ಜನಪದ ಕಥೆಗಳು, ಹಾಡುಗಳು, ನಾಟಕಗಳು ಮತ್ತು ಇತರ ಸಾಂಪ್ರದಾಯಿಕ ಅಭಿವ್ಯಕ್ತಿಗಳ ಮೂಲಕ ವ್ಯಕ್ತವಾಗುತ್ತದೆ – ಈರಣ್ಣ, ಹೂಗಾರ್.
ರೋಣ ಸ.26





ಜಾನಪದದಲ್ಲಿ ಹಾಸ್ಯ ಶೀರ್ಷಿಕೆಯ ಅಡಿಯಲ್ಲಿ ಕಾರ್ಯಕ್ರಮ ಆಯೋಚನೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಜಾನಪದದಲ್ಲಿ ಹಾಸ್ಯ ಕುರಿತು ಈರಣ್ಣ ಹೂಗಾರ್ ರವರು ಜಾನಪದದಲ್ಲಿ ಹಾಸ್ಯವು ಜನಪದ ಕಥೆಗಳು, ಹಾಡುಗಳು, ನಾಟಕಗಳು ಮತ್ತು ಇತರ ಸಾಂಪ್ರದಾಯಿಕ ಅಭಿವ್ಯಕ್ತಿಗಳ ಮೂಲಕ ವ್ಯಕ್ತವಾಗುತ್ತದೆ. ಇದು ಕೆಲವೊಮ್ಮೆ ವಿಡಂಬನೆ, ಲಘು ಮಾತು, ನಗೆ, ವ್ಯಂಗ್ಯ, ಅಥವಾ ವಿಪರೀತ ಸನ್ನಿವೇಶಗಳ ಮೂಲಕ ಸಾಮಾಜಿಕ ಟೀಕೆ, ಮನರಂಜನೆ, ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸಲು ಬಳಸಲ್ಪಡುತ್ತದೆ. ಎಂದು ಹಲವಾರು ಹಾಡು ಕಥೆಗಳ ಮೂಲಕ ಜನರನ್ನು ಮನರಂಜನೆ ಗೊಳಿಸಿದರು ರೋಣ ನಗರದ ಪ್ರತಿಷ್ಠೆ ಹೊಂದಿರುವ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ರೋಣ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಿಯ ಸೇವಾ ಯೋಜನಾ ಘಟಕದ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮವಾಗಿರುವ ಚಿಕ್ಕಮಣ್ಣೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ನಿಂಗಪ್ಪ ಸಿ. ಮಾದರರವರು ಕಾರ್ಯಕ್ರಮ ಉದ್ದೇಶಿಸಿ ಶಿಬಿರಾರ್ಥಿಗಳು ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಬಳಸುವಂತೆ ಹಾಗೂ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿವಿದ್ಯಾರ್ಥಿಗಳು ಏಳು ದಿನಗಳು ನಡೆಯುವ ಶಿಬಿರದಲ್ಲಿ ಗ್ರಾಮಸ್ಥರ ಮನೆ ಮನೆಗೆ ತೆರಳಿ ರಾಜ್ಯ ಮತ್ತು ಕೇಂದ್ರ ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಅವುಗಳ ಸದುಪಯೋಗ ಪಡಿಸಿ ಕೊಳ್ಳುವಂತೆ ತಿಳಿಸಿ. ಇಂಥಹ ವಿಶೇಷ ಶಿಬಿರಗಳು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವುದರಿಂದ ಶಿಬಿರದ ಪ್ರಯೋಜನ ಪಡೆದುಕೊಳ್ಳಿ. ಹಾಗೆಯೇ ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಸರಕಾರದಿಂದ ಹಾಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಲಭ್ಯವಾಗುವ ಮೂಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಅರಿವು ಮೂಡಿಸಿಬೇಕುಎಂದು ಮಾತನಾಡಿದರುಈ ಸಮಯದಲ್ಲಿ ವೇದಿಕೆಯ ಮೇಲೆ ಶ್ರೀ ಹನಮಪ್ಪ ಪಟ್ಟದ ಉಪಾಧ್ಯಕ್ಷರು,ಶ್ರೀ ಹನುಮಂತಪ್ಪ ರಾಚಣ್ಣವರಶ್ರೀ ಶರಣಪ್ಪ ಶಿ. ಕೊಟಗಿಶ್ರೀ ಬಸಲಿಂಗಪ್ಪ ಮೇಟಿಶ್ರೀ ಬಸನಗೌಡ ಎಸ್. ಪಾಟೀಲ,ಶ್ರೀ ತೇಜೇಸಾಬ ನದಾಥಶ್ರೀ ಬಸವರಾಜ ಹುಣಸಿಕಟ್ಟಿಶ್ರೀ ಶಿವಲಿಂಗಪ್ಪ ಮಾದರಶ್ರೀ ಮಹಾದೇವಪ್ಪ ಮಾದರಶ್ರೀ ನರಸಿದ್ದಪ್ಪ ಮಾದರಶ್ರೀ ತಾಯಪ್ಪ ದೊಡ್ಡಮನಿಶ್ರೀ ಸಿದ್ದಪ್ಪ ಮಾದರಶ್ರೀ ಮಲ್ಲನಗೌಡ ಕೆಂಚನಗೌಡ,ಶ್ರೀ ಶಿವಲಿಂಗಪ್ಪ ಮಾದರಶ್ರೀ ಯಲ್ಲಪ್ಪಗೌಡ ಹುಗ್ಗಿಶ್ರೀ ಮರಗಪ್ಪ ಮಾದರಶ್ರೀ ಬಸವರಾಜ ಅ. ವಾಲ್ಮೀಕಿ ಹಾಗೂ ಮಹಾವಿದ್ಯಾಲಯ ಆಡಳಿತಮಂಡಳಿ, ಪ್ರಾಚಾರ್ಯರು, ಉಪನ್ಯಾಸಕಬಳಗ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು. ಸಿಹಿ ಕಹಿ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ