ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನೂತನ – ಅಧ್ಯಕ್ಷರಾಗಿ ಭರಮಣ್ಣ.ಉಪ್ಪಾರ ಆಯ್ಕೆ.
ವಿಜಯಪುರ ಸ.26





ಕಾಂಗ್ರೇಸ್ ಪಕ್ಷ ದ ನಿಷ್ಠಾವಂತ ಕಾರ್ಯಕರ್ತರಾಗಿ ಜನರ ಸೇವೆಯೇ ಜನತಾ ಜನಾರ್ಧನ್ ಸೇವೆಯನ್ನಾಗಿ ಮುನ್ನಡೆಯುತ್ತಿರುವ ಕಾಂಗ್ರೆಸ್ ಓ.ಬಿ.ಸಿ ಘಟಕದ ರಾಜ್ಜ ಪ್ರಧಾನ ಕಾರ್ಯದರ್ಶಿ. ಭರಮಣ್ಣ.ಲಕ್ಷ್ಮಣ್ಣ ಉಪ್ಪಾರ ಅವರಿಗೆ ಕರ್ನಾಟಕ ರಾಜ್ಜ ಸರಕಾರ ಉಪ್ಪಾರ ಅಭಿವೃದ್ಧಿ ನಿಗಮ (ಸಚಿವ ಸಂಪುಟ ದರ್ಜೆ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ರಾಜ್ಜ ಸರಕಾರ ಆದೇಶ ಮಾಡಿ ದಸರಾ ಹಬ್ಬದ ಸಮಯದಲ್ಲಿ ಉಪ್ಪಾರ ಸಮುದಾಯಕ್ಕೆ ರಾಜ್ಜ ಸರಕಾರ ಭರ್ಜರಿ ಉಡುಗೊರೆ ಒಂದನ್ನು ನೀಡಿದೆ. ಗ್ರಾಮೀಣಾಭಿವೃದ್ಧಿ ಸಂಸ್ಥೆಗಳನ್ನು ಕಟ್ಟಿ ಗ್ರಾಮೀಣ ಭಾಗದ ಜನರ ಸೇವೆಯ ಜೋತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ನಿರತರಾಗಿದ್ದ ಭರಮಣ್ಣ. ಉಪ್ಪಾರ ಅವರಿಗೆ ಕಾಂಗ್ರೆಸ್ ಪಕ್ಷ ಉನ್ನತ ಹುದ್ದೆ ನೀಡಿದೆ.

ಭರಮಣ್ಣ.ಉಪ್ಪಾರ ಅವರು ಮೂಲತಃ ಮೂಡಲಗಿ ತಾಲೂಕಿನ ತುಕ್ಯಾನಹಟ್ಟಿ ಗ್ರಾಮದವರು. ಕನ್ನಡದಲ್ಲಿ ಎಮ್.ಎ ರಾಜ್ಯಶಾಸ್ತ್ರ ಅಧ್ಯಯನ ಮಾಡಿರುವ ಭರಮಣ್ಣ ಉಪ್ಪಾರ ಯುವ ರಾಜಕಾರಣಿಯಾಗಿ ಉಪ್ಪಾರ ಸಮುದಾಯದ ಜನರ ರಾಜ್ಯದ ಕಣ್ಮಣಿಯಾಗಿ ಕೆಲಸ ಕಾರ್ಯನಿರ್ವಹಿಸಲಿ ಸತೀಶ್ ಜಾರಕಿಹೊಳಿ ಅವರ ಆಪ್ತ ರಾಗಿರುವ ಭರಮಣ್ಣ ಉಪ್ಪಾರ. ಉಪ್ಪಾರ ಸಮುದಾಯದ ಜನರ ಕಷ್ಟ ದುಮ್ಮಾನಗಳಿಗೆ ಉಸಿರಾಗಿ ನಿಂತು ಅವರ ಕಷ್ಟ ಕಾರ್ಪಣ್ಣ್ಯಗಳಿಗೆ ಸ್ಪಂದಿಸಲಿ ಎಂದು ಅಭಿನಂದನೆಗಳು ತಿಳಿಸುತ್ತಾ. ವಿಜಯಪುರ ಜಿಲ್ಲೆಯಉಪ್ಪಾರ ಜನರ ಆಶಾಕಿರಣವಾಗಿ ಕೆಲಸ ಮಾಡಲಿ ಎಂದು ಜಿಲ್ಲೆಯ ಉಪ್ಪಾರ ಸಮುದಾಯದ ಆಶಯ. ಇದು ವರೆಗೂ ಉಪ್ಪಾರ ಅಭಿವೃದ್ಧಿ ಕೆಲಸ ವಿಜಯಪುರ ಜಿಲ್ಲೆಗೆ ಶೂನ್ಯ ಕೊಡುಗೆ ಆಗಿತ್ತು. ಈಗ ಜಿಲ್ಲೆಗೆ ಉಪ್ಪಾರ ಸಮುದಾಯದ ನೂತನ ಅಧ್ಯಕ್ಷರರಾಗಿ ಆಯ್ಕೆಯಾದ ಭರಮಣ್ಣ.ಉಪ್ಪಾರ ಅವರು ವಿಜಯಪುರ ಜಿಲ್ಲೆಯ ಉಪ್ಪಾರ ಸಮುದಾಯಕ್ಕೆ ಅವರ ಕಷ್ಟ ನೋವು ಕಾರ್ಪಣ್ಣ್ಯಗಳಿಗೆ ದಾರಿ ದೀಪವಾಗಲಿ ಎಂದು ವಿಜಯಪುರ ಜಿಲ್ಲೆಯ ಉಪ್ಪಾರ ಸಮುದಾಯದ ಆಶಯ ಆಗಿದೆ ಎಂದು ವರದಿಯಾಗಿದೆ.ವರದಿ. ಚಿದಾನಂದ ಬಿ ಉಪ್ಪಾರ. ವರದಿಗಾರರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿಉಪ್ಪಾರ ಸಿಂದಗಿ