ಬಡಜನರ ಬದುಕಿಗಾಗಿ ಜನಾಆಶಾ ಸೌತ್ ನಿಧಿ – ಗಿರೀಶ್ ಆಲೂರು.
ತರೀಕೆರೆ ಸ.25





ಬ್ಯಾಂಕ್ ದಿವಾಳಿ ಯಾದರೆ ದೇಶವೇ ದಿವಾಳಿ ಯಾದಂತೆ ಆದ್ದರಿಂದ ಸಾಲ ಪಡೆದವರು ಪ್ರಾಮಾಣಿಕವಾಗಿ ಮರು ಪಾವತಿ ಮಾಡಬೇಕು ಮತ್ತು ಉಳಿತಾಯ ಮಾಡಬೇಕು ಎಂದು ಜನಾಆಶಾ ಸೌತ್ ನಿಧಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಗಿರೀಶ್ ಆಲೂರು ರವರು ಹೇಳಿದರು.
ಅವರು ಇಂದು ಪಟ್ಟಣದ ಕೋಡಿ ಕ್ಯಾಂಪನ ಬಿ.ಆರ್.ಬಿ ಕಾಂಪ್ಲೆಕ್ಸ್ ನಲ್ಲಿ ತರೀಕೆರೆಯಲ್ಲಿ ನೂತನ ಶಾಖಾ ಕಛೇರಿ ಉದ್ಘಾಟನೆ ಮಾಡಿ ಮಾತನಾಡಿದರು. ಬ್ಯಾಂಕ್ ವ್ಯವಹಾರಗಳು ಡಿಜಿಟಲ್ ಆಗಿ ಪರಿವರ್ತನೆ ಆಗುತ್ತಿದೆ ವ್ಯವಹಾರದಲ್ಲಿ ಈ ಸಂಸ್ಥೆ ಬಡ ವ್ಯಾಪಾರಸ್ಥರಿಗಾಗಿ ಬಡಜನರ ಬದುಕಿಗಾಗಿ ಸೇವೆ ಸಲ್ಲಿಸುತ್ತಿದೆ, ಯಾವುದೇ ದಾಖಲೆಗಳನ್ನು ಕೇಳದೆ ನೇರವಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುತ್ತೇವೆ ಆದ್ದರಿಂದ 100 ರೂ ಹಣ ಕಟ್ಟಿ ಖಾತೆ ತೆರೆದು ವ್ಯವಹರಿಸಿ 5 ಸಾವಿರ ಗಳಿಂದ 10 ಲಕ್ಷದ ವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಈ ಸಂಸ್ಥೆಯ ಅಭಿವೃದ್ಧಿಗೆ ಸ್ಥಳೀಯರಾದ ಅಥಾವುರ್ ರೆಹಮಾನ್, ರವಿ, ರಾಧಾ, ಶಬಾನ ಮುಂತಾದ ಯುವಕರು ಕೈಜೋಡಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಈ ಸಂಸ್ಥೆ ನೌಕರರಿಗೆ ಅತಿ ಹೆಚ್ಚು ವೇತನ ಕೊಡುತ್ತಿದೆ ಭಾರತ ದೇಶದಲ್ಲಿ ಅತಿ ಹೆಚ್ಚು ವೇತನ ಜನಾಆಶಾ ಸೌತ್ ನಿಧಿ ಲಿಮಿಟೆಡ್ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗಿಯ ವ್ಯವಸ್ಥಾಪಕರಾದ ಎಸ್ ಶಿವಣ್ಣ ಮಾತನಾಡಿ ಕಡು ಬಡವರಿಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಿ ಅವರ ಜೀವನ ಅಭಿವೃದ್ಧಿಯೆ ನಮ್ಮ ಸಂಸ್ಥೆಯ ಗುರಿಯಾಗಿದೆ.
ಖಾತೆದಾರ ಉಳಿತಾಯ ಮಾಡಿದ ಹಣಕ್ಕೆ ಪ್ರತಿಯೊಂದು ವರ್ಷಕ್ಕೆ ಒಂಬತ್ತು ಪರ್ಸೆಂಟ್ ಬಡ್ಡಿ ನೀಡುತ್ತೇವೆ ಹಾಗೂ ಗ್ರಾಹಕರು ಉಳಿತಾಯ ಮಾಡಿದ ಮೊತ್ತದ ಎರಡರಷ್ಟು ಹೆಚ್ಚು ಸೌಲಭ್ಯ ನೀಡಲಾಗುವುದು ವಯಸ್ಸಾದವರಿಗೆ 5 ಲಕ್ಷ ಹಣ ಠೇವಣಿ ಮಾಡಿದರೆ ಪ್ರತಿ ತಿಂಗಳು 5000 ಹಣ ನೀಡಲಾಗುವುದು.
ಈ ಸಂಸ್ಥೆಯು 24 ಡಿಸೆಂಬರ್ 202 ರಲ್ಲಿ ಸ್ಥಾಪನೆ ಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ ತರೀಕೆರೆ ಶಾಖೆಯು ರಾಜ್ಯದಲ್ಲಿ 56 ನೇ. ಶಾಖೆಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವ್ಯವಸ್ಥಾಪಕರಾದ ಶಿವಕುಮಾರ್ ರವರು ಜನಾಆಶಾ ನಿಧಿ ಲಿಮಿಟೆಡ್ ಸಂಸ್ಥೆಯಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಸಿದರು.
ಪಿ.ಆರ್.ಓ ಈಶ್ವರನಾಯ್ಕ್ , ಅಭಿವೃದ್ಧಿ ಅಧಿಕಾರಿಯಾದ ಹತಾವೂರ್ ರೆಹಮಾನ್, ಕಸ್ಟಮರ್ ರಿಲೇಶನ್ ಆಫೀಸರ್ ರವಿ ಮಾತನಾಡಿದರು,ಸಿ ಆರ್ ಓ ಶಬಾನ, ಬಿ ಎ ಶಬಾನ ದಿವಂಗತ ಮಾಜಿ ಶಾಸಕರಾದ ಬಿ.ಆರ್ ನೀಲಕಂಠಪ್ಪರವರ ಸಹೋದರರಾದ ಬಿ.ಆರ್ ಬಸವರಾಜ್, ಸುರೇಶ್ ಉಪ್ಪಸಿತರಿದ್ದು ಎಸ್.ಆರ್.ಸಿ ಆರ್.ಓ ಅಂಜನಪ್ಪ ಸ್ವಾಗತಿಸಿ ನಿವೃತ್ತ ಶಿಕ್ಷಕ ಬಿ.ಪಿ ವಿಶ್ವನಾಥಾಚಾರಿ ಪ್ರಾರ್ಥಿಸಿ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ.ಚಿಕ್ಕಮಗಳೂರು