ವಾಲ್ಮೀಕಿ ಸಮಾಜದಿಂದ – ಬೃಹತ್ ಪ್ರತಿಭಟನೆ.
ಮಾನ್ವಿ ಸ.26





ಕುರುಬ ಸಮಾಜವನ್ನು ಎಸ್ಟಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಮಾನ್ವಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಟೈರ್ ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮಾಜ ಜಮಾವಣೆಗೊಂಡು ನಾವು ಮೊದಲಿನಿಂದಲೂ ವಾಲ್ಮೀಕಿ ನಾಯಕ ಸಮಾಜದವರು ಎಂದು ಸರಕಾರವೇ ಗುರುತಿಸಿದೆ.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಮುಂದಾದರೆ ನಾವು ಏನೆಂದು ತೋರಿಸುತ್ತೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ನೀವು ಮುಖ್ಯಮಂತ್ರಿಯಾಗಲು ನಮ್ಮ ಜನಾಂಗದ ವಾಲ್ಮೀಕಿ ಸಮಾಜದ ಶಾಸಕರು ಸಹ ಕಾರಣ. ಆದರೆ ನಮ್ಮ ಜನಾಂಗಕ್ಕೆ ದ್ರೋಹ ಬಗೆದು ಕುರುಬ ಸಮಾಜವನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸಲು ಮುಂದಾದರೆ ರಾಜ್ಯ ಹೊತ್ತಿ ಉರಿಯುತ್ತದೆ ಎಂದರು. ನಾಯಕ ಜನಾಂಗದವರು ಅಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ