ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ – ಜಿ.ಎಚ್ ಶ್ರೀನಿವಾಸ್.
ಮಾಕನಹಳ್ಳಿ ಸ.26





ಎಸ್.ಸಿ ಕಾಲೋನಿ ರಸ್ತೆ ಚರಂಡಿ ದುರಸ್ತಿ, ಸ್ಮಶಾನ ಸ್ವಚ್ಛತೆ ಮತ್ತು ಅರಣ್ಯ ಇಲಾಖೆ ಒತ್ತುವರಿ ಮಾಡಿ ಕೊಂಡಿರುವ ಕೆರೆ ಹಾಗೂ ಸ್ಮಶಾನ ಜಾಗವನ್ನು ಬಿಡಿಸಲು ಮಾತನಾಡುತ್ತೇನೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಅಜ್ಜಂಪುರ ತಾಲೂಕು ದೊಡ್ಡಬೋಕಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಕನಹಳ್ಳಿ ಗ್ರಾಮದಲ್ಲಿ 8. 50 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ 5 ಲಕ್ಷ ರೂಗಳ ಅನುದಾನ ಮಂಜೂರಿ ಮಾಡಿಕೊಡುತ್ತೇನೆ ಎಂದು ಘೋಷಿಸಿದರು.
ಗಡಿಹಳ್ಳಿ ಗ್ರಾಮ ದ ಸಿಸಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ, ಮುಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗದಹಳ್ಳಿ ಸಿಸಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ, ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಬಾಲ ಗೊಲ್ಲರಹಟ್ಟಿ ಗ್ರಾಮದ ಸಿಸಿ ರಸ್ತೆಗೆ 15 ಲಕ್ಷ ರೂ ಅನುದಾನ, ಅರಿಶಿನ ಘಟ್ಟ ಗ್ರಾಮದಿಂದ ಬುರುಡೆ ಕಟ್ಟೆ ಗಡಿಯವರಿಗೆ 35 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ದೊಡ್ಡ ಬೋಕಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಧಮ್ಮ, ಸದಸ್ಯರಾದ ಸುರೇಶ್, ವೀರಭದ್ರಪ್ಪ, ಮಾಜಿ ಅಧ್ಯಕ್ಷ ನಿಜಲಿಂಗಪ್ಪ, ವಿ ಎಸ್ ಎಸ್ ಎನ್ ಸದಸ್ಯ ಕೆ ಚೇತನ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ನಂಜುಂಡಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ ಚಿಕ್ಕಮಗಳೂರು