ತಾ.ಪಂ ಆವರಣದಲ್ಲಿ ಏಕ್ ದಿನ್, ಏಕ ಘಂಟಾ – ಏಕ್ ಸಾಥ್ ಶ್ರಮದಾನ.
ಹುನಗುಂದ ಸ.26





ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಭಾಗವಾದ ಏಕ್ ದಿನ್, ಏಕ ಘಂಟಾ, ಏಕ್ ಸಾಥ್ ನಿಮಿತ್ಯ ಶ್ರಮದಾನ ಕಾರ್ಯಕ್ರಮಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಚಾಲನೆ ನೀಡಿದರು.
ತಾಲೂಕ ಪಂಚಾಯಿತಿ ಆವರಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಅವರು ಕಸ ಗೂಡಿಸುವ ಮೂಲಕ ಸ್ವಚ್ಛ ಬದುಕು ಸ್ವಸ್ಥ ಸಮಾಜ ಅರಿವು ಮೂಡಿಸಿದರು.
ಬಳಿಕ ತಾಲೂಕ ಪಂಚಾಯಿತಿ ಸಿಬ್ಬಂದಿ ವರ್ಗ ಆವರಣವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧಿಕ್ಷಕರು ರಾಜಾರೆಡ್ಡಿ ಕುರಹಟ್ಟಿ, ಎಸ್ ಡಿಎ ಬಿ. ಎಮ್ ಧನ್ನೂರ, ತಾಂತ್ರಿಕ ಸಂಯೋಜಕ ನವೀನ್ ಹಂಚಾಟೆ , ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಕೃಷ್ಣಾಜಿ ಪವಾರ್ ತಾಂತ್ರಿಕ ಸಹಾಯಕರು, ತಾಪಂ ಸಿಬ್ಬಂದಿ ವರ್ಗ, ಎನ್.ಆರ್.ಎಲ್.ಎಂ ಸಿಬ್ಬಂದಿ ವರ್ಗ, ಕಾಯಕ ಮಿತ್ರರು ಉಪಸ್ಥಿತರಿದ್ದರು.