“ಹೆಮ್ಮೆಯ ಆರೋಗ್ಯ ಸ್ಯೆನಿಕರು”…..

ಹೆಮ್ಮೆಯ ಆರೋಗ್ಯ ಸೈನಿಕರು




ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು
ಆರೋಗ್ಯ ನಿರೀಕ್ಷಣಾಧಿಕಾರಿಗಳು
ಮಾನವ ದೇಹ ಮನಸಿನ ಬಾಧಕ
ಸಾಂಕ್ರಾಮಿಕ ಅಸಾಂಕ್ರಾಮಿಕ ಕಾಯಿಲೆಗಳ
ಪ್ರತಿಬಂಧಕರು
ಸಾಂಕ್ರಾಮಿಕ ರೋಗ ಮದ್ದು ಕುಡಿಸುವರು
ಮಧು ಮೇಹ ಸಕ್ಕರೆ ರೋಗ ಬರದಂಗ
ಯೋಗ ಕಲಿಸುವರು
ದೇಹ ದಷ್ಟ ಪುಷ್ಠಿಗೆ ಸಮತೋಲ ಆಹಾರ
ಸೇವನೆ ಸಲಹೆ ನೀಡುವರು
ತಾಯಿ ಮಗು ಆರೋಗ್ಯ ಕಾಪಾಡಿ ಬಾಲ್ಯ
ವಿವಾಹ ಲಿಂಗ ತಾರತಮ್ಯ ತಡೆಯುವರು
ಮಕ್ಕಳ ಮಾರಕ ರೋಗಗಳ ತಡೆಗೆ ಲಸಿಕೆಗಳ
ಮಾಹಿತಿ ಒದಗಿಸುವರು
ಜನಸಂಖ್ಯೆ ನಿಯಂತ್ರಣ ವಂಕಿ ನಿರೋಧ
ಕುಟುಂಬ ಕಲ್ಯಾಣ ಸೌಲಭ್ಯ ಪಡೆಯಲು
ಸಲಹೆ ನೀಡುವರು
ಜನರಾರೋಗ್ಯ ಕಾಳಜಿ ದೇಶದ ಅಭಿವೃದ್ಧಿಗೆ
ಸಹಕರಿಸುವರು
ಜನರ ಆರೋಗ್ಯ ಸೇವೆಯೇ ನಮ್ಮ ಗುರಿ
ಎನ್ನುವರು
ಹದಿಹರಯದವರ ಸಮಸ್ಯೆಗಳಿಗೆ ಉತ್ತಮ
ಸಲಹೆ ಜೀವನ ಶೈಲಿಯ ಅಳವಡಿಕೆಗೆ ಮಹತ್ವ
ಸಾರುವರು
ಸೊಳ್ಳೆಗಳ ಕಡಿತ ಪ್ರಭಾವ ತಪ್ಪಿಸಲು
ಮುಂಜಾಗ್ರತೆಯೇ ಪ್ರಥಮ ಚಿಕಿತ್ಸೆಯ ಮುಖ್ಯ
ಎನ್ನುವರು
ಡೆಂಗ್ಯೂ ಚಿಕೂನ್ ಗುನ್ಯಾ ಮೆದಳು ಜ್ವರ
ಆನೆಕಾಲುರೋಗ ಬರದಂಗ ಜಾಗೃತಿ
ಮೂಡಿಸುವರು
ಕ್ಷಯ ಮುಕ್ತ ಭಾರತಕ್ಕಾಗಿ ಎರಡು ವಾರಕಿಂತ
ಅಧಿಕ ಕೆಮ್ಮು ಇದ್ದವರ ಕಫ ಪರೀಕ್ಷೆಗೆ
ಒಳಪಡಿಸಿ ಕುಟುಂಬ ಸಮಾಜ ಉತ್ತಮ
ಆರೋಗ್ಯಕ್ಕಾಗಿ ಶ್ರಮಿಸುವರು
ನಮ್ಮ ಆರೋಗ್ಯ ಇಲಾಖೆಯ ಸಮಗ್ರ
ಆರೋಗ್ಯ ಸೈನಿಕರು
ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ
ಅರಿವು ಜನ ಜಾಗೃತಿ ಬಿತ್ತಿ ದೇಶ ನಾಡ ಕೀರ್ತಿ
ವಿಶ್ವದೆಲ್ಲೆಡೆ ಆರೋಗ್ಯದ ಬೆಳಕು
ಬೆಳಗಿಸುವರು
ಸಮಗ್ರ ಆರೋಗ್ಯ ಸೈನಿಕರಿಗೆ ಮರೆಯದೆ
ಒಂದು ಸಲಾಂ ನಮ್ಮೆಲ್ಲರ ಕರ್ತವ್ಯವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ