ಸಿಎ ಸೈಟ್ ಗಳ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ – ಮಹೇಂದ್ರ.ನಾಯಕ ಆಗ್ರಹ.
ಮಾನ್ವಿ ಸ.26





ಮಾನ್ವಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನುಮೋದನೆಯಾದ ಲೇಔಟ್ ಗಳಲ್ಲಿ ಸಿಎ ಸೈಟ್ ಗಳ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು, ಮಹಾನ್ ನಾಯಕರ ಭವನ ನಿರ್ಮಾಣಕ್ಕೆ ಯಾಕೆ ಕೊಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ ದೊರೆ ಗುಡುಗಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆಯ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ದೇವರಾಜು ಅರಸು ಭವನ,ಬಾಬು ಜಗಜೀವನರಾಮ್ ಭವನ ನಿರ್ಮಾಣ ಮಾಡುವುದಕ್ಕೆ ಅವಕಾಶ ಕೊಡಿ ಯಾವುದೋ ಒಂದು ಪಕ್ಷಕ್ಕೆ ಸಿಎ ಸೈಟ್ ಕೊಡುತ್ತೀರಾ ಅಂದರೆ ಎಲ್ಲಿದೆ ಕಾನೂನು ಎಂದರು.
ಮಾನ್ವಿಯಲ್ಲಿ ಲೇಔಟ್ ಮಾಡಲಾಗುತ್ತದೆ ಆದರೆ ಏಕ ವಿನ್ಯಾಸ ನೆಪದಲ್ಲಿ ಸಿಎ ಸೈಟ್ ಮಾಡದೆ ಇರುವ ಚಾಳಿ ಎಂದು ವಿರೋಧ ಪಕ್ಷದ ನಾಯಕ ಮಹೇಂದ್ರ ನಾಯಕ ಕಿಡಿಕಾರಿದರು.
ಮಹಾನ್ ನಾಯಕರ ಭವನ ನಿರ್ಮಾಣಕ್ಕೆ ಸಿ.ಎ ಸೈಟ್ ನೀಡುವಂತೆ ಆಗ್ರಹ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ್ ಗುಡಿಗಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ