ಆನೆಕಾಲು ರೋಗ ಮುಕ್ತಕ್ಕಾಗಿ ಜನ ಸಮೂದಾಯದಲ್ಲಿ ಪ್ರಸರಣಾ ಪ್ರಮಾಣ ಸಮೀಕ್ಷೆ – ರಕ್ತ ಲೇಪನ ಸಂಗ್ರಹ ಜಾಗೃಥಾ ಅಭಿಯಾನ.
ಅಮೀನಗಡ ಸ.27





ಹುನಗುಂದ ತಾಲೂಕಿನ ಅಮೀನಗಡದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಬಾಗಲಕೋಟ ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ಅಮೀನಗಡ ಪಟ್ಟಣ ಪಂಚಾಯತ ವಿವಿಧ ವಾರ್ಡಗಳಲ್ಲಿ ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮ ಅಂಗವಾಗಿ ಜನ ಸಮೂದಾಯದಲ್ಲಿ ಆನೆಕಾಲು ರೋಗ ಪ್ರಸರಣ ಸಮೀಕ್ಷೆ ರಾತ್ರಿ ರಕ್ತ ಲೇಪನ ಪರೀಕ್ಷೆ ಶಿಬಿರ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಆನೆಕಾಲು ರೋಗ ಭಯ ಬೇಡ ಜಾಗೃತಿ ಇರಲಿ ಜನ ಸಮೂದಾಯದಲ್ಲಿ ಆನೆಕಾಲು ರೋಗ ಹಬ್ಬುವಿಕೆಯ ಕುರಿತು ಸಮೀಕ್ಷೆ ರಾತ್ರಿ ರಕ್ತ ಲೇಪನ ಸಂಗ್ರಹ ಜನ ಜಾಗೃತಿ ಆನೆಕಾಲು ರೋಗ ಮುಕ್ತಕ್ಕಾಗಿ ಸಮೂದಾಯದಲ್ಲಿ ಪ್ರಸರಣಾ ಪ್ರಮಾಣ ಸಮೀಕ್ಷೆ ರಕ್ತ ಲೇಪನ ಸಂಗ್ರಹ ಕ್ಯೂಲೇಕ್ಷ್ ಸೊಳ್ಳೆಗಳು ಬಾದಿತರಿಗೆ ಕಚ್ಚಿ ಆರೋಗ್ಯವಂತರಿಗೆ ಹರಡುವುದು.

ಚಳಿ ಜ್ವರ ಮೈ ಕೈ ನೋವು ಹಲವು ದಿನಗಳ ನಂತರ ದೇಹದಲ್ಲಿ ಕಾಲುಗಳ ಊತ ವೃಷಣಗಳ ತೊಂದರೆ ಕಾಣಿಸಿ ಅಂಗವಿಕಲತೆಗೆ ಕಾರಣವಾಗಬಹುದು ಮುಂಜಾಗ್ರತೆ ಕೊಳಚೆ ನೀರು ಸಂಗ್ರಹ ತಪ್ಪಸಬೇಕು ಸೊಳ್ಳೆ ಪರದೆ ನಿರೋಧಕ ಬಳಸಬೇಕು ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಬಂದಾಗ ನಿಖರ ಮಾಹಿತಿ ನೀಡಿ ಸಹಕರಿಸಬೇಕು ಅಮೀನಗಡ ವಿವಿಧ ವಾರ್ಡಗಳಲ್ಲಿ ರಾತ್ರಿ ರಕ್ತ ಲೇಪನ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಯಿತು ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಹಂತದ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಪಟ್ಟಣದ ಮುಖಂಡರು ಯುವಕರು ಮಹಿಳೆಯರು, ಸ್ತ್ರೀ ಸಂಘದ ಸದಸ್ಯರು ಭಾಗವಹಿಸಿದ್ದರು.