ಸತತ ಮಳೆಯಿಂದ ಐತಿಹಾಸಿಕ ಹೂಡೆದ (ಗುಮ್ಮಟ) ಕುಸಿತ – ಗ್ರಾಮಸ್ಥರಿಂದ ಕ್ರಮಕ್ಕೆ ತೀವ್ರವಾಗಿ ಆಗ್ರಹಿಸಿದ್ದಾರೆ.
ಮಣುರ ಸ.28





ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಣುರ ಗ್ರಾಮದಲ್ಲಿ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಗ್ರಾಮದ ಐತಿಹಾಸಿಕ ದ್ವಾರ ಬಾಗಿಲಕ್ಕೆ ಹೊಂದಿ ಕೊಂಡ ಹೂಡೆದ ಗುಮ್ಮಟ ಕುಸಿತ ಗೊಂಡಿದೆ. ಗ್ರಾಮದ ತಡೆಗೋಡೆ ಮತ್ತು ಇನ್ನೊಂದು ಹೂಡೆದ ಗುಮ್ಮಟ ಕೂಡಾ ಸಿಥಿಲಾವಸ್ಥೆಯಲ್ಲಿದೆ. ಗ್ರಾಮದ ಒಳಗಡೆ ತಡೆ ಗೋಡೆ ಮತ್ತು ಹೂಡೆದ ಗುಮ್ಮಟದ ಹತ್ತಿರ ಪ್ರತಿ ದಿನಾಲೂ ಜನರು ಓಡಾಡುವ ರಸ್ತೆ ಯಾಗಿದ್ದು.
ಶಾಲಾ ಮಕ್ಕಳು ಕೂಡಾ ಇದೆ ತಡೆ ಗೋಡೆ ಹತ್ತಿರ ಹಾಯ್ದು ಹೋಗ ಬೇಕಾಗಿದ್ದು. ಯಾವ ಸಮಯದಲ್ಲಾದರೂ ಅನಾಹುತ ಸಂಭವಿಸುವುದು ಗೊತ್ತಿಲ್ಲಾ ಮಳೆಯಿಂದ ಪೂರ್ತಿ ನೆನೆದು ಹೋಗಿದೆ. ಯಾವ ಸಂದರ್ಭದಲ್ಲಾದರೂ ಕುಸಿಯಬಹುದು. ಮಣುರ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಗ್ರಾಮದ ಜನ ಪ್ರತಿನಿಧಿಗಳು. ಮತ ಕ್ಷೇತ್ರದ ಶಾಸಕರಲ್ಲಿ. ಅಗ್ರಹ ಪಡಿಸಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅನಾಹುತವಾಗದಂತೆ ಕ್ರಮ ಕೈಗೊಳ್ಳಲು ಆಗ್ರಹ ಪಡಿಸಿದ್ದಾರೆ.

ಸಂಬಂದಿಸಿದ ತಾಲೂಕ ಆಡಳಿತಕ್ಕೂ ಗ್ರಾಮಸ್ಥರು ಮನವಿ ಮಾಡಿ ಕೊಂಡಿದ್ದಾರೆ. ಸುಮಾರು ಐದು ನೂರು ವರ್ಷದ. ಐತಿಹಾಸಿಕ ಹಿನ್ನಲೆ ಯುಳ್ಳ ಆದಿಲ್ ಶಾಹಿ ಕಾಲದ ಸ್ಮಾರಕ ದ್ವಾರ ಬಾಗಿಲು ಮತ್ತು ತಡೆ ಗೋಡೆ ತುಂಬಾ ಹಳೆಯ ಕಾಲದ್ದು ಇದ್ದು ಇದರ ಪುನರುಜ್ಜೀವನ. ಕಲ್ಪಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.
ಗ್ರಾಮದ ಗ್ರಾಮಸ್ಥರಾದ ಭೀಮಣ್ಣ.ಬಸಪ್ಪ ಕನ್ನೊಳ್ಳಿ. ಗ್ರಾಮ ಪಂಚಾಯತ್ ಉಪಾಧ್ಯಕ್ಷರು. ಅಂಬಣ್ಣ ಧರ್ಮಣ್ಣ ಆನೆಗುಂದಿ. ರಾಜಶೇಖರ್ ರಾ. ಮಣುರ. ರಮೇಶ ಕುಮಸಗಿ. ವಸಂತ. ಲೆ. ರಾಠೋಡ್. ಗ್ರಾ.ಪಂ ಸದಸ್ಯರು. ಭೀಮರಾಯ ಹರಾನಾಳ. ಬಸವ ರಾಜ ವಾಲಿ. ಮುಸ್ತಾಫ್ ಮುಲ್ಲಾ. ಅಬ್ಬಾಸ್ ಅಲಿ ಬಾಗವಾನ್. ಹಾಗೂ ಗ್ರಾಮದ ಸಮಸ್ತ ಮುಖಂಡರು ಯುವಕರು ಆದಷ್ಟು ತೀವ್ರ ಗತಿಯಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹ ಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಿದಾನಂದ.ಬಿ ಉಪ್ಪಾರ.ಸಿಂದಗಿ