ರಸ್ತೆ ಗುಂಡಿಗಳಿಗೆ ಹೂ ಚೆಲ್ಲಿ ಪೂಜೆ ಪುನಸ್ಕಾರ – ಕೆ.ಆರ್.ಎಸ್ ಪಕ್ಷದಿಂದ ವಿಭಿನ್ನ ಪ್ರತಿಭಟನೆ.
ಗಂಗಾವತಿ ಸ. 26





ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬುಧುವಾರ ಗಂಗಾವತಿ ನಗರದಲ್ಲಿರುವ ದೊಡ್ಡ ದೊಡ್ಡ ತಗ್ಗು ಗುಂಡಿಗಳಿಗೆ ಹೂ ಚೆಲ್ಲಿ, ಊದು ಬತ್ತಿ ಬೆಳಗಿ ಪೂಜೆ ಪುನಸ್ಕಾರ ಮಾಡಿ ಮಳೆ ನೀರಿನಿಂದ ತುಂಬಿದ್ದ ಗುಂಡಿಗಳಲ್ಲಿ ಕುಳಿತು ವಿಶೇಷ ಮತ್ತು ವಿಭಿನ್ನ ವಿಧಾನಗಳಲ್ಲಿ ನಗರ ಸಭೆ ಮುಖ್ಯಾಧಿಕಾರಿ, ನಗರಸಭೆ ಸದಸ್ಯರು,ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದರು.


ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ ಕೆ.ಆರ್.ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಗಂಗಾವತಿ ನಗರಾದ್ಯಂತ ಹಲವಾರು ವರ್ಷಗಳಿಂದ ಪ್ರತಿ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿದ್ದು.


ಇದರಿಂದ ರಸ್ತೆ ಸವಾರರಿಗೆ, ಸಂಚಾರಿಗಳಿಗೆ, ಶಾಲಾ ಮಕ್ಕಳಿಗೆ, ಹಿರಿಯರಿಗೆ, ಪಾದಚಾರಿಗಳಿಗೆ ಅನಾನುಕೂಲತೆ ಸೃಷ್ಟಿಯಾಗಿದ್ದು ನಗರದ ಸಾರ್ವಜನಿಕರ ಮೂಲಭೂತ ಸೇವೆ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ನಗರ ಸಭೆ ಆಡಳಿತಾಧಿಕಾರಿಗಳು, ಜನ ಪ್ರತಿನಿಧಿಗಳು ಸಂಪೂರ್ವಾಗಿ ವಿಫಲವಾಗಿದ್ದಾರೆ. ಇದರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದಾದ್ಯಂತ ತಗ್ಗು ಗುಂಡಿಗಳನ್ನು ಮುಚ್ಚುವ ವಿಶೇಷವಾದ ಹೋರಾಟ ಅಭಿಯಾನಗಳನ್ನು ಹಮ್ಮಿಕೊಂಡಿದ್ದು ಅದರ ಭಾಗವಾಗಿ ಗಂಗಾವತಿ ನಗರದಲ್ಲಿ ಕೂಡ ರಸ್ತೆಯ ಗುಂಡಿಗಳಿಗೆ ಹೂ ಚೆಲ್ಲಿ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಣೇಶ್ ಅಮೃತ್, ಮೈನುದ್ದೀನ್, ಗಣೇಶ್ ಸಾರಂಗಿ, ಮೆಹಬೂಬು, ಮಹಮ್ಮದ್ ಹುಸೇನ್, ಕನಕಪ್ಪ ಉಡಿಜಾಲಿ, ವೀರೇಶ್ ಎಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ