ಪಟ್ಟಣದ ಮೆಟ್ರಿಕ್ ನಂತರ ಬಿಸಿಎಂ ಹಾಸ್ಟೇಲ್ ವಿದ್ಯಾರ್ಥಿನಿಯರ ಸ್ಪಷ್ಟನೆ – ವಾರ್ಡನ್ ರಜಿಯಾ ಸುಲ್ತಾನ್ ರ ತೇಜೋವಧೆ ಎಂದ ವಿದ್ಯಾರ್ಥಿಗಳು.
ಮಾನ್ವಿ ನ.24





ವಾರ್ಡನ್ ರಜಿಯಾ ಸುಲ್ತಾನ್ ಅವರು ಶಿಸ್ತು ಬದ್ಧವಾಗಿ ಇರಬೇಕೆಂದು ಸಲಹೆ ಸೂಚನೆಗಳನ್ನು ತಿಳಿಸುವುದನ್ನು ಸ್ವೀಕರಿಸಿ ನಮ್ಮ ಗೆಳತಿಯರು ತಾವೇ ಟಾಯ್ಲೆಟ್ ಕ್ಲೀನ್ ಮಾಡಿ ವೀಡಿಯೋ ಹರಿ ಬಿಟ್ಟಿದ್ದು, ರಜಿಯಾ ಸುಲ್ತಾನ್ ಅವರು ನಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಟ್ಟಿದ್ದಾರೆಂದು ಮಾನ್ವಿ ಪಟ್ಟಣದ ಬಿ.ಸಿ.ಎಂ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಿ.ಸಿ.ಎಂ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ರಜಿಯಾ ಸುಲ್ತಾನ್ ರ ವಿರುದ್ಧದ ಅಪವಾದಕ್ಕೆ ವಿದ್ಯಾರ್ಥಿನಿಯರು ಸ್ಪಷ್ಟಿಕರಿಸಿ ನಮಗೆ ವಾರ್ಡನ್ ರಜಿಯಾ ಸುಲ್ತಾನ್ ಅವರೆ ಇರಬೇಕು ಎಂದು ಮಾಧ್ಯಮದ ಮುಂದೆ ತಿಳಿಸಿದರು.
ವಾರ್ಡನ್ ರಜಿಯಾ ಸುಲ್ತಾನ್ ಸ್ಪಷ್ಟಿಕರಿಸಿ ನಾನು ವಿದ್ಯಾರ್ಥಿ ಗಳೊಂದಿಗೆ ಪ್ರೀತಿಯಿಂದ ಹಾಗು ಸರಕಾರದ ಎಲ್ಲಾ ಸೌಲಭ್ಯಗಳನ್ನು ನೀಡುತ್ತ ಬಂದಿದ್ದೇನೆ. ನಾನು ವಿದ್ಯಾರ್ಥಿನಿಯರಿಗೆ ದ್ರೋಹ ಮಾಡು ಮಹಿಳೆ ಅಲ್ಲ ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ