಂದ, ಬಗರ್ ಹುಕುಂ ಸಮಿತಿ ಸದಸ್ಯರಾದ ಜಗದೀಶ್, ನೌಕರ ಸಂಘದ ಅಧ್ಯಕ್ಷರಾದ ಅನಂತಪ್ಪ, ಅಜ್ಜಂಪುರ ನೌಕರರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ, ತರೀಕೆರೆ ಪುರಸಭಾ ಮಾಜಿ ಅಧ್ಯಕ್ಷರಾದ ಟಿ ಎಸ್ ರಮೇಶ್, ತಾಲೂಕು ಗ್ಯಾರೆಂಟಿ ಸಮಿತಿ ಸದಸ್ಯರಾದ ಎಚ್ ಎಸ್ ಮೆಹಬೂಬ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಉಪಸಿತರಿದ್ದು ಸಾರಿಗೆ ನಿಗಮದ ಸಹಾಯಕ ಲೆಕ್ಕಾಧಿಕಾರಿಯದ ಕೆ ಜೆ ಜಯಣ್ಣ ಸ್ವಾಗತಿಸಿ ಶಾರದ ರವರು ಪ್ರಾರ್ಥಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು